ನಾನು ಗರ್ಭಿಣಿ ಜಾಮೀನು ಕೊಡಿ: TCS ನಿದಾ ಖಾನ್ಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ! TCS Nida Khan
ನಿದಾಗೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾಸಿಕ್ನ ಟಾಟಾ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಬಲವಂತದ ಮತಾಂತರ ಪ್ರಕರಣ
ನಾನು ಗರ್ಭಿಣಿ ಜಾಮೀನು ನೀಡಿ ಎಂದು ಕೋಡಿದ್ದ ಆರೋಪಿ ನಿದಾ ಖಾನ್
ನಿದಾಗೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ
ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಬಲವಂತದ ಮತಾಂತರ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿದಾ ಖಾನ್ (TCS Nida Khan) ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡಿಸಿದ ನ್ಯಾಯಾಲಯ, ಮಧ್ಯಂತರ ಜಾಮೀನನ್ನು ನೀಡಲು ನಿರಾಕರಿಸಿ ವಿಚಾರಣೆಯನ್ನು ಏಪ್ರಿಲ್ 27 ಕ್ಕೆ ಮುಂದೂಡಿದೆ.
ಲೈಂಗಿಕ ದೌರ್ಜನ್ಯ ನಡೆಸಿ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಖಾನ್ ಮೇಲೆ ದೂರು ದಾಖಲಾಗುತ್ತಿದಂತೆ, ನಿದಾ ನಾಸಿಕ್ನ ನ್ಯಾಯಾಲಯದಲ್ಲಿ, ತಾನು ಗರ್ಭಿಣಿಯಾಗಿದ್ದು, ನನ್ನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನನ್ನು ನೀಡಬೇಕಾಗಿ ಕೋರಿದ್ದರು.
ನಿದಾ ಟಿಸಿಎಸ್ನಲ್ಲಿ ಕೆಲಸ ಮಾಡುತ್ತಿಲ್ಲ, ಹಾಗೂ ಅವಳು ಬಿಪಿಓ ನಲ್ಲಿ ಕೆಲಸ ಮಾಡಿದ್ದಳೇ ಹೊರತು ಎಚ್ಆರ್ ವಿಭಾಗದಲ್ಲಿ ಕಾರ್ಯನಿರ್ವಹಿಸಿಲ್ಲ. ಮಿಗಿಲಾಗಿ ಆಕೆ ಗರ್ಭ ಧರಿಸಿರುವ ಕಾರಣ ಜಾಮೀನನ್ನು ನೀಡಿ ಎಂದು ನಿದಾ ಪರ ವಕೀಲರು ನ್ಯಾಯಪೀಠವನ್ನು ಕೇಳಿಕೊಂಡರು.
ನಿದಾ ಪ್ರಮುಖ ಆರೋಪಿ
ಅದರೆ ಈ ಅರ್ಜಿಗೆ ವಿರೋಧ ವ್ಯಕ್ತ ಪಡಿಸಿದ ಪೊಲೀಸರು, ಈ ಪ್ರಕರಣದಲ್ಲಿ ನಿದಾ ಖಾನ್ ಪ್ರಮುಖ ಆರೋಪಿಯಾಗಿದ್ದಾಳೆ. ಅದರಲ್ಲೂ ಈ ಪ್ರಕರಣದಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ಅನ್ವಯ ದೂರನ್ನು ದಾಖಲಿಸಿಕೊಂಡಿದ್ದೆವೆ.
ತನಿಖೆ ನಡೆಯುತ್ತಿರುವಾಗ ನ್ಯಾಯಾಲಯ ಜಾಮೀನನ್ನು ನೀಡಿದರೆ ಆರೋಪಿ ತಲೆ ಮರೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೇ ನಮಗೆ ಈ ನಿದಾ ಖಾನ್ ಖಂಡಿತ ತಪ್ಪು ಮಾಡಿದ್ದಾಳೆ ಎಂದು ತಿಳಿದಿದೆ. ಕೆಲವೇ ಸಮಯದಲ್ಲಿ ತನಿಖೆ ಮುಗಿಯಲಿದ್ದು, ಆಗ ಇವಳ ನಿಜ ರೂಪ ಹೊರಕ್ಕೆ ಬರಲಿದೆ ಎಂದು ಹೇಳಿದರು,(ಏಜನ್ಸೀಸ್).