ಬಂಗಾರ ಪ್ರಿಯರಿಗೆ ಶುಭ ಸುದ್ದಿ! ಶೇ. 30 ರಷ್ಟು ಕುಸಿದ ಚಿನ್ನದ ಬೆಲೆ; ಖರೀದಿಗೆ ಇದೇ ಸುವರ್ಣಾವಕಾಶ? Gold Price Drop

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!
  • ದಾಖಲೆಯ ಮಟ್ಟದಿಂದ ಶೇ. 30 ಕ್ಕಿಂತಲೂ ಹೆಚ್ಚು ಅಗ್ಗವಾದ ಬಂಗಾರ
  • ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಇದು ಖರೀದಿಯ ಸುವರ್ಣಾವಕಾಶ
ಮಾರುಕಟ್ಟೆ ಕುಸಿತ: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಭಾರತೀಯರಿಗೆ ಹಳದಿ ಲೋಹದ ಮೇಲೆ ಎಂದಿಗೂ ಮುಗಿಯದ ಪ್ರೀತಿ. ಕಳೆದ ಕೆಲವು ಸಮಯದಿಂದ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ಏರುತ್ತಿದ್ದ ಚಿನ್ನದ ಬೆಲೆ ಈಗ ದಿಢೀರನೆ ಪಾತಾಳಕ್ಕೆ ಕುಸಿದಿದೆ (Gold Price Drop). ಬರೋಬ್ಬರಿ 5,600 ಡಾಲರ್​ (5,34,240 ರೂ) ತಲುಪಿದ್ದ ಬಂಗಾರದ ದರ ಈಗ ಶೇಕಡಾ 30 ಕ್ಕಿಂತಲೂ ಹೆಚ್ಚು ಕುಸಿದಿದ್ದು ಈಗ 4,000 ಡಾಲರ್​​ (38,15,684 ರೂ) ಕ್ಕಿಂತ ಕೆಳಗೆ ಇಳಿದಿದೆ.
ಇಷ್ಟು ದಿನ ರಾಕೆಟ್ ವೇಗದಲ್ಲಿ ಓಡುತ್ತಿದ್ದ ಚಿನ್ನದ ಬೆಲೆ ಹೀಗೆ ಒಂದೇ ಸಮನೆ ನೆಲಕ್ಕೆ ಬಿದ್ದಿರುವುದು ಹೂಡಿಕೆದಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ಚಿನ್ನದ ಮಾರ್ಕೆಟ್ ಕಥೆ ಮುಗಿಯಿತಾ? ಅಥವಾ ಇದುವೇ ಖರೀದಿಗೆ ಉತ್ತಮ ಸಮಯವಾ? ಎಂದಯ ಜನ ಲೆಕ್ಕ ಹಾಕುತ್ತಿದ್ದಾರೆ.

ಚಿನ್ನದ ಬೆಲೆ ದಿಢೀರ್ ಕುಸಿದಿದ್ದೇಕೆ?

ಜಗತ್ತಿನಲ್ಲಿ ಯುದ್ಧದ ವಾತಾವರಣ ಇದ್ದರೆ ಸಾಮಾನ್ಯವಾಗಿ ಚಿನ್ನದ ಬೆಲೆ ಏರುತ್ತದೆ. ಆದರೆ ಈ ಬಾರಿ ಇರಾನ್ ಸಂಘರ್ಷದಿಂದಾಗಿ ಇಂಧನ ಬೆಲೆಗಳು ಏರಿ, ಹಣದುಬ್ಬರ ಹೆಚ್ಚಾಯಿತು. ಇದರಿಂದಾಗಿ ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸುವ ಆಸೆ ಸದ್ಯಕ್ಕೆ ಕೈಗೂಡುವಂತೆ ಕಾಣುತ್ತಿಲ್ಲ. ಬಿಗಿಯಾದ ಆರ್ಥಿಕ ನೀತಿಯಿಂದಾಗಿ ಹೂಡಿಕೆದಾರರ ಗಮನ ಈಗ ಚಿನ್ನದಿಂದ ಬಾಂಡ್ ಮಾರ್ಕೆಟ್ ಕಡೆಗೆ ಬದಲಾಗಿದೆ.
ಇದರ ಜೊತೆಗೆ, ಕಳೆದ ಜೂನ್ ಅಂತ್ಯದಲ್ಲಿ ಜಾಗತಿಕವಾಗಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಷೇರುಗಳು ಭಾರಿ ಕುಸಿತ ಕಂಡವು. ಈ ನಷ್ಟವನ್ನು ಸರಿದೂಗಿಸಲು ಮತ್ತು ಕೈಯಲ್ಲಿ ನಗದು ಉಳಿಸಿಕೊಳ್ಳಲು ದೊಡ್ಡ ದೊಡ್ಡ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಅಪಾರ ಪ್ರಮಾಣದಲ್ಲಿ ಮಾರಾಟ ಮಾಡಿದರು. ಇದೂ ಸಹ ಚಿನ್ನದ ದರ ಇಷ್ಟೊಂದು ಕುಸಿಯಲು ಪ್ರಮುಖ ಕಾರಣವಾಗಿದೆ.

