ಪ್ರಿಯಾಂಕಾ ಗಾಂಧಿ "ಗೋ ಮೂತ್ರ ತಜ್ಞ" ಹೇಳಿಕೆ ವಿವಾದ: ಪ್ರೊ. ವಿ. ರಾಮಕೋಟಿ ಸಾಧನೆ ಪರಿಚಯ; ದೇಶದ ಆಸ್ತಿಗೆ ಅಪಹಾಸ್ಯವಲ್ಲ; ಗೌರವ ನೀಡಿ ಎಂದ ಸಂಶೋಧಕ ವಲಯ! Priyanka Gandhi on Prof V. Ramakoti

ಪ್ರಿಯಾಂಕಾ ಗಾಂಧಿಗೆ ಪತ್ರ ಪಡೆದಿರುವ 216 ವಿಶ್ವವಿದ್ಯಾ,ಲಯದ ಕುಲಪತಿಗಳು
ಪ್ರಿಯಾಂಕಾ ಗಾಂಧಿಗೆ ಪತ್ರ ಪಡೆದಿರುವ 216 ವಿಶ್ವವಿದ್ಯಾ,ಲಯದ ಕುಲಪತಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ. ವಿ. ರಾಮಕೋಟಿ ಅವರನ್ನು "ಗೋ ಮೂತ್ರ ತಜ್ಞ" ಎಂದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ
  • ಪ್ರೊ. ವಿ. ರಾಮಕೋಟಿ ದೇಶಕ್ಕೆ ನೀಡಿರುವ ಸಾಧನೆ ತಿಳಿಸಿದ ಅಧ್ಯಾಪಕ ವೃಂದ
  • ಪ್ರಿಯಾಂಕಾ ಗಾಂಧಿಗೆ ಪತ್ರ ಪಡೆದಿರುವ 216 ವಿಶ್ವವಿದ್ಯಾ,ಲಯದ ಕುಲಪತಿಗಳು
ನವದೆಹಲಿ: ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್​ ಪರೀಕ್ಷಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರವು ಮುಂದಿನ ದಿನಗಳಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಂದಾಗುವುದಾಗಿ ಭರವಸೆ ನೀಡಿತ್ತು.
ಆಡಿದ ಮಾತಿನಂತೆ, ಸರ್ಕಾರ ನಿನ್ನೆ (ಬುಧವಾರ, ಜು.29) ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷಾ (ಅಕ್ರಮ) ತಿದ್ದುಡಿ ಮಸೂದೆಯನ್ನು ಅಂಗೀಕಾರ ಮಾಡಿದೆ. ಹಾಗೂ ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ನೇತೃತ್ವದಲ್ಲಿ ಅಕ್ರಮ ತಡೆಗೆ ಸಮಿತಿಯೊಂದನ್ನು ರಚಿಸಿದೆ.
ಆದರೆ, ಲೋಕಸಭಾ ಕಲಾಪದ ಸಮಯದಲ್ಲಿ ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi on Prof V. Ramakoti), ಪ್ರೊಫೆಸರ್ ವಿ. ಕಾಮಕೋಟಿ ಅವರನ್ನು ಗೋಮೂತ್ರ ತಜ್ಞ ಎಂದು ಹಂಗಿಸಿದ್ದು, ಇದು ದೇಶದ ಪ್ರಾಧ್ಯಾಪಕ ವೃಂದದ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಿಯಾಂಕಾ ಗಾಂಧಿ ಅವರ ಈ ಹೇಳಿಕೆಯಿಂದ ಕೋಪಗೊಂಡಿರುವ ಸುಮಾರು 216 ಉಪ ಕುಲಪತಿಗಳು, ಮಾಜಿ ಉಪ ಕುಲಪತಿಗಳು ಹಾಗೂ ಸಂಶೋಧನಾ ತಂಜ್ಞರು ಸಂಸದೆಗೆ ಪತ್ರವನ್ನು ಬರೆದಿದ್ದಾರೆ.

ನಿಮ್ಮ ಹೇಳಿಕೆ ಸಂಶೋಧಕರಿಗೆ ಮಾಡಿದ ಅಪಮಾನ!

