ಜೈಲಿನಲ್ಲಿದ್ದ 'ಬಿಕಿನಿ ಕಿಲ್ಲರ್' ಚಾರ್ಲ್ಸ್ ಶೋಭರಾಜ್ ಪ್ರೇಯಸಿಗೆ ಮನೆಯೂಟ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಸ್ಫೋಟಕ ಸಂಗತಿ..! Sonia Gandhi

1976ರಲ್ಲಿ ದೆಹಲಿಯಲ್ಲಿ ಚಾರ್ಲ್ಸ್ ಶೋಭರಾಜ್ ಬಂಧನಕ್ಕೊಳಗಾದಾಗ, ಆತನೊಂದಿಗೆ ಮೂವರು ಯುವತಿಯರೂ ಇದ್ದರು. ಕೆನಡಾದ ಕ್ವಿಬೆಕ್ ಮೂಲದ ಮತ್ತು ಶೋಭರಾಜ್‌ನ ಪ್ರೇಯಸಿಯಾಗಿದ್ದ ಮೇರಿ-ಆಂಡ್ರೆ ಲೆಕ್ಲರ್ಕ್, ಬ್ರಿಟನ್‌ನ ಹ್ಯಾಂಪ್‌ಶೈರ್ ಮೂಲದ ಬಾರ್ಬರಾ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಸಿಡ್ನಿಯ ನರ್ಸ್ ಮೇರಿ ಎಲೆನ್ ಎಥರ್ ಎಂಬುವವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
Sonia Gandhi
ಜೈಲಿನಲ್ಲಿದ್ದ 'ಬಿಕಿನಿ ಕಿಲ್ಲರ್' ಚಾರ್ಲ್ಸ್ ಶೋಭರಾಜ್ ಪ್ರೇಯಸಿಗೆ ಮನೆಯೂಟ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಸ್ಫೋಟಕ ಸಂಗತಿ..!
Published on: 

ನವದೆಹಲಿ: ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ( Sonia Gandhi ) ಅವರು "ಬಿಲಾಗಿಂಗ್ ಎ ಜರ್ನಿ ಆಫ್ ಲವ್" (Bilogging a Journey of Love) ಎಂಬ ಶೀರ್ಷಿಕೆಯಲ್ಲಿ ತಮ್ಮ ಆತ್ಮಕಥೆ ಬಿಡುಗಡೆ ಮಾಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಉಲ್ಲೇಖಿಸಿರುವ ಅನೇಕ ಸಂಗತಿಗಳು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದೀಗ ಮತ್ತೊಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಅದೇನೆಂದರೆ, ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಕುಖ್ಯಾತ ಸರಣಿ ಹಂತಕ (Serial Killer) ಚಾರ್ಲ್ಸ್ ಶೋಭರಾಜ್‌ನ ಪ್ರೇಯಸಿಗೆ ತಮ್ಮ ಮನೆಯೂಟ ಊಟ ತಲುಪಿಸಿದ್ದಾಗಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ. ಇತಿಹಾಸದ ಪುಟಗಳಲ್ಲಿ ಅಡಗಿದ್ದ ಈ ಅಪರೂಪದ ಘಟನೆಯು ಈಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಂಯುಕ್ತ ವಿರೋಧ ಪಕ್ಷಗಳ ಒಕ್ಕೂಟವಾದ ಜನತಾ ಪಕ್ಷವು ಅಧಿಕಾರಕ್ಕೆ ಬಂದಿತು. ಇದರಿಂದಾಗಿ ಇಂದಿರಾ ಗಾಂಧಿ ಅವರು ತಿಹಾರ್ ಜೈಲಿನಲ್ಲಿ ಸುಮಾರು ಒಂದು ವಾರ ಕಳೆಯಬೇಕಾಯಿತು. ಈ ಅವಧಿಯಲ್ಲಿ, ಪ್ರತಿದಿನ ಜೈಲಿಗೆ ಭೇಟಿ ನೀಡುತ್ತಿದ್ದೆ ಎಂಬ ಮಾಹಿತಿಯನ್ನು ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ.

