ರಾಮನ ಹುಂಡಿಗೆ ಕೈಹಾಕಿದವರಿಗೆ ಮರಣದಂಡನೆ ಕೊಡಿ: ಅಯೋಧ್ಯೆ ದೇಣಿಗೆ ಹಗರಣಕ್ಕೆ ಮಹಾಂತ ದಿನೇಂದ್ರ ದಾಸ್ ಆಕ್ರೋಶ! Ram Mandir Donation Scam

ಕಳ್ಳತನ ಸಾಬೀತಾದರೆ ತಪ್ಪಿತಸ್ಥರಿಗೆ ಮರಣದಂಡನೆ ಕೊಡಿ: ಮಹಾಂತ ದಿನೇಂದ್ರ ದಾಸ್
ಕಳ್ಳತನ ಸಾಬೀತಾದರೆ ತಪ್ಪಿತಸ್ಥರಿಗೆ ಮರಣದಂಡನೆ ಕೊಡಿ: ಮಹಾಂತ ದಿನೇಂದ್ರ ದಾಸ್
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯಾ ರಾಮ ಮಂದಿರದ ದೇಣಿಗೆ ಅಕ್ರಮ ಆರೋಪ
  • ಆರೋಪದ ಬೆನ್ನಲ್ಲೇ ಎಂಟು ಜನರನ್ನು ವಶಕ್ಕೆ ಪಡೆದ ಎಸ್​ಐಟಿ
  • ಕಳ್ಳತನ ಸಾಬೀತಾದರೆ ತಪ್ಪಿತಸ್ಥರಿಗೆ ಮರಣದಂಡನೆ ಕೊಡಿ: