ದೆಹಲಿಯಲ್ಲಿ ಧಾರಾಕಾರ ಮಳೆ; ಸದರ್ ಬಜಾರ್ ಜಲಾವೃತ, 15 ವಿಮಾನ ಡೈವರ್ಟ್ | Heavy rains in Delhi-NCR
ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಮಳೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೆಹಲಿ-ಎನ್‌ಸಿಆರ್‌ನಲ್ಲಿ ವರುಣನ ಅಬ್ಬರ ಜೋರಾಗಿದೆ
ಸಾದರ್ ಬಜಾರ್‌ನಲ್ಲಿ ಅಂಗಡಿಗಳು-ಮುಂಗಟ್ಟುಗಳು ಜಲಾವೃತ
ಕಾನಾಟ್ ಪ್ಲೇಸ್ ಸೇರಿದಂತೆ ಹಲವು ಕಡೆ ಮಳೆ ಅವಾಂತರ
Delhi NCR Heavy Rain: ದೆಹಲಿ-ಎನ್‌ಸಿಆರ್‌ನಲ್ಲಿ ಸುರಿದ ರಕ್ಕಸ ಮಳೆ ಜನಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ಮಳೆಯಿಂದ ಸದರ್ ಬಜಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ದೇಶದ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ಒಂದಾಗಿರುವ ಸದರ್ ಬಜಾರ್‌ನಲ್ಲಿ ಸೊಂಟದವರೆಗೂ ನೀರು ನಿಂತಿದೆ. ಅಂಗಡಿಗಳಿಗೂ ಮಳೆ ನೀರು ನುಗ್ಗಿದ್ದು, ಬಹುತೇಕ ಶಟರ್‌ಗಳನ್ನು ಬಂದ್ ಮಾಡಿರುವ ದೃಶ್ಯಗಳು ಕಂಡುಬಂದಿವೆ. ಮಳೆಯ ಆರರ್ಭಟಕ್ಕೆ ವ್ಯಾಪಾರಸ್ಥರು ಹೈರಾಣಾಗಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಕಷ್ಟ
ಇನ್ನು, ಸಂಗಮ್ ವಿಹಾರ್‌ನ ಶನಿ ಬಜಾರ್ ರಸ್ತೆಯಲ್ಲೂ ಕೆಲವೇ ನಿಮಿಷ ಸುರಿದ ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ನಿಂತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ನೀರು ತುಂಬಿದ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನಾಟ್ ಪ್ಲೇಸ್‌ನ ಪಾರ್ಕಿಂಗ್ ಪ್ರದೇಶದಲ್ಲೂ ಮಳೆ ನೀರು ನಿಂತಿದ್ದರಿಂದ ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲಾಗದೆ ಬೇಸತ್ತಿದ್ದಾರೆ.
15 ವಿಮಾನಗಳು ಡೈವರ್ಟ್
ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಪರಿಣಾಮ ದೆಹಲಿ ವಿಮಾನ ನಿಲ್ದಾಣದಿಂದ 15 ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. Air India, IndiGo ಮತ್ತು SpiceJet ಪ್ರಯಾಣಿಕರಿಗೆ ವಿಮಾನಗಳ ಸಮಯದಲ್ಲಿ ವಿಳಂಬ ಅಥವಾ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿವೆ.
ದೆಹಲಿಯಲ್ಲಿ ಆಗಸ್ಟ್ ತಿಂಗಳ ಮಳೆ ಪ್ರಮಾಣವೂ ಈಗಾಗಲೇ ಸಾಮಾನ್ಯ ಸರಾಸರಿಯನ್ನು ದಾಟಿದೆ. ಸೋಮವಾರದ ಸುರಿದ ಮಳೆಯ ಸೇರಿದಂತೆ ಈ ತಿಂಗಳ ಒಟ್ಟು ಮಳೆ 246.3 ಮಿ.ಮೀ.ಗೆ ತಲುಪಿದ್ದು, ಆಗಸ್ಟ್‌ನ ದೀರ್ಘಾವಧಿ ಸರಾಸರಿ 233.1 ಮಿ.ಮೀ.ಗಿಂತ ಹೆಚ್ಚಾಗಿದೆ,(ಏಜೆನ್ಸೀಸ್).