ಟಿಎಂಸಿ ಆಡಳಿತಾವಧಿಯಲ್ಲಿ ಬಿಜೆಪಿ ನಾಯಕರು ಎದುರಿಸಿದ ಹಿಂಸಾಚಾರಕ್ಕೆ ಹೋಲಿಸಿದ ಘೋಷ್, ನಾವು ವಿರೋಧ ಪಕ್ಷದಲ್ಲಿದ್ದಾಗ ನಮ್ಮ ನಾಯಕರನ್ನು ಥಳಿಸಲಾಯಿತು, ನೇಣು ಹಾಕಲಾಯಿತು. ಮಮತಾ ಬ್ಯಾನರ್ಜಿ ಈಗ ಹತಾಶರಾಗಿದ್ದಾರೆ, ಬುಧವಾರದ ರ‍್ಯಾಲಿಯಲ್ಲಿ ಅವರು ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡುತ್ತಿದ್ದರು, ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.