ಇದು ಕರಡಿ ಮಾರ್ಕೆಟ್ ಆರಂಭವೇ? ತಜ್ಞರು ಏನಂತಾರೆ?

ಬೆಲೆ ಬಿದ್ದ ತಕ್ಷಣ ಚಿನ್ನದ ಕ್ರೇಜ್ ಮುಗಿಯಿತು ಎಂದು ಕೊಳ್ಳುವುದು ತಪ್ಪು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಆಗ್ಮಾಂಟ್‌ನ ಸಂಶೋಧನಾ ಮುಖ್ಯಸ್ಥೆ ರೆನಿಶಾ ಚೈನಾನಿ ಅವರ ಪ್ರಕಾರ, ಇದು ಚಿನ್ನದ ಮೌಲ್ಯ ಕುಸಿದಿರುವುದರ ಸಂಕೇತವಲ್ಲ. ಬದಲಿಗೆ ಆರ್ಥಿಕ ಏರುಪೇರುಗಳಿಂದ ಆಗಿರುವ ತಾತ್ಕಾಲಿಕ ಬದಲಾವಣೆ ಅಷ್ಟೇ.
ಷೇರು ಮಾರುಕಟ್ಟೆಯ ಏರಿಳಿತ ಮತ್ತು ಹಣದುಬ್ಬರದ ಸಮಯದಲ್ಲಿ ಚಿನ್ನವೇ ಎಂದಿಗೂ ಸುರಕ್ಷಿತ ಹೂಡಿಕೆ. ಪ್ರಪಂಚದಾದ್ಯಂತ ಇರುವ ಕೇಂದ್ರ ಬ್ಯಾಂಕುಗಳು (Central Banks) ಇಂದಿಗೂ ಯುಎಸ್ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಟನ್‌ಗಟ್ಟಲೆ ಚಿನ್ನವನ್ನು ಖರೀದಿಸುತ್ತಲೇ ಇವೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಶೇ. 90 ರಷ್ಟು ಕೇಂದ್ರ ಬ್ಯಾಂಕುಗಳು ಮುಂಬರುವ ದಿನಗಳಲ್ಲಿ ತಮ್ಮ ಚಿನ್ನದ ದಾಸ್ತಾನನ್ನು ಮತ್ತಷ್ಟು ಹೆಚ್ಚಿಸಲು ಯೋಜನೆ ಮಾಡಿಕೊಂಡಿವೆ.

ಹೂಡಿಕೆದಾರರು ಈಗ ಚಿನ್ನ ಖರೀದಿಸಬೇಕೇ?

ಹೌದು, ದೀರ್ಘಾವಧಿಯ ಲಾಭವನ್ನು ನೋಡುವ ಹೂಡಿಕೆದಾರರಿಗೆ ಇದು ಚಿನ್ನದಂತಹ ಅವಕಾಶ! ಸದ್ಯಕ್ಕೆ 3,950 ರಿಂದ 4,000 ಡಾರಲ್​ ಮಟ್ಟವು ಚಿನ್ನಕ್ಕೆ ಅತ್ಯಂತ ಬಲವಾದ ಸಪೋರ್ಟ್ ವಲಯವಾಗಿದೆ. ಇಲ್ಲಿಂದ ಬೆಲೆಗಳು ಮತ್ತೆ ಪುಟೇಳುವ ಎಲ್ಲಾ ಸಾಧ್ಯತೆಗಳಿವೆ.
ತಜ್ಞರ ಅಂದಾಜಿನ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಚಿನ್ನದ ಬೆಲೆ ಮತ್ತೆ 4,400 ಡಾಲರ್​ ತಲುಪಬಹುದು. 2026ರ ಅಂತ್ಯದ ವೇಳೆಗೆ ಇದು 4,900 ರಿಂದ 5,000 ಡಾಲರ್​ ಗಡಿ ದಾಟುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2027 ರಲ್ಲಿ ಚಿನ್ನದ ಬೆಲೆ ಮತ್ತೊಂದು ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ ಎನ್ನುವುದು ತಜ್ಞರ ಅಂದಾಜಾಗಿದೆ, (ಏಜನ್ಸೀಸ್​).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net