ಗುವಾಹಟಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಾಲೂಕ್‌ಬಾರಿ ಕ್ಷೇತ್ರವು ಅಸ್ಸಾಂನ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಎಜಿಪಿ ಮತ್ತು ಎಐಯುಡಿಎಫ್ ನಂತಹ ಪ್ರಮುಖ ಪಕ್ಷಗಳ ನಡುವೆ ಪೈಪೋಟಿ ಇದ್ದರೂ, ಹಿಮಂತ ಬಿಸ್ವಾ ಶರ್ಮಾ ಅವರ ವೈಯಕ್ತಿಕ ವರ್ಚಸ್ಸಿನ ಮುಂದೆ ಬೇರೆಲ್ಲಾ ಪಕ್ಷಗಳು ಮಂಕಾಗಿವೆ. ಕಾಂಗ್ರೆಸ್ ಈ ಬಾರಿ ಬಿದಿಶಾ ನಿಯೋಗ್ ಅವರ ಮೂಲಕ ಹೊಸ ಮುಖವನ್ನು ಪರಿಚಯಿಸಿ ಪೈಪೋಟಿ ನೀಡಲು ಯತ್ನಿಸಿತಾದರೂ, ಬಿಜೆಪಿಯ ಅಭಿವೃದ್ಧಿ ಮಂತ್ರದ ಮುಂದೆ ಅದು ಸಾಧ್ಯವಾಗಲಿಲ್ಲ.