ನಿಮ್ಮ ಫೋನ್‌ನಲ್ಲೂ ಬೀಪ್ ಸೌಂಡ್ ಕೇಳಿಸ್ತಾ..? ಗಾಬರಿಯಾಗುವ ಮುನ್ನ ಈ ಸತ್ಯ ತಿಳಿಯಿರಿ! | NDMA Alert

NDMA Alert | ನಿಮ್ಮ ಫೋನ್‌ನಲ್ಲೂ ಬೀಪ್ ಸೌಂಡ್ ಕೇಳಿಸ್ತಾ..? ಗಾಬರಿಯಾಗುವ ಮುನ್ನ ಈ ಸತ್ಯ ತಿಳಿಯಿರಿ!
NDMA Alert | ನಿಮ್ಮ ಫೋನ್‌ನಲ್ಲೂ ಬೀಪ್ ಸೌಂಡ್ ಕೇಳಿಸ್ತಾ..? ಗಾಬರಿಯಾಗುವ ಮುನ್ನ ಈ ಸತ್ಯ ತಿಳಿಯಿರಿ!
Published on
NDMA Alert: ಈ ವಾರ ನಿಮ್ಮ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಜೋರಾಗಿ ಶಬ್ದ ಮಾಡಿದರೆ ಅಥವಾ ಸ್ಕ್ರೀನ್ ಮೇಲೆ ವಿಚಿತ್ರ ಸಂದೇಶಗಳು ಬಂದರೆ ಗಾಬರಿಯಾಗುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯ (Emergency Alert System) ಭಾಗವಾಗಿ ನಡೆಯುತ್ತಿರುವ ಪರೀಕ್ಷಾರ್ಥ ಪ್ರಯೋಗವಾಗಿದೆ. ದೂರಸಂಪರ್ಕ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ ಅಭಿವೃದ್ಧಿಪಡಿಸಿದ SACHET ಎಂಬ ವೇದಿಕೆಯ ಮೂಲಕ ಈ ಎಚ್ಚರಿಕೆಗಳನ್ನು ರವಾನಿಸಲಾಗುತ್ತಿದೆ.
ಸಾಮಾನ್ಯ ಎಸ್‌ಎಮ್‌ಎಸ್ (SMS) ಸಂದೇಶಗಳಿಗಿಂತ ಈ ಸೆಲ್ ಬ್ರಾಡ್‌ಕಾಸ್ಟ್ ತಂತ್ರಜ್ಞಾನವು ಭಿನ್ನವಾಗಿದ್ದು, ಒಂದು ನಿರ್ದಿಷ್ಟ ಪ್ರದೇಶದಲ್ಲಿರುವ ಎಲ್ಲಾ ಮೊಬೈಲ್ ಫೋನ್‌ಗಳಿಗೆ ಏಕಕಾಲದಲ್ಲಿ ಎಚ್ಚರಿಕೆಯನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ, ಸುನಾಮಿ, ಭೂಕಂಪ ಅಥವಾ ರಾಸಾಯನಿಕ ಅನಿಲ ಸೋರಿಕೆಯಂತಹ ತುರ್ತು ಸಂದರ್ಭಗಳಲ್ಲಿ ಮೊಬೈಲ್ ನೆಟ್‌ವರ್ಕ್‌ಗಳು ಜಾಮ್ ಆಗಿದ್ದರೂ ಸಹ, ಈ ವ್ಯವಸ್ಥೆಯು ಸೆಕೆಂಡುಗಳ ಅವಧಿಯಲ್ಲಿ ನಾಗರಿಕರನ್ನು ತಲುಪುತ್ತದೆ. ಇದು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನವಾಗಿದ್ದು, ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ.
ಈ ಪರೀಕ್ಷಾರ್ಥ ಪ್ರಯೋಗದ ಅವಧಿಯಲ್ಲಿ ಜನರು ಇಂಗ್ಲಿಷ್, ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಂದೇಶಗಳನ್ನು ಸ್ವೀಕರಿಸಬಹುದು. ವಿವಿಧ ನೆಟ್‌ವರ್ಕ್ ಟವರ್‌ಗಳ ಮೌಲ್ಯಮಾಪನ ನಡೆಯುತ್ತಿರುವ ಕಾರಣ, ಕೆಲವು ಬಳಕೆದಾರರಿಗೆ ಒಂದಕ್ಕಿಂತ ಹೆಚ್ಚು ಬಾರಿ ಇಂತಹ ಎಚ್ಚರಿಕೆಗಳು ಬರಬಹುದು. ಇದು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಹಂತವಾಗಿರುವುದರಿಂದ, ಸಂದೇಶ ಸ್ವೀಕರಿಸಿದವರು ಯಾವುದೇ ಪ್ರತಿಕ್ರಿಯೆ ನೀಡುವ ಅಥವಾ ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನಿಮ್ಮ ಫೋನ್‌ನಲ್ಲಿ ವೈರ್‌ಲೆಸ್ ತುರ್ತು ಎಚ್ಚರಿಕೆ' (Wireless Emergency Alerts) ಸೆಟ್ಟಿಂಗ್ ಆನ್ ಆಗಿದ್ದರೆ ಮಾತ್ರ ಈ ಪರೀಕ್ಷಾ ಸಂದೇಶಗಳು ಕಾಣಿಸಿಕೊಳ್ಳುತ್ತವೆ. ಒಟ್ಟಾರೆ ಪ್ರಯೋಗಗಳು ಪೂರ್ಣಗೊಂಡ ಬಳಿಕ, ಈ ವ್ಯವಸ್ಥೆಯು ನೈಜ ವಿಪತ್ತುಗಳ ಸಮಯದಲ್ಲಿ ಜನರ ಜೀವ ರಕ್ಷಿಸಲು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ(ಏಜೆನ್ಸೀಸ್​​).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net