ಸಂಸದೆ ಪ್ರಿಯಾಂಕಾ ಗಾಂಧಿಗೆ ಪತ್ರ ಬರೆದಿರುವ ಅಧ್ಯಾಪಕ ವೃಂದದವರು, ಪ್ರೊ. ವಿ. ರಾಮಕೋಟಿ ಯಾರು? ದೇಶಕ್ಕೆ ಅವರ ಸಾಧನೆ ಏನು? ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಭಾರತದ ಸಂವಿಧಾನದಲ್ಲಿ ಪ್ರತಿಯೊಂದನ್ನು ಪ್ರಶ್ನಿಸುವ, ವಿರೋಧ ವ್ಯಕ್ತ ಪಡಿಸುವ ಸಮಾನ ಅವಕಾಶವಿದೆ, ಆದರೆ ಅಪಹಾಸ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಆದರೆ ಸಂಸದೆ ಭಾರತದ ಬುದ್ಧಿವಂತ ಮೆದುಳುಗಳಲ್ಲಿ ಒಂದಾದ ಪ್ರೊ. ವಿ. ರಾಮಕೋಟಿ ಅವರ ಕುರಿತು ಆಡಿದ ಮಾತನ್ನು ಒಪ್ಪಲು ಸಾಧ್ಯವಿಲ್ಲ.
ಪ್ರೊ. ರಾಮಕೋಟಿ ಐಐಟಿ ಮದ್ರಾಸ್​ನಲ್ಲಿ ಕಲಿತು ಇಂದು ಇದೇ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅವರು ವಿದೇಶದಿಂದ ಎಂ.ಎಸ್​ ಹಾಗೂ ಪಿಹೆಚ್​ಡಿ ಪದವಿಯನ್ನು ಕೂಡ ಸಂಪಾದಿಸಿದ್ದಾರೆ. ಅವರು ಇಲ್ಲಿವರೆಗೆ ಸುಮಾರು 150 ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿ ದೇಶಕ್ಕೆ ಇಲ್ಲಿವರೆಗೆ ಸುಮಾರು 50 ಕ್ಕೂ ಹೆಚ್ಚಿನ ಯೋಜನೆಯಲ್ಲಿ ಅವರ ಪಾತ್ರವಿದೆ.
ಅವರ ಈ ಎಲ್ಲಾ ಸಾಧನೆಗೆ ಡಿಆರ್‌ಡಿಒ ಶೈಕ್ಷಣಿಕ ಶ್ರೇಷ್ಠತೆ ಪ್ರಶಸ್ತಿ ಮತ್ತು ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ​​ಟೆಕ್ನೋ ವಿಷನರಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಮತ್ತು ಪುರಸ್ಕಾರಗಳನ್ನು ಅವರು ಅಲಂಕರಿಸಿದ್ದಾರೆ.

ಅವರ ಆಲೋಚಲಾ ಲಹರಿ ವಿಭಿನ್ನ!

ಅಂದಹಾಗೆ ಪ್ರೊ. ರಾಮಕೋಟಿ ಅವರ ಇನ್ನೊಂದು ವಿಶಿಷ್ಟತೆ ಎಂದರೆ ಅವರು ವಿಜ್ಞಾನದಲ್ಲಿ, ಸಾಂಪ್ರದಾಯವನ್ನು ಮಿಶ್ರಣ ಮಾಡಿ ಅದನ್ನು ಪ್ರಾಯೋಗಿಕವಾಗಿ ಚರ್ಚಿಸಲು ಮುಂದಾಗುತ್ತಾರೆ. ಅವರು ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ವೈಜ್ಞಾನಿಕ ಮನೋಭಾವನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ವಿಜ್ಞಾನ ಕೂಡ ಒಪ್ಪುತ್ತದೆ. ಆದರೆ ನಿಮಗೆ ಅವರು ನಿಲುವು ಇಷ್ಟವಾಗುವುದಿಲ್ಲವೆಂದು ಅವರಿಗೊಂದು ಹಣೆಪಟ್ಟಿ ನೀಡಿ ಅಪಹಾಸ್ಯ ಮಾಡುವುದನ್ನು ಒಪ್ಪಲು ಸಾಧ್ಯವಾಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net