1974 ರಲ್ಲಿ ಚೆನ್ನೈನಲ್ಲಿ ಜನಿಸಿದ ವಿಜಯ್, ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮಿಳು ಚಿತ್ರರಂಗದ ಸರ್ವೋಚ್ಚ ನಾಯಕರಾಗಿ ಬೆಳೆದರು. 1994 ರ 'ರಸಿಗನ್' ಚಿತ್ರದ ನಂತರ ಅವರಿಗೆ ದಳಪತಿ ಎಂಬ ಬಿರುದು ಒಲಿಯಿತು. 'ತುಪ್ಪಾಕಿ', 'ಕತ್ತಿ', 'ಮೆರ್ಸಲ್', 'ಬಿಗಿಲ್' ಮತ್ತು 'ಲಿಯೋ' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಅವರು, ತಮ್ಮ ಕೊನೆಯ ಸಿನಿಮಾ ಘೋಷಿಸಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಸಮರ್ಪಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ, ತಾವು ಒಬ್ಬ ಸಾಮಾನ್ಯ ಮನುಷ್ಯ ಎಂದು ಬಣ್ಣಿಸಿಕೊಂಡ ವಿಜಯ್, ರಾಜ್ಯದಲ್ಲಿ ನಿಜವಾದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಯುಗವನ್ನು ತರುವುದಾಗಿ ಭರವಸೆ ನೀಡಿದ್ದಾರೆ,(ಏಜೆನ್ಸೀಸ್).