ಗುಜರಾತ್‌ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸುವವರನ್ನು 'ನಾರಾಜ್ ಫುಫಾ ಜಿ' ಎಂದು ಲೇವಡಿ ಮಾಡಿದ್ದರು. ಈ ಮಾತಿಗೆ ಪ್ರತಿಕ್ರಿಯಿಸಿರುವ ಚಿದಂಬರಂ, "ತಮ್ಮನ್ನು 'ಬೇವಕೂಫ್ ನಕ್ಸಲ್' ಎನ್ನುವುದಕ್ಕಿಂತ 'ದಿಮಾಗಿ ನಕ್ಸಲ್' ಎಂದು ಕರೆಯುವುದೇ ಮೇಲು, ನನಗೆ ಇದರಲ್ಲಿ ಯಾವುದೇ ಬೇಸರವಿಲ್ಲ, ಬದಲಿಗೆ ಸಂತೋಷವಿದೆ" ಎಂದು ವ್ಯಂಗ್ಯವಾಡಿದ್ದಾರೆ.