ವಿಜಯ್ ಅವರು ರಾಜಕೀಯ ಸುಲಭ ಎಂದು ಇಲ್ಲಿಗೆ ಬಂದಿಲ್ಲ, ಬದಲಿಗೆ ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆ ತರಬಲ್ಲೆ ಎನ್ನುವ ನಂಬಿಕೆಯಿಂದ ಬಂದಿದ್ದಾರೆ. ಅವರ ಈ ಧೈರ್ಯ ನನಗೆ ತುಂಬಾ ಸ್ಫೂರ್ತಿ ನೀಡಿದೆ ಎಂದು ಸ್ಯಾಮ್ ಕೊಂಡಾಡಿದ್ದಾರೆ. ಕೊನೆಯಲ್ಲಿ, ನಮ್ಮ ಸಿಎಂ ಅವರಿಗೆ ಈ ಹೊಸ ಹಾದಿಯಲ್ಲಿ ಮುನ್ನಡೆಯಲು ಬೇಕಾದ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.