ವರದಿಗಳ ಪ್ರಕಾರ, ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡಿನ ಶಬ್ದ ಕೇಳುತ್ತಿದ್ದಂತೆ ಭದ್ರತಾ ಪಡೆಗಳು ಗನ್ ಶಾಟ್ ಎಂದು ಕೂಗುತ್ತಾ ಎಚ್ಚರಿಕೆ ನೀಡಿದವು, ಇದರಿಂದ ರಾಜಕಾರಣಿಗಳು, ಪತ್ರಕರ್ತರು ಮತ್ತು ಸೆಲೆಬ್ರಿಟಿಗಳು ಸೇರಿದ್ದ ಸಭಾಂಗಣದಲ್ಲಿ ಗೊಂದಲ ಸೃಷ್ಟಿಯಾಯಿತು. ಸಭಾಂಗಣದ ಹತ್ತಿರ ಗುಂಡಿನ ಸದ್ದು ಕೇಳಿದ ಕೂಡಲೇ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಕೆಳಕ್ಕೆ ತಳ್ಳಿ ರಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸಿಎನ್ಎನ್ಗೆ ತಿಳಿಸಿದ್ದಾರೆ.