ಭೀಕರ ದುರಂತ; ರಸ್ತೆ ಕಾಮಗಾರಿ ಕೆಲಸದ ವೇಳೆ ವೇಗವಾಗಿ ಬಂದು ನರೇಗಾ ಕಾರ್ಮಿಕರ ಮೇಲೆ ಹರಿದ ಕಾರು: 8 ಮಂದಿ ಸಾವು | MNREGA workers

ಪಂಜಾಬ್​ನ ಸಂಗ್ರೂರ್​ ಜಿಲ್ಲೆಯಲ್ಲಿ ಭಾನುವಾರ(ಅ. 18) ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ನರೇಗಾ ಕಾರ್ಮಿಕರ ಮೇಲೆ ಹರಿದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 8 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭೀಕರ ದುರಂತ; ರಸ್ತೆ ಕಾಮಗಾರಿ ಕೆಲಸದ ವೇಳೆ ವೇಗವಾಗಿ ಬಂದು ನರೇಗಾ ಕಾರ್ಮಿಕರ ಮೇಲೆ ಹರಿದ ಕಾರು: 8 ಮಂದಿ ಸಾವು | MNREGA workers
Published on: 

ಚಂಡೀಗಢ: ಪಂಜಾಬ್​ನ ಸಂಗ್ರೂರ್​ ಜಿಲ್ಲೆಯಲ್ಲಿ ಭಾನುವಾರ(ಅ. 18) ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ನರೇಗಾ ಕಾರ್ಮಿಕರ ಮೇಲೆ ಹರಿದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 8 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಲೆಹ್ರಾಗಾಗ-ಜಖಲ್ ರಸ್ತೆಯಲ್ಲಿ ಸಂಜೆ ವೇಳೆ ಈ ಘಟನೆ ನಡೆದಿದೆ. ಸುಮಾರು 23 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಡಿಕ್ಕಿ ಹೊಡೆದ ಕಾರು 'PB11 CP 0080' ನೋಂದಣಿ ಸಂಖ್ಯೆಯ 'ಶೆವರ್ಲೆ ಮ್ಯಾಗ್ನಮ್' ಎಂದು ತಿಳಿದು ಬಂದಿದ್ದು, ಆರೋಪಿ ಚಾಲಕನನ್ನು ರೈಧ್ರಾನಾದ ಪರ್ಗತ್ ಸಿಂಗ್ ಕಾಲಾ ಎಂದು ಗುರುತಿಸಲಾಗಿದೆ.

Also Read
ಕೇಂದ್ರದ 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ | Jagan Mohan Reddy
ಭೀಕರ ದುರಂತ; ರಸ್ತೆ ಕಾಮಗಾರಿ ಕೆಲಸದ ವೇಳೆ ವೇಗವಾಗಿ ಬಂದು ನರೇಗಾ ಕಾರ್ಮಿಕರ ಮೇಲೆ ಹರಿದ ಕಾರು: 8 ಮಂದಿ ಸಾವು | MNREGA workers

ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕರ್ಮ್‌ಜೀತ್ ಕೌರ್, ಜೀವನ್ ಸಿಂಗ್, ನಿಕಿ, ಸರ್ಬ್‌ಜೀತ್ ಕೌರ್, ರಂಜೀತ್ ಕೌರ್, ಕರ್ಮ್‌ಜೀತ್, ರಾಣಿ ಕೌರ್ ಮತ್ತು ದೇಸ್ ರಾಜ್ ಮೃತಪಟ್ಟ ಕಾರ್ಮಿಕರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ರೇಗಾ) ಅಡಿಯಲ್ಲಿ ಕಾರ್ಮಿಕರು ರಸ್ತೆ ಕೆಲಸದಲ್ಲಿ ತೊಡಗಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net