ರಷ್ಯಾ ನೆಲದಲ್ಲಿ ಭಾರತೀಯ ಸೈನಿಕರು; ಭಾರತಕ್ಕೆ ಬರಲಿದೆ ರಷ್ಯಾದ ನೌಕಾಪಡೆ: ಏನಿದು RELOS ಒಪ್ಪಂದ? ಇದರಿಂದ ಭಾರತಕ್ಕೇನು ಲಾಭ? RELOS Agreement

ಭಾರತ ಮತ್ತು ರಷ್ಯಾ ನಡುವೆ RELOS ಒಪ್ಪಂದ
ಭಾರತ ಮತ್ತು ರಷ್ಯಾ ನಡುವೆ RELOS ಒಪ್ಪಂದ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ರಷ್ಯಾ ನಡುವೆ RELOS ಒಪ್ಪಂದ
  • ಈ ಒಪ್ಪಂದ ಜಾರಿಯಾದರೆ ಭಾರತೀಯ ಸೇನೆ ರಷ್ಯಾಗೆ; ರಷ್ಯಾ ಸೇನೆ ಭಾರತದಲ್ಲಿ ಕಾರ್ಯ ನಿರ್ವಹಣೆ
  • ಅಮೆರಿಕ ಮತ್ತು ಪಾಕಿಸ್ತಾನದ ಸಂಬಂಧ ಉತ್ತಮವಾದ ಕಾರನ ಈ ಒಪ್ಪಂದ ಜಾರಿ ಸಾಧ್ಯತೆ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ, ಪಾಕಿಸ್ತಾನದ ಮೇಲೆ ವಿಶೇಷ ಆಸಕ್ತಿವಹಿಸುತ್ತಿರುವ ಕಾರಣ, ಈದೀಗ ಭಾರತ ಮತ್ತು ರಷ್ಯಾ ವಿನೂತನ ಪ್ರಯೋಗ ಒಂದಕ್ಕೆ ಮುಂದಾಗಿದೆ.ಈ ಪ್ರಯೋಗವು ಭಾರತದ ಮಟ್ಟಕ್ಕೆ ಹೊಸದಾಗಿದ್ದು, ಈ ರಕ್ಷಣಾ ಒಪ್ಪಂದಂತೆ ಉಭಯ ದೇಶಗಳ ಸೇನಾ ತುಕಡಿ, ಯುದ್ಧನೌಕೆ ಮತ್ತು ಯುದ್ಧ ವಿಮಾನಗಳು ನಿಯೋಜನೆಗೊಳ್ಳಲಿವೆ ಎಂದು ತಿಳಿದು ಬಂದಿದೆ.
ಲಾಜಿಸ್ಟಿಕ್ಸ್ ಬೆಂಬಲದ ಪರಸ್ಪರ ವಿನಿಮಯ (RELOS Agreement) ಎನ್ನುವ ಒಪ್ಪಂದವನ್ನು ಭಾರತ ಮತ್ತು ರಷ್ಯಾ ಫೆಬ್ರವರಿ 18, 2025 ರಲ್ಲಿ ಒಪ್ಪಿಕೊಂಡಿದ್ದು, ಈ ಒಪ್ಪಂದ ಸಮರ್ಪಕವಾಗಿ ಜಾರಿಗೊಂಡರೆ ರಷ್ಯಾದ ಸೈನಿಕರು ಭಾರತದಲ್ಲಿ, ಹಾಗೂ ಭಾರತದ ಸೈನಿಕರು ರಷ್ಯಾದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಅಮೆರಿಕ ಮತ್ತು ಇರಾನ್​​ ನಡುವಿನ ಶಾಂತಿ ಒಪ್ಪಂದ ಏರ್ಪಡಿಸುತ್ತಾ, ತಾನೊಂದು ಬಲಾಢ್ಯ ದೇಶವೆಂದು ತೋರಿಸಿ ಕೊಳ್ಳುತ್ತಿರುವ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಭಾರತ ಮತ್ತು ರಷ್ಯಾ ಈ ಒಪ್ಪಂದ ಮಾಡಿಕೊಂಡಿದ್ದವು ಎಂದು ಹೇಳಲಾಗುತ್ತಿದೆ.
ಈ ಒಪ್ಪಂದದ ಪ್ರಕಾರ ಉಭಯ ದೇಶಗಳ 3,000 ಸೈನಿಕರು ಮತ್ತು 10 ಯುದ್ಧವಿಮಾನ ಹಾಗೂ 5 ಯುದ್ಧ ನೌಕೆಗಳು, ವಿದೇಶಿ ನೆಲದಲ್ಲಿ 5 ವರ್ಷಗಳ ಮಟ್ಟಿಗೆ ಕಾರ್ಯನಿರ್ವಹಿಸಬಹುದೆಂದು ನಮೂದಿಸಲಾಗಿದೆ.