Also Read
ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ನೇಪಾಳ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​ ಕೊಟ್ಟ ಬಿಕಿನಿ ಕಿಲ್ಲರ್ ಚಾರ್ಲ್ಸ್​ ಶೋಭರಾಜ್!​
Sonia Gandhi

"ನನ್ನ ಅತ್ತೆಯವರ ವಿನಂತಿಯ ಮೇರೆಗೆ, ಜೈಲಿನಲ್ಲಿದ್ದ ಮತ್ತೊಬ್ಬ ಯುವ ಮಹಿಳಾ ಕೈದಿ ಮತ್ತು ಮೂವರು ಮಹಿಳಾ ಕಾವಲುಗಾರರಿಗೂ ಸಾಕಾಗುವಷ್ಟು ಊಟವನ್ನು ನಾನು ತಯಾರಿಸಿ ತೆಗೆದುಕೊಂಡು ಹೋಗಬೇಕಾಯಿತು. ಆ ಮಹಿಳಾ ಕೈದಿ ಆಸ್ಟ್ರೇಲಿಯಾ ಮೂಲದವಳಾಗಿದ್ದು, ಥೈಲ್ಯಾಂಡ್, ನೇಪಾಳ ಮತ್ತು ಭಾರತದಲ್ಲಿ ಹಲವಾರು ಪ್ರವಾಸಿಗರನ್ನು ಹತ್ಯೆಗೈದ ಅಪರಾಧಿಯಾಗಿದ್ದ ಕುಖ್ಯಾತ ಚಾರ್ಲ್ಸ್ ಶೋಭರಾಜ್‌ನ ಸಹಚರೆಯಾಗಿದ್ದಳು" ಎಂದು ಉಲ್ಲೇಖಿಸಿದ್ದಾರೆ. ಆದರೆ ಆ ಮಹಿಳೆಯ ಹೆಸರನ್ನು ಬಹಿರಂಗಪಡಿಸದೆ ಕೇವಲ 'ಆಸ್ಟ್ರೇಲಿಯಾದ ಹುಡುಗಿ' ಎಂದು ಮಾತ್ರ ಬರೆದಿದ್ದಾರೆ.

1976ರಲ್ಲಿ ದೆಹಲಿಯಲ್ಲಿ ಚಾರ್ಲ್ಸ್ ಶೋಭರಾಜ್ ಬಂಧನಕ್ಕೊಳಗಾದಾಗ, ಆತನೊಂದಿಗೆ ಮೂವರು ಯುವತಿಯರೂ ಇದ್ದರು. ಕೆನಡಾದ ಕ್ವಿಬೆಕ್ ಮೂಲದ ಮತ್ತು ಶೋಭರಾಜ್‌ನ ಪ್ರೇಯಸಿಯಾಗಿದ್ದ ಮೇರಿ-ಆಂಡ್ರೆ ಲೆಕ್ಲರ್ಕ್, ಬ್ರಿಟನ್‌ನ ಹ್ಯಾಂಪ್‌ಶೈರ್ ಮೂಲದ ಬಾರ್ಬರಾ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಸಿಡ್ನಿಯ ನರ್ಸ್ ಮೇರಿ ಎಲೆನ್ ಎಥರ್ ಎಂಬುವವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಈ ಮೂವರ ಪೈಕಿ 1978ರ ಡಿಸೆಂಬರ್‌ನಲ್ಲಿ ತಿಹಾರ್ ಜೈಲಿನಲ್ಲಿದ್ದವರು ಬಹುತೇಕ ಶೋಭರಾಜ್‌ನ ಪ್ರೇಯಸಿ ಮೇರಿ-ಆಂಡ್ರೆ ಲೆಕ್ಲರ್ಕ್ ಆಗಿದ್ದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ.

ಫ್ರೆಂಚ್ ಪ್ರಜೆ ಜೀನ್-ಲುಕ್ ಸೊಲೊಮನ್ ಕೊಲೆ ಪ್ರಕರಣದಲ್ಲಿ 1978ರ ಜುಲೈನಲ್ಲಿ ಲೆಕ್ಲರ್ಕ್ ಖುಲಾಸೆಗೊಂಡಿದ್ದರೂ, ಮತ್ತೊಂದು ಕೊಲೆ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದ ಕಾರಣ ಆಕೆ ತಿಹಾರ್ ಜೈಲಿನಲ್ಲೇ ಉಳಿದಿದ್ದಳು. ನಂತರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಆಕೆಗೆ ಮಾನವೀಯತೆಯ ಆಧಾರದ ಮೇಲೆ 1983ರ ಜುಲೈನಲ್ಲಿ ಕೆನಡಾಕ್ಕೆ ಮರಳಲು ಅನುಮತಿ ನೀಡಲಾಯಿತು ಮತ್ತು 1984ರಲ್ಲಿ ಆಕೆ ಮೃತಪಟ್ಟಳು.

ಇನ್ನು ಸೋನಿಯಾ ಗಾಂಧಿ ಅವರು ತಮ್ಮ ಪುಸ್ತಕದಲ್ಲಿ ಆಕೆಯನ್ನು 'ಆಸ್ಟ್ರೇಲಿಯಾ ಮಹಿಳೆ' ಎಂದು ಉಲ್ಲೇಖಿಸಲು ಒಂದು ಪ್ರಮುಖ ಕಾರಣವಿದೆ. ಚಾರ್ಲ್ಸ್ ಶೋಭರಾಜ್ ಜತೆಗಿದ್ದ ಸಮಯದಲ್ಲಿ ಲೆಕ್ಲರ್ಕ್, ತಾವು ಹತ್ಯೆಗೈದ ಪ್ರವಾಸಿಗರ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ಪ್ರಯಾಣಿಸುತ್ತಿದ್ದಳು. ಅವುಗಳಲ್ಲಿ ಆಸ್ಟ್ರೇಲಿಯಾ ಪ್ರಜೆಗಳ ಪಾಸ್‌ಪೋರ್ಟ್‌ಗಳೂ ಸೇರಿದ್ದವು. ಇದೇ ಕಾರಣದಿಂದಾಗಿ ಜೈಲಿನ ಸಿಬ್ಬಂದಿ ಮತ್ತು ಇತರರು ಆಕೆಯನ್ನು ಆಸ್ಟ್ರೇಲಿಯಾ ಮೂಲದವಳೆಂದು ತಪ್ಪಾಗಿ ಭಾವಿಸಿದ್ದರು ಎನ್ನಲಾಗಿದೆ.

Also Read
ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್​ನಿಂದ ಸ್ಫೂರ್ತಿ: 300ಕ್ಕೂ ಹೆಚ್ಚು ಲಕ್ಷುರಿ ಹೋಟೆಲ್‌ಗಳಿಗೆ ನಾಮ ಹಾಕಿದ್ದ ವೃದ್ಧ ಅರೆಸ್ಟ್​! Charles Sobhraj
Sonia Gandhi

ಚಾರ್ಲ್ಸ್ ಶೋಭರಾಜ್‌ ಯಾರು?

ಚಾರ್ಲ್ಸ್ ಶೋಭರಾಜ್ 1970ರ ದಶಕದಲ್ಲಿ ಏಷ್ಯಾದಾದ್ಯಂತ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸರಣಿ ಕೊಲೆ ಹಾಗೂ ವಂಚನೆಗಳನ್ನು ಮಾಡಿದ್ದ ಒಬ್ಬ ಕುಖ್ಯಾತ ಅಂತಾರಾಷ್ಟ್ರೀಯ ಸರಣಿ ಹಂತಕ, ಕಳ್ಳ ಮತ್ತು ವಂಚಕ. ನಕಲಿ ಗುರುತುಗಳನ್ನು ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ಹಲವು ಬಾರಿ ಜೈಲಿನಿಂದ ತಪ್ಪಿಸಿಕೊಳ್ಳುತ್ತಿದ್ದ ಈತನ ಚಾಣಾಕ್ಷತನದಿಂದಾಗಿ ಈತನಿಗೆ 'ದಿ ಸರ್ಪೆಂಟ್' ಹಾಗೂ 'ಬಿಕಿನಿ ಕಿಲ್ಲರ್' ಎಂಬ ಹೆಸರುಗಳು ಬಂದಿದ್ದವು. ಥಾಯ್ಲೆಂಡ್, ಭಾರತ ಮತ್ತು ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ಕನಿಷ್ಠ 12ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಈತನ ಮೇಲಿದ್ದು, ಭಾರತದ ತಿಹಾರ್ ಜೈಲಿನಲ್ಲಿ ದೀರ್ಘಕಾಲ ಶಿಕ್ಷೆ ಅನುಭವಿಸಿದ ಬಳಿಕ ನೇಪಾಳದಲ್ಲೂ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈತನನ್ನು 2022ರಲ್ಲಿ ವಯೋಸಹಜ ಕಾರಣಗಳಿಗಾಗಿ ಜೈಲಿನಿಂದ ಬಿಡುಗಡೆ ಮಾಡಿ ಫ್ರಾನ್ಸ್‌ಗೆ ಗಡಿಪಾರು ಮಾಡಲಾಗಿದೆ, (ಏಜೆನ್ಸೀಸ್​).