ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, ದೇಣಿಗೆ ಕಳ್ಳತನ ಘಟನೆಯಿಂದ ನಮಗೆಲ್ಲರಿಗೂ ನೋವಾಗಿದೆ ಮತ್ತು ದುಃಖವಾಗಿದೆ. ಕಳ್ಳತನ ಚಿಕ್ಕದೋ ಅಥವಾ ದೊಡ್ಡದೋ ಎಂಬುದು ಗೌಣ. ನಮಗೆ ನೋವುಂಟುಮಾಡುವ ಸಂಗತಿಯೆಂದರೆ ಇಲ್ಲಿ ಅಂತಹ ವಾತಾವರಣ ಬೆಳೆಯಲು ಅವಕಾಶ ನೀಡಲಾಗಿತ್ತು ಎಂಬುದು ಎಂದು ಹೇಳಿದ್ದಾರೆ.