ಸ್ಥಳೀಯ ನಿವಾಸಿಯಾದ ಸೌಮೇನ್ ವಿಕ್ಕಿ ದಾಸ್ ಎಂಬುವವರು ಮಾತನಾಡಿ, ಚುನಾವಣೆಗೂ ಮುನ್ನ ತಮ್ಮ ಆಧಾರ್ ಕಾರ್ಡ್ ನಾಪತ್ತೆಯಾಗಿತ್ತು, ಇಂದು ಇಲ್ಲಿಗೆ ಬಂದು ನೋಡಿದಾಗ, ಪೊಲೀಸರು ವಶಪಡಿಸಿಕೊಂಡ ದಾಖಲೆಗಳ ರಾಶಿಯಲ್ಲಿ ನನ್ನ ಕಾರ್ಡ್ ಪತ್ತೆಯಾಗಿದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ದಿನದಿಂದಲೂ ಈ ಟಿಎಂಸಿ ಕಚೇರಿಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರು ಕಾಣಿಸಿಕೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದು, ಹಲವು ದಿನಗಳಿಂದ ಕಚೇರಿ ಬೀಗ ಹಾಕಿದ ಸ್ಥಿತಿಯಲ್ಲಿದ್ದಿದ್ದರಿಂದ, ಸ್ಥಳೀಯರು ಕಚೇರಿಯೊಳಗೆ ಪ್ರವೇಶಿಸಿದಾಗ ಈ ಭಾರಿ ಅಕ್ರಮ ಬೆಳಕಿಗೆ ಬಂದಿದೆ ಎನ್ನಲಾಗಿದೆ.