ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ, ಸತತ ಒಂಬತ್ತನೇ ದಿನವೂ ಏರಿಕೆ ದಾಖಲಿಸಿದೆ. ಬುಧವಾರ ಒಂದೇ ದಿನ ಬೆಳ್ಳಿಯ ಬೆಲೆ 11,300 ರೂಪಾಯಿ ಹೆಚ್ಚಳವಾಗಿದ್ದು, ಪ್ರತಿ ಕೆಜಿಗೆ 3,34,300 ರೂಪಾಯಿಗೆ ತಲುಪಿದೆ. ಈ ವಾರದ ಆರಂಭದಲ್ಲಷ್ಟೇ 3 ಲಕ್ಷದ ಗಡಿ ದಾಟಿದ್ದ ಬೆಳ್ಳಿ, ಈಗ ಅತ್ಯಂತ ವೇಗವಾಗಿ ಬೆಲೆ ಏರಿಕೆ ಕಾಣುತ್ತಿರುವ ಲೋಹವಾಗಿ ಹೊರಹೊಮ್ಮಿದೆ.