72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಅತ್ಯುತ್ತಮ ಕನ್ನಡ ಸಿನಿಮಾ! Mithya Best Kannada Film

ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಅತ್ಯುತ್ತಮ ಕನ್ನಡ ಸಿನಿಮಾ
ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಅತ್ಯುತ್ತಮ ಕನ್ನಡ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ
  • ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಸೇರಿ 3 ರಾಷ್ಟ್ರೀಯ ಪ್ರಶಸ್ತಿ
ನವದೆಹಲಿ: ಶನಿವಾರ (ಜು.18) ನವದೆಹಲಿಯ ನ್ಯಾಷನಲ್​ ಮೀಡಿಯಾ ಸೆಂಟರ್​ನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 72 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (72nd National Film Awards) ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಪ್ರಶಸ್ತಿಯನ್ನು ಜನವರಿ 2024 ರಿಂದ ಡಿಸೆಂಬರ್​ 2024 ರ ಒಳಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಿಂದ ಪ್ರಮಾಣಪತ್ರವನ್ನು ಪಡೆದ ಸಿನಿಮಾಗಳಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಗಳನ್ನು ಪ್ರದೇಶದ/ಭಾಷಾ ಆಧರದಲ್ಲಿ ನೀಡಿರುವ ಕಾರಣ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳು ಸಹ ಜನಮನ್ನಣೆಯನ್ನು ಪಡಡೆಯುವಂತಾಗಿದೆ.

ಮಿಥ್ಯ ಅತ್ಯುತ್ತಮ ಸಿನಿಮಾ!

ಕನ್ನಡ ವಿಭಾಗದಲ್ಲಿ ಸಿಂಪಲ್​ ಸ್ಟಾರ್​​ ರಕ್ಷಿತ್‌ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್‌ ಭಟ್‌ ನಿರ್ದೇಶನದ ಮಿಥ್ಯ (Mithya Best Kannada Film) ಎಂಬ ಸಿನಿಮಾ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿಯನ್ನು ಪಡೆದಿದೆ. ಇದರ ಜೊತೆಗೆ ಇತರೆ ಎರಡು ರಾಷ್ಟ್ರಪ್ರಶಸ್ತಿಗಳು ಈ ಚಿತ್ರಕ್ಕೆ ಲಭಿಸಿದೆ. ಅತ್ಯುತ್ತಮ ಸಿನಿಮಾ ಜೊತೆಗೆ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ಆತೀಶ್‌ ಶೆಟ್ಟಿ ಹಾಗೂ ಅತ್ಯುತ್ತಮ ನಟಿ (ಪೋಷಕ ಪಾತ್ರ) ವಿಭಾಗದಲ್ಲಿ ರೂಪಶ್ರಿ ವರ್ಕಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಮ್ಮುಟ್ಟಿ-ಕಾರ್ತಿಕ್​ ಅತ್ಯುತ್ತಮ ನಟರು; ಯಾಮಿ ಬೆಸ್ಟ್​ ನಟಿ!

ಬ್ರಹ್ಮಯುಗಂ ಸಿನಿಮಾದ ನಟನೆಗಾಗಿ ಮಳಿಯಾಳಂ ನಟ ಮಮ್ಮುಟ್ಟಿಗೆ ಹಾಗೂ ಚಂದು ಚಾಂಪಿಯನ್ ಸಿನಿಮಾಗಾಗಿ ಕಾರ್ತಿಕ್​ ಆರ್ಯನ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, ಆರ್ಟಿಕಲ್​ 370 ಸಿನಿಮಾದ ಅಭಿನಯಕ್ಕೆ ನಿರ್ದೇಶಕ ಆದಿತ್ಯ ಧರ್​ ಪತ್ನಿ ಯಾಮಿ ಗೌತಮ್​ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net