ಏನಿದು RELOS ಒಪ್ಪಂದ?

ಭಾರತ ಮತ್ತು ರಷ್ಯಾ ನಡುವಿನ RELOS (Reciprocal Exchange of Logistics Support) ಒಪ್ಪಂದವು ಉಭಯ ದೇಶಗಳ ರಕ್ಷಣಾ ಪಡೆಗಳ ನಡುವಿನ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲಕ್ಕೆ ಸಂಬಂಧಿಸಿದ ಪ್ರಮುಖ ಒಪ್ಪಂದವಾಗಿದೆ. ಈ ಒಪ್ಪಂದದ ಅನ್ವಯ, ಭಾರತ ಮತ್ತು ರಷ್ಯಾದ ಯುದ್ಧನೌಕೆಗಳು ಹಾಗೂ ಮಿಲಿಟರಿ ವಿಮಾನಗಳು ಪರಸ್ಪರರ ಮಿಲಿಟರಿ ನೆಲೆಗಳನ್ನು (Base), ಇಂಧನ ಮರುಪೂರಣ (Refuelling), ಬಿಡಿಭಾಗಗಳ ಪೂರೈಕೆ, ದುರಸ್ತಿ ಮತ್ತು ವಿಶ್ರಾಂತಿಯಂತಹ ಸೌಲಭ್ಯಗಳಿಗಾಗಿ ಬಳಸಿಕೊಳ್ಳಬಹುದಾಗಿದೆ.
2026ರ ಹೊತ್ತಿಗೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಈ ಒಪ್ಪಂದವು ಪ್ರಮುಖವಾಗಿ ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತದ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಒಪ್ಪಂದವು ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವುದಲ್ಲದೆ, ಸಮುದ್ರದಲ್ಲಿ ಜಂಟಿ ಸಮರಭ್ಯಾಸಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಈ RELOS ನಿಂದ ಭಾರತಕ್ಕೇನು ಲಾಭ?

ಈ ಒಪ್ಪಂದದ ಮೂಲಕ ಭಾರತೀಯ ನೌಕಾಪಡೆ ಮತ್ತು ವಾಯುಪಡೆಗೆ ರಷ್ಯಾದ ಮಿಲಿಟರಿ ನೆಲೆಗಳನ್ನು ಬಳಸಿಕೊಳ್ಳುವ ಅವಕಾಶ ಸಿಗುವುದರಿಂದ, ಹಿಂದೂ ಮಹಾಸಾಗರ ಮಾತ್ರವಲ್ಲದೆ ಆರ್ಕ್ಟಿಕ್ ಪ್ರದೇಶದವರೆಗೂ ಭಾರತದ ಮಿಲಿಟರಿ ವ್ಯಾಪ್ತಿ ವಿಸ್ತರಿಸಲು ಸಹಕಾರಿಯಾಗುತ್ತದೆ.
ಎರಡನೆಯದಾಗಿ, ಯುದ್ಧನೌಕೆಗಳಿಗೆ ಇಂಧನ ಮರುಪೂರಣ (Refuelling) ಮತ್ತು ದುರಸ್ತಿ ಸೌಲಭ್ಯಗಳು ಪರಸ್ಪರ ದೇಶಗಳಲ್ಲಿ ಲಭ್ಯವಾಗುವುದರಿಂದ ಕಾರ್ಯಾಚರಣೆಯ ವೆಚ್ಚ ಕಡಿಮೆಯಾಗುತ್ತದೆ ಮತ್ತು ತುರ್ತು ಸಂದರ್ಭಗಳಲ್ಲಿ ಸಮಯದ ಉಳಿತಾಯವಾಗುತ್ತದೆ.
ಮೂರನೆಯದಾಗಿ, ಇದು ಉಭಯ ದೇಶಗಳ ನಡುವೆ ಜಂಟಿ ಮಿಲಿಟರಿ ಸಮರಭ್ಯಾಸಗಳು ಸುಗಮಗೊಳಿಸುತ್ತದೆ ಮತ್ತು ರಕ್ಷಣಾ ತಂತ್ರಜ್ಞಾನ ಹಾಗೂ ಮಾಹಿತಿಯ ವಿನಿಮಯಕ್ಕೆ ವೇದಿಕೆಯನ್ನು ಕಲ್ಪಿಸುತ್ತದೆ. ಒಟ್ಟಾರೆಯಾಗಿ, ಈ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಭಾರತದ ಕಾರ್ಯತಂತ್ರದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಪ್ರಮುಖ ಕಡಲ ಮಾರ್ಗಗಳಲ್ಲಿ ಭದ್ರತೆಯನ್ನು ಕಾಪಾಡಲು ಪೂರಕವಾಗಿ ನಿಲ್ಲುತ್ತದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net