ವಿರಾಟ್-ಲಿಜ್ ವಿವಾದಕ್ಕೆ ಬೃಂದಾವನದಲ್ಲಿ ಮುಕ್ತಿ? ಅಕ್ಷಯ ತೃತೀಯ ದಿನವೇ ಪ್ರೇಮಾನಂದರ ಮೊರೆ ಹೋದ ವಿರುಷ್ಕಾ ಜೋಡಿ! Virushka in Vrindavan

ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದ ಸ್ಟಾರ್​ ಕಪಲ್ಸ್​
ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದ ಸ್ಟಾರ್​ ಕಪಲ್ಸ್​
Published on

ಪ್ರಮುಖ ಮುಖ್ಯಾಂಶಗಳು

  • ಬೃಂದಾವನದ ಬಂದ ವಿರುಷ್ಕಾ ಜೋಡಿ
  • ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದ ಸ್ಟಾರ್​ ಕಪಲ್ಸ್​
  • ಲಿಜ್​ಲಾಜ್​ ಫೋಟೊಗೆ ಲೈಕ್​ ಕೊಟ್ಟು ಸುದ್ದಿಯಲ್ಲಿದ್ದ ವಿರಾಟ್​!
ಕ್ರಿಕೆಟ್​: ದೇಶದಾದ್ಯಂತ ಇಂದು ಅಕ್ಷಯ ತೃತೀಯಾವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಕ್ರಿಕೆಟ್​ ಆಟಗಾರ ರನ್​ ಮಷಿನ್ ಕಿಂಗ್​ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ (Virushka in Vrindavan) ಬೃದಾಂವನದ ಪ್ರೇಮಾನಂದ ಮಹಾರಾಜರ ದರ್ಶನಕ್ಕಾಗಿ ಬಂದಿದ್ದಾರೆಂದು ಹೇಳಲಾಗುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡಿತ್ತಿದೆ.
ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ವಿರಾಟ್​ ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಮರೂನ್​ ಮತ್ತು ಬಿಳಿ ಬಣ್ಣದ ಬಟ್ಟೆ ತೊಟ್ಟಿದ್ದರೆ, ಪತ್ನಿ ಅನುಷ್ಕಾ ಬಿಳಿ ಬಣ್ಣದ ಸಲ್ವಾರ್​ ಸೂಟ್​ ಧರಿಸಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ. ಇತ್ತೀಚೆಗೆ ವಿರಾಟ್​ ಜರ್ಮನ್​ ಸುಂದರಿ ಲಿಜ್​ಲಾಜ್​ ಅವರ ಫೋಟೊಗೆ ಲೈಕ್​ ಕೊಟ್ಟು ಸಖತ್​ ಸುದ್ದಿಯಲ್ಲಿದ್ದರು, ಈಗ ಇದನ್ನು ಪರಿಹಾರ ಮಾಡಿಕೊಳ್ಳಲು ಪ್ರೇಮಾನಂದರ ದರ್ಶನಕ್ಕೆ ಬಂದಿದ್ದಾರೆಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.
ವಿರಾಟ್​ ಲೈಕ್ಸ್​ ಲಿಜ್​ಲಾಜ್​!
ಕೆಲ ದಿನಗಳ ಹಿಂದೆ ಇನ್​​ಸ್ಟಾಗ್ರಾಮ್​ನಲ್ಲಿ ವಿರಾಟ್​ ಕೊಹ್ಲಿ ಜರ್ಮನಿ ದೇಶ್ ಲಿಜ್​ಲಾಜ್​ ಎನ್ನುವವರ ಫೋಟೊವನ್ನು ಲೈಕ್​ ಮಾಡಿ ನಂತರ ಅನ್​ಲೈಕ್​ ಮಾಡಿದ್ದರು. ಆದರೆ ಈ ಸುದ್ದಿ ಸೋಶಿಯಲ್​ ಮೀಡಿಯಾನಲ್ಲಿ ಸಖತ್​ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಗೆ ಸ್ಪಷ್ಟಿಕರಣ ಕೊಟ್ಟಿದ್ದ ಕೊಹ್ಲಿ, ನಾನು ಯಾರ ಫೋಟೊಗೂ ಲೈಕ್​ ಕೊಟ್ಟಿಲ್ಲ, ಇದು ತಾಂತ್ರಿಕ ದೋಷವೆಂದು ಹೇಳಿದ್ದರು.

ನನಗೆ ಅವರ ಮೇಲೆ ಬೇಸರವಿಲ್ಲ: ಲಿಜ್​ಲಾಜ್​

ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದ ಲಿಜ್​ಲಾಜ್​, ನನಗೆ ಕ್ರಿಕೆಟ್​ ಆಗಲಿ, ಕ್ರಿಕೆಟ್​ ಆಟಗಾರರ ಬಗ್ಗೆ ಏನೂ ತಿಳಿದಿಲ್ಲ, ಆದರೆ ಇವತ್ತು ಸೋಶಿಯಲ್​ ಮೀಡಿಯಾನಲ್ಲಿ ನನ್ನದೇ ಚರ್ಚೆಯಾಗಿತ್ತು. ನನ್ನ ಫೋಟೊಗೆ ಅವರು ಲೈಕ್​ ಕೊಟ್ಟು ನಂತರ ಅನ್​ಲೈಕ್​ ಮಾಡಿದಕ್ಕೆ ನನಗೇನು ಬೇಸರಲಿಲ್ಲ. ಜನರು ಅವರನ್ನು ಸುಮ್ಮನೆ ಕಾಡಿಸುವುದನ್ನು ಬೀಡಬೇಕು ಎಂದು ಲಿಜ್​ ಮನವಿ ಮಾಡಿದ್ದು, ಸಾದ್ಯವಾದರೆ ನಾನು ಆರ್​ಸಿಬಿ ಮ್ಯಾಚ್​ ನೋಡಲು ಭಾರತಕ್ಕೆ ಬರುವುದಾಗಿ ಹೇಳಿದ್ದರು.
ಐಪಿಎಲ್​ನಲ್ಲಿ ಕೊಹ್ಲಿ ಕಮಾಲ್​!
ಮಾರ್ಚ್​ 28 ರಿಂದ ಆರಂಭವಾಗಿರುವ 19 ನೇ ಸಾಲಿನ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಇಲ್ಲಿವರೆಗೆ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ವಿಜೇತರಾಗಿರುವ ಇವರು 2 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ.
ಆರ್​.ಸಿ.ಬಿ ಪರ ವಿರಾಟ್​ ಕೊಹ್ಲಿ 6 ಪಂದ್ಯಗಳಲ್ಲಿ 273 ರನ್​ ಗಳಿಸುವ ಮೂಲಕ ಅತ್ಯಧಿಕ ರನ್​ ಸ್ಕೋರರ್​ ಆಗಿ ಹೊರಹೊಮ್ಮಿದ್ದರೆ, ತಂಡದ ನಾಯಕ ರಜ್​ ಪಟಿದಾರ್​ 22 ಸಿಕ್ಸ್​ ಸಿಡಿಸುವ ಮೂಲಕ ಅತಿಹೆಚ್ಚು ಸಿಕ್ಸ್ ಹೊಡೆದಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆರ್​.ಸಿ.ಬಿ ಯ ಏಪ್ರಿಲ್​ 24 ಶುಕ್ರವಾರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್​ ಜೈಂಟ್ಸ್​ ತಂಡವನ್ನು ಎದುರಿಸಲಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net