ಇನ್ನೂ ಸುರಂಗ ಕುಸಿತಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಭ್ರಷ್ಟಾಚಾರವು ಯೋಜನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದೆ. ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ಭ್ರಷ್ಟಾಚಾರ ಎಷ್ಟು ದೊಡ್ಡದಾಗಿದೆ ಎಂದರೆ, ಗುತ್ತಿಗೆದಾರರು ಶಾಸಕರು, ಸಂಸದರು, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಶೇಕಡಾ 50 ಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಯಿತು, ಇದರ ಪರಿಣಾಮವಾಗಿ ಉದ್ಘಾಟನೆಯಾದ ಒಂಬತ್ತು ವಾರಗಳಲ್ಲಿ ಕಳಪೆ ಕೆಲಸ ಕುಸಿದು ಬಿದ್ದಿತು. ಮಿಸ್ಸಿಂಗ್ ಲಿಂಕ್ಗಾಗಿ ಖರ್ಚು ಮಾಡಿದ 7,000 ಕೋಟಿ ರೂ. ಮಳೆಯಲ್ಲಿ ಕೊಚ್ಚಿಹೋಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).