'ಗೆದ್ದಲುಗಳ ಜೊತೆ ಜಿರಳೆಗಳು, ದೇಶವನ್ನು ರಕ್ಷಿಸಿ' ಎಂದು ನರೇಂದ್ರ ಸವಾಯ್ಕರ್ ಪೋಸ್ಟ್; ಬಹಿರಂಗವಾಗಿ ಕ್ಷಮೆ ಕೇಳುವಂತೆ ವಿಪಕ್ಷ ನಾಯಕರ ಪಟ್ಟು..CJP

Goa BJP leader on CJP
Goa BJP leader on CJP
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್​ ಜನತಾ ಪಾರ್ಟಿ ವಿರುದ್ಧ ಆಕ್ಷೇಪಾರ್ಹಾ ಕಾಮೆಂಟ್ ಮಾಡಿದ ಬಿಜೆಪಿ ನಾಯಕ.
  • ಗೆದ್ದಲುಗಳ ಜೊತೆ ಜಿರಳೆಗಳು, ದೇಶವನ್ನು ರಕ್ಷಿಸಿ ಎಂದು ಶೀರ್ಷಿಕೆ ಕೊಟ್ಟು ಪೋಸ್ಟ್​
  • ಭಾರತದ ನಕ್ಷೆಯನ್ನು ಗೆದ್ದಲು ಮತ್ತು ಜಿರಳೆಗಳು ತಿನ್ನುತ್ತಿರುವಫೋಟೋ ಹಂಚಿಕೊಂಡ ಬಿಜೆಪಿ ನಾಯಕ
ನವದೆಹಲಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪ್ರತಿಷ್ಠಿತಾ ಪರೀಕ್ಷೆಗಳಲ್ಲಿ ಉಂಟಾದ ಲೋಪದೋಷಗಳ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್​ ಜನತಾ ಪಾರ್ಟಿ ತಮ್ಮ ಪ್ರತಿಭಟನೆ ಮುಂದುವರೆಸಿದೆ. ಸೋಮವಾರ ದಹಲಿಯಲ್ಲಿ ನಡೆದ ಬೃಹತ್​​​ ಹೋರಾಟದ ನಂತರ ಗೋವಾದ ಹಿರಿಯ ಬಿಜೆಪಿ ನಾಯಕ ನರೇಂದ್ರ ಸವಾಯ್ಕರ್(Goa BJP leader) ಅವರು ಹಂಚಿಕೊಂಡಿರುವ ವಿವಾದಾತ್ಮಕ ಪೋಸ್ಟ್ ಸದ್ಯ​ ಎಎಪಿ ಹಾಗೂ ನಾಯಕರು ಸೇರಿದಂತೆ ಹಲವರನ್ನು ಕೆರಳಿಸಿದೆ.

ಪೋಸ್ಟ್​​ನಲ್ಲಿ ಏನಿದೆ?

ಭಾರತದ ನಕ್ಷೆಯ ತುಂಬಾ ಎರಡು ಕೀಟಗಳಾದ ಗೆದ್ದಲು ಮತ್ತು ಜಿರಳೆ ತುಂಬಿಕೊಂಡು, ಒಂದೊಂದೆ ಭಾಗವನ್ನು ತಿನ್ನುತ್ತಿರುವ ಎಐ ಎಡಿಟೆಡ್​ ಫೋಟೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಗೆದ್ದಲುಗಳ ಜೊತೆ ಜಿರಳೆಗಳು, ದೇಶವನ್ನು ರಕ್ಷಿಸಿ' ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳನ್ನು ಕೀಟಕ್ಕೆ ಹೋಲಿಸಿದ ಇವರ ಈ ಮನಸ್ಥಿತಿ ವಿರುದ್ಧ ನೆಟ್ಟಿಗರು ಹಾಗೂ ಆಮ್​ ಆದ್ಮಿ ಪಕ್ಷದ ನಾಯಕರು ಕಿಡಿಕಾರಿದ್ದಾರೆ ಅಲ್ಲದೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಬಹಿರಂಗವಾಗಿ ಕ್ಷಮೆ ಕೇಳಿ ಎಂದ ಕಾಂಗ್ರೆಸ್

ಈ ಪೋಸ್ಟ್​ ಬಗ್ಗೆ ಮಾತನಾಡಿದ ಗೋವಾದ ಕಾಂಗ್ರೆಸ್​ ಕಾರ್ಯಾದಕ್ಷ ಸುನೀಲ್​ ಕೌತಂಕರ್​​, ನರೇಂದ್ರ ಸವಾಯ್ಕರ್ 24 ಗಂಟೆಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಪ್ರದಾನಿ ಮೋದಿಯವರ ಆಡಳಿತದ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರಶ್ನೆ ಮಾಡುವುದು ದೇಶ ದ್ರೋಹ ಎನ್ನುವುದು ಬಿಜೆಪಿಯ ಕೆಟ್ಟ ಅಭ್ಯಾಸ. ನೆನಪಿಸಿ ಇಡೀ ದೇಶ ಬಿಜೆಪಿಯಲ್ಲ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ನಾಚಿಕೆಗೇಡಿನ ಸಂಗತಿ

ಎಎಪಿ ನಾಯಕ ಕ್ರೂಜ್​ ಸಿಲ್ವಾ ಅವರು ಮಾತನಾಡಿ, ನ್ಯಾಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ಗೆದ್ದಲು ಎಂದಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪ್ರಶ್ನೆ ಮಾಡುವ ವಿದ್ಯಾರ್ಥಿಗಳನ್ನು ಕೆಳಮಟ್ಟದ ಭಾಷೆಯಲ್ಲಿ ಕರೆದು, ಅವಮಾನಿಸುವುದು ಎಷ್ಟು ಸರಿ ಎಂದು ಟ್ವೀಟ್ ಮಾಡಿದ್ದಾರೆ.

ನಿಮ್ಮ ವಿದ್ಯಾರ್ಹತೆ ಇಷ್ಟೇ ಬಿಡಿ

ನರೇಂದ್ರ ಸವಾಯ್ಕರ್ ಪೋಸ್ಟ್​ಗೆ ಹಲವು ಕಾಮೆಂಟ್ ಮಾಡಿದ್ದು, ಅವರ ಈ ಹೇಳಿಕೆಯನ ವಿರುದ್ಧ ಕಿಡಿಕಾರಿದ್ದಾರೆ. ನೀವು ವಿದ್ಯಾರ್ಥಿಗಳನ್ನು ಜಿರಳೆ ಅಥವಾ ಗೆದ್ದಲು ಎಂದರೆ ನಿಮ್ಮ ವಿದ್ಯಾರ್ಹತೆ ಎಷ್ಟು ಕಳಪೆ ಇದೆ ಎಂದು ತಿಳಿಯುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೀಗೆಂದು ಕಾಮೆಂಟ್ ಮಾಡಿದ್ದಾರೆ. ಮೊದಲು ಶಾಲೆಗೆ ಹೋಗಿ ವಿನಮ್ರವಾಗಿರುವ ಬಗ್ಗೆ ಕಲಿಯಿರಿ ಎಂದು ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net