ಜಂತರ್​-ಮಂತರ್​ ಹಿಂಸಾಚಾರಕ್ಕೆ ಗೃಹ ಸಚಿವರೇ ಕಾರಣ: ಅಮಿತ್​​ ಶಾ ರಾಜೀನಾಮೆಗೆ 'ಕಾಕ್ರೋಚ್​' ಅಭಿಜಿತ್​ ಆಗ್ರಹ! Abhijit Dipke on Amit Shah Resignation

 ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು: ಅಭಿಜಿತ್​ ದೀಪ್ಕೆ
ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು: ಅಭಿಜಿತ್​ ದೀಪ್ಕೆ
Published on

ಪ್ರಮುಖ ಮುಖ್ಯಾಂಶಗಳು

  • ಜಂತರ್ ಮಂತರ್ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಹೊಣೆ
  • ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು: ಅಭಿಜಿತ್​ ದೀಪ್ಕೆ
  • ಭಾರತದಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದೆ
ಮುಂಬೈ: ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ನಡೆದು, ಈಗ ಈ ಸಮಸ್ಯೆಯೆ ಕಾನೂನಾತ್ಮಕ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದೆ.
ಆದರೆ, ಈ ಸಂದರ್ಭದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಕಾಕ್ರೋಚ್​ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್​ ದೀಪ್ಕೆ (Abhijit Dipke on Amit Shah Resignation), ಜು.20 ರಂದು ಪ್ರತಿಭಟನಾಕಾರರ ಮೇಲೆ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆಯ ಜವಾಬ್ದಾರಿ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ!

ಮಹಾರಾಷ್ಟ್ರದಲ್ಲಿರುವ ತಮ್ಮ ಮನೆ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ದೀಪ್ಕೆ, ಜು. 20 ರಂದು ಜಂತರ್​-ಮಂತರ್​ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​, ಅಶ್ರುವಾಯು ಹಾಗೂ ಪೆಲೆಟ್​ ಗನ್​​ಅನ್ನು ಪ್ರಯೋಗಿಸಿದ್ದಾರೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ, ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿಯ ಜವಾಬ್ದಾರಿ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಹಾಗೆಯೇ ನಮಗೆ ವಿದೇಶಗಳಿಂದ ಹಣ ಹರಿದು ಬಂದಿದೆ ಎಂದು ಪ್ರೊಪಗಾಂಡವನ್ನು ಸೃಷ್ಟಿಸಲಾಗಿತ್ತು. ಒಂದು ವೇಳೆ ನಮಗೆ ವಿದೇಶದಿಂದ ಅಕ್ರಮವಾಗಿ ಹಣ ಬಂದಿದ್ದರೆ, ಅದನ್ನು ತಡೆಯುವಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದ ಮೇಲೆ ಅವರು ಆ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂದಿದ್ದಾರೆ.
ನಮ್ಮ ದೇಶದಲ್ಲಿ ಸರ್ಕಾರವನ್ನು ವಿರೋಧಿಸುವ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಯಾರೇ ಪ್ರಶ್ನಿಸಿದರು ಅವರ ಮನೆಗೆ ಇಡಿ, ಸಿಬಿಐ ಅಧಿಕಾರಿಗಳು ಬರುತ್ತಾರೆ. ವಿರೋಧ ಪಕ್ಷದ ಶಾಸಕರನ್ನು ಹೈಜಾಕ್​ ಮಾಡಿ ವಿರೋಧ ಪಕ್ಷವೇ ಇಲ್ಲದಂತೆ ಮಾಡುತ್ತಾರೆ. ಇಂದು ಮಹಾರಾಷ್ಟ್ರದಲ್ಲಿ ಎನ್​ಸಿಪಿ ಹಾಗೂ ಶಿವ ಸೇನೆಗೆ ಅಸ್ತಿತ್ವವೇ ಇಲ್ಲದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಭಾರತದಲ್ಲಿ ಖಂಡಿತವಾಗಿ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದು ಆರೋಪಿಸಿದ್ದಾರೆ.

ಕಲ್ಲು ತುಂಬಿದ ಲಾರಿ ಬಿಜೆಪಿ ಫ್ಲ್ಯಾನ್​!

ಇನ್ನು ಜಂತರ್​-ಮಂತರ್​ನಲ್ಲಿ ಕಂಡುಬಂದಿದ್ದ ಕಲ್ಲು ತುಂಬಿದ್ದ ಲಾರಿಯನ್ನು ಬಿಜೆಪಿಯ ಕೆಲ ಗುಂಡಾಗಳೇ ತಂದಿದ್ದರು. ಪ್ರತಿಭಟನೆಯಲ್ಲಿ ನಾವು ಅದನ್ನು ಬಳಸಲಿ, ಆಗ ನಾವು ಕಲ್ಲು ತೂರಿದಕ್ಕೆ, ಪೊಲೀಸರು ಲಾಠಿ ಚಾರ್ಜ್​ ಮಾಡಿದರೆನ್ನುವುದು ಅವರ ಫ್ಲ್ಯಾನ್​ ಆಗಿತ್ತು. ಆದರೆ ನಾನು ಈ ಕುರಿತು ಮೊದಲೇ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಇಂದು ನಾವೆಲ್ಲಾ ಜೈಲಿನಿಂದ ಆಚೆಯಿದ್ದೆವೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net