ಪ್ರಧಾನಿ ಮೋದಿ ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುತ್ತಾರೆ, ಆದರೆ ವಾಸ್ತವದಲ್ಲಿ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ, ಮೋದಿ ಎಲ್ಲಿಗೆ ಹೋದರೂ ಜನರಲ್ಲಿ ದ್ವೇಷ ಮತ್ತು ಭಯದ ವಾತಾವರಣ ಹರಡುತ್ತಿದ್ದಾರೆ, ಪ್ರಸ್ತುತ ದೇಶವು ಎರಡು ಭಿನ್ನ ಸಿದ್ಧಾಂತಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ರಾಹುಲ್, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಏಕತೆ ಮತ್ತು ಸಹೋದರತ್ವದ ಹೋರಾಟವಾಗಿದೆ ಎಂದರು(ಏಜೆನ್ಸೀಸ್).