ಅವನು ಶ್ರೀರಾಮನನ್ನು ಅಪಹಾಸ್ಯ ಮಾಡಿದ್ದ; ಹಿಂದೂವಾಗಿ ಇದನ್ನು ಸಹಿಸಲು ಸಾಧ್ಯವಿಲ್ಲ; ಅಭಿಜಿತ್​ ದೀಪ್ಕೆ ಮುಖಕ್ಕೆ ಮಸಿ ಬಳಿದ ಮಹಿಳೆ ಸ್ಪಷ್ಟನೆ! Abhijit Dipke

ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮುಖಕ್ಕೆ ಮಸಿ ಬಳಿದಿ ಮಹಿಳೆ
ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮುಖಕ್ಕೆ ಮಸಿ ಬಳಿದಿ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ
  • ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮುಖಕ್ಕೆ ಮಸಿ ಬಳಿದಿ ಮಹಿಳೆ
  • ‘ಶ್ರೀರಾಮನ ಅಪಹಾಸ್ಯ ಸಹಿಸಲ್ಲ’ ಎಂದ ಬರ್ಖಾ ತೆಹ್ರಾನ್​
ನವದೆಹಲಿ: ನೀಟ್​ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ವಿರೋಧಿಸಿ ದೆಹಲಿಯ ಜಂತರ್​ ಮಂತರ್​ನಲ್ಲಿ ಪರಿಸರವಾದಿ ಸೋನಮ್​ ವಾಂಗ್​ಚುಕ್​ ಕಾಕ್ರೋಜ್​ ಜನತಾ ಪಾರ್ಟಿಯ ಬೆಂಬಲದೊಂದಿದೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದರು.
ಶನಿವಾರ (ಜು.18) ಸೋನಮ್​ ವಾಂಗ್​ಚುಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ, ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಾ ದೆಹಲಿ ಪೊಲೀಸರು ವಾಂಗ್​ಚುಕ್​ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರು ಹಠಾತ್ತನೆ ಪ್ರತಿಭಟನಾ ಸ್ಥಳಕ್ಕೆ ಬಂದು, ಸೋನಮ್​ ವಾಂಗ್​​ಚುಕ್​ ಅವರನ್ನು ಕರೆದೊಯ್ದಿದನ್ನು ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ (Abhijit Dipke) ವಿರೋಧಿಸುತ್ತಾ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬಳು ದೀಪ್ಕೆ ಮುಖಕ್ಕೆ ಮಸಿ (ಶಾಯಿ) ಬಳಿದಿದ್ದಾರೆ.

ನಾನೊಬ್ಬ ಖಟ್ಟರ್​​ ಹಿಂದೂ!

ಅಭಿಜಿತ್​ ದೀಪ್ಕೆ ಮುಖಕ್ಕೆ ಮಸಿ ಬಳಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ತಾನು ಏಕೆ ಈ ರೀತಿ ಮಾಡಿದೆ ಎನ್ನುವುದಕ್ಕೆ ಸ್ಪಷ್ಟಿಕರಣ ನೀಡಿದ್ದಾಳೆ.
ಬರ್ಖಾ ತೆಹ್ರಾನ್ ಎಂಬ ಟ್ವಿಟರ್​ ಖಾತೆಯಿಂದ ಈ ಪೋಸ್ಟ್ ಹಂಚಿಕೆಯಾಗಿದ್ದು, ನಾನು ಬರ್ಖಾ ಟ್ರೆಹಾನ್, ಆ ನಗರ ನಕ್ಸಲ್​ ಅಭಿಜಿತ್​ ದೀಪ್ಕೆ ಪ್ರಭು ಶ್ರೀರಾಮನನ್ನು ಅಪಹಾಸ್ಯ ಮಾಡುತ್ತಾ ನಗುತ್ತಿದ್ದ. ನಾನೊಬ್ಬಳು ಖಟ್ಟರ್​ ಹಿಂದೂ ಆಗಿರುವ ಕಾರಣಕ್ಕೆ ಅವನ ಮುಖಕ್ಕೆ ಮಸಿ ಬಳಿದಿದ್ದೆನೆ ಎಂದು ಅವರು ಬರೆದುಕೊಂಡಿದ್ದಾರೆ.
ನಾನೊಬ್ಬ ಹಿಂದೂ ಯುವತಿಯಾಗಿ ನನಗೆ ಅಭಿಜಿತ್​ ದೀಪ್ಕೆ ನನ್ನ ದೇವರ ಮೇಲೆ ಮಾಡಿರುವ ಹಾಸ್ಯವನ್ನು ಸಹಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ನಾನು ಈ ಕೆಲಸವನ್ನು ಮಾಡಿದ್ದೆನೆ, ಜೈ ಹಿಂದ್​, ಜೈ ಶ್ರೀರಾಮ್​ ಎಂದು ಅವರು ಹೇಳಿದ್ದಾರೆ.

ನಾನು ಉಪವಾಸ ಮಾಡುತ್ತೇನೆ!

ಸೋನಮ್​ ವಾಂಗ್​ಚುಕ್​ರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಂತೆ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಉದ್ವಗ್ನ ಪರಿಸ್ಥಿತಿ ಕಂಡುಬಂದಿತು. ನಂತರ ನೆರೆದಿದ್ದ ಪ್ರತಿಭಟನಾಕಾರರ ಎದುರಿಕೆ ಬಂದ ಕಾಕ್ರೋಚ್​ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್​ ದೀಪ್ಕೆ, ನಾನು ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿತ್ತು, ಈ ಬಗ್ಗೆ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಸಹ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net