

ವಾಷಿಂಗ್ಟನ್: ಚೀನಾದ ಸ್ಪೈಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ ಆರೋಪದ ಮೇಲೆ ಎನ್ವಿಡಿಯಾ ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಇಂದು(ನ. 17) ಮೊದಲ ಬಾರಿಗೆ ಜೆನ್ಸನ್ ಹುವಾಂಗ್ ಹೇಳಿಕೆ ಬಿಡುಗಡೆ ಮಾಡಿದ್ದು, ಕಂಪನಿಯ ಆಡಳಿತ ಮಂಡಳಿ ಸಂಸ್ಥೆಯ ಹಿತದೃಷ್ಟಿಯಿಂದ ಇದು ಉತ್ತಮ ಎಂದು ಭಾವಿಸಿ ನನಗೆ ಸಿಇಒ ಆಗಿ ಮರಳಲು ಅವಕಾಶ ಕಲ್ಪಿಸಿದ್ರೆ, ಅದು ನನಗೆ ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಹುವಾಂಗ್ ಅವರು, ತಮ್ಮ ವೈಯಕ್ತಿಕ ಜೀವನದಲ್ಲಿ ಗಂಭೀರ ತಪ್ಪುಗಳನ್ನು ಮಾಡಿದ್ದು, ಮತ್ತು ಕಂಪನಿಯ ಆಡಳಿತ ಮಂಡಳಿಗೆ ಸಮಸ್ಯೆಗಳನ್ನು ಸೃಷ್ಟಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ಎನ್ವಿಡಿಯಾದಲ್ಲಿ ಪ್ರತಿಯೊಬ್ಬರಿಂದ ನಿರೀಕ್ಷಿಸಲಾದ ಮಾನದಂಡಗಳಿಗೆ ತಕ್ಕಂತೆ ಬದುಕಲಿಲ್ಲ, ನನ್ನ ವೈಯಕ್ತಿಕ ಜೀವನದಲ್ಲಿ ಗಂಭೀರ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ನನ್ನ ತಪ್ಪುಗಳನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ. ಮತ್ತು ಮಂಡಳಿಯ ಸ್ವತಂತ್ರ ತನಿಖೆಗೆ ಸಹಕರಿಸಲು ನಾನು ಬದ್ಧನಾಗಿದ್ದೇನೆ. ಹಾಗೆಯೇ ನಾನು ಸಿಇಒ ಆಗಿ ಮರಳಬೇಕೆಂದು ಕಂಪನಿಯ ಉದ್ಯೋಗಿಗಳು, ಹೂಡಿಕೆದಾರರು ಮತ್ತು ಗ್ರಾಹಕರಿಂದ ಕರೆಗಳು ಬರುತ್ತಿರುವುದನ್ನು ಗಮನಿಸಿದ್ದೇನೆ. ಮತ್ತು ಹಾಗೆ ಮರಳುವುದನ್ನು ತಾನು ಗೌರವವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ನಿರ್ಗಮಿಸಿದ ಬಳಿಕ, ಎನ್ವಿಡಿಯಾ ದ ಉದ್ಯೋಗಿಗಳು, ಹೂಡಿಕೆದಾರರು, ವ್ಯಾಪಾರ ಪಾಲುದಾರರು ಮತ್ತು ಗ್ರಾಹಕರಿಂದ ನಾನು ಸಿಇಒ ಆಗಿ ಮರಳಬೇಕೆಂಬ ಒತ್ತಾಯಗಳು ವ್ಯಾಪಕವಾಗಿ ವ್ಯಕ್ತವಾಗಿವೆ. ಕಂಪನಿಯು ಸಂಕೀರ್ಣ ತಂತ್ರಜ್ಞಾನ, ಮಾರುಕಟ್ಟೆ, ಸ್ಪರ್ಧಾತ್ಮಕ ಮತ್ತು ಭೌಗೋಳಿಕ-ರಾಜಕೀಯ ಸನ್ನಿವೇಶಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಅನೇಕರು ನೇರವಾಗಿ ನನ್ನನ್ನು ಸಂಪರ್ಕಿಸುತ್ತಿದ್ದಾರೆ.
ಎನ್‌ವಿಡಿಯಾ ಒಂದು ಅಪರೂಪದ, ಅಸಾಧಾರಣ ಕಂಪನಿಯಾಗಿದೆ. ನಮ್ಮ ಷೇರುದಾರರು, ಉದ್ಯೋಗಿಗಳು, ಕಂಪನಿ ಮತ್ತು ಅಮೆರಿಕದ ಹಿತದೃಷ್ಟಿಯಿಂದ ನನ್ನ ಮರಳುವಿಕೆ ಸೂಕ್ತ ಎಂದು ನಿರ್ದೇಶಕರ ಮಂಡಳಿ ನಿರ್ಧರಿಸಿದರೆ, ಈ ಕರೆಗಳಿಗೆ ಸ್ಪಂದಿಸಿ ಸಿಇಒ ಆಗಿ ಮರಳುವುದನ್ನು ನಾನು ಗೌರವವೆಂದು ಭಾವಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀನಾದ ಸ್ಪೈಯೊಂದಿಗೆ ವಿವಾಹೇತರ ಸಂಬಂಧಗಳನ್ನು ಹೊಂದಿರುವುದಾಗಿ ಒಪ್ಪಿಕೊಂಡ ಬಳಿಕ, ಹುವಾಂಗ್ ನವೆಂಬರ್ 12ರಂದು ಎನ್ವಿಡಿಯಾ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇನ್ನೂ ಇದು ರಾಷ್ಟ್ರೀಯ ಭದ್ರತೆಗೆ ಸಂಭವನೀಯ ಉಲ್ಲಂಘನೆಗೆ ಸಂಬಂಧಿಸಿದ ವಿಷಯವಾಗಿ ಅಮೆರಿಕದಲ್ಲಿ ತನಿಖೆ ನಡೆಯುತ್ತಿದೆ. ಡಿ. 01ರಂದು ಹುವಾಂಗ್ ಯುಎಸ್ ಹೌಸ್ ಸಮಿತಿಗಳ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).