ನನಗೆ ಈ ಶಾಲೆಯಲ್ಲಿ ಪ್ರಾಣ ಭಯವಿದೆ: ತರಗತಿಗೆ ಮಾರಕಾಸ್ತ್ರ ಹಿಡಿದು ಬಂದ ಮುಖ್ಯ ಶಿಕ್ಷಕಿ; ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​! Teacher With Knife

ತರಗತಿಗೆ ಚಾಕು ಹಿಡಿದು ಬಂದ ಮುಖ್ಯ ಶಿಕ್ಷಕಿ ಶಿಖಾ ಸಿಂಗ್
ತರಗತಿಗೆ ಚಾಕು ಹಿಡಿದು ಬಂದ ಮುಖ್ಯ ಶಿಕ್ಷಕಿ ಶಿಖಾ ಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ತರಗತಿಗೆ ಚಾಕು ಹಿಡಿದು ಬಂದ ಮುಖ್ಯ ಶಿಕ್ಷಕಿ
  • ತಮಗೆ ಪ್ರಾಣಭಯ ಇರುವುದರಿಂದ ಚಾಕು ಇಟ್ಟುಕೊಂಡಿರುವುದಾಗಿ ಹೇಳಿದ ಮುಖ್ಯ ಶಿಕ್ಷಕಿ ಶಿಖಾ ಸಿಂಗ್
  • ಆಕೆಗೆ ಮಾನಸಿಕ ಕಾಯಿಲೆ ಇರುವುದಾಗಿ ತಿಳಿಸಿದ ಪತಿ
ಕೌಶಾಂಬಿ: ಉತ್ತರ ಪ್ರದೇಶ ರಾಜ್ಯದ ಕೌಶಾಂಬಿಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿ (Teacher With Knife) ಯೊಬ್ಬರು ತರಗತಿಗೆ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿರುವ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ಥಳೀಯ ಶಿಕ್ಷಣಾಧಿಕಾರಿಗಳು ಕೂಡಲೇ ಶಾಲೆಗೆ ಬಂದು ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ನನಗೆ ಈ ಶಾಲೆಯಲ್ಲಿ ಪ್ರಾಣ ಭಯವಿದೆ!

ಹೀಗೆ ಶಿಕ್ಷಕಿ ಶಾಲಾ ಆವರಣದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅಡ್ಡಾಡುವುದನ್ನು ನೋಡಿದ ಸ್ಥಳೀಯ ನಿವಾಸಿಗಳು ಶಿಕ್ಷಣಾಧಿಕಾರಿಗಳಲ್ಲಿ ದೂರನ್ನು ನೀಡಿದ್ದಾರೆ. ಸಾರ್ವಜನಿಕರ ದೂರನ್ನು ದಾಖಲಿಸಿಕೊಂಡ ಅಧಿಕಾರಿಗಳು ಕೂಡಲೇ ಶಾಲೆಗೆ ಬಂದು ಶಿಕ್ಷಕಿಯನ್ನು ವಿಚಾರಣೆಗೆ ಒಳ ಪಡಿಸಿದ್ದಾರೆ. 
ಶಿಖಾ ಸಿಂಗ್​ ಎಂದು ಗುರುತಿಸಲಾದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನನಗೆ ಈ ಶಾಲೆಯಲ್ಲಿ ಪ್ರಾಣ ಭೀತಿಯಿದೆ. ಈ ಕುರಿತು ನಾನು ನಿಮಗೆ ಈಗಾಗಲೇ ತಿಳಿಸಿದ್ದೆನೆ. ನನ್ನ ಪ್ರಾಣ ರಕ್ಷಣೆಗಾಗಿ ಇವುಗಳನ್ನು ನನ್ನ ಜೊತೆ ಇಟ್ಟುಕೊಂಡಿದ್ದೆನೆಂದು ಶಿಖಾ ಸಿಂಗ್​ ಬಿಇಒ ನೀರಜ್​ ಉಮಾರಾವ್​ಗೆ ತಿಳಿಸಿದ್ದಾರೆ. 

ಶಿಖಾ ವಿರುದ್ಧ ಕ್ರಮಕ್ಕೆ ಆಗ್ರಹ!

ಈ ಘಟನೆ ಶುಕ್ರವಾರ (ಜು.17) ಶಾಲಾ ಆವರಣದಲ್ಲಿ ಶಿಖಾ ಸಿಂಗ್​ ಇಬ್ಬರು ಪಾಲಕರಿಗೆ ಚಾಕು ತೋರಿಸಿದ್ದನ್ನು ಸ್ಥಳೀಯರು ನೋಡಿದ್ದು, ದೂರನ್ನು ನೀಡಿದ್ದಾರೆ. ನಂತರ ಬಿಇಒ ನೀರಜ್​ ಉಮಾರಾವ್​ ಈ ಶಿಖಾ ಸಿಂಗ್​ಳನ್ನು ವಿಚಾರಣೆ ಮಾಡಿದ್ದಾರೆ.
ಖಾಸಗಿ ವಿಷಯದ ಸಲುವಾಗಿ ಶಾಲೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವುದು ಸರಿಯಲ್ಲ ಎಂದು ನಿರ್ಧರಿಸಿ ಶಿಖಾ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಶಿಕ್ಷಕಿ ಮನೆಯಲ್ಲಿ ವಿಚಾರಣೆ ನಡೆಸಿದಾಗ, ಶಿಖಾ ಸಿಂಗ್​ಗೆ ಮಾನಸಿಕ ಖಾಯಿಲೆ ಇದ್ದು, ಒಮ್ಮಮ್ಮೊ ಆಕೆ ಈ ರೀತಿ ಮಾಡುತ್ತಾಳೆಂದು ಆಕೆಯ ಪತಿ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾನೆಂದು ಹೇಳಲಾಗುತ್ತಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಶಾಲೆಯಲ್ಲಿ ಚಾಕು ಹಿಡಿದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಸೆಕ್ಷನ್​ ತುಂಬಿಸುವ ಕೆಲಸಕ್ಕೆ ಇಳಿದಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕಿಗೆ ರಕ್ಷಣೆ ಇಲ್ಲದ ಮೇಲೆ ಅಲ್ಲಿ ಮಕ್ಕಳನ್ನು ಯಾವ ಧೈರ್ಯದ ಮೇಲೆ ಕಳುಹಿಸಬೇಕೆಂದು? ಒಬ್ಬ ಸೋಷಿಯಲ್​ ಮೀಡಿಯಾ ಬಳಕೆದಾರರು ಪ್ರಶ್ನಿಸಿದ್ದಾರೆ.
ಹೀಗೆ ಶಾಲೆಗೆ ಮಾರಕಾಸ್ತ್ರಗಳನ್ನು ಹಿಡಿದು ಶಿಕ್ಷಕರು ತರಗತಿಗೆ ಬಂದರೆ, ಆ ಮಕ್ಕಳು ಅದು ಯಾವ ಮೌಲ್ಯಯುತ ಶಿಕ್ಷಣವನ್ನು ಕಲಿಯಲು ಸಾಧ್ಯ? ಎಂದು ಇನ್ನೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕಿಗೆ ತಲೆ ಸರಿಯಿಲ್ಲ ಎಂದರೆ ಕೂಡಲೇ ಕೆಲಸದಿಂದ ತೆಗೆದುಹಾಕಿ, ಅದನ್ನು ಬಿಟ್ಟು ವರ್ಗಾವಣೆ ಎನ್ನುವ ತೆಪೆ ಹಚ್ಚೋ ಕೆಲಸ ಮಾಡದಿರಿ ಎಂದು ಮತ್ತೊಬ್ಬರು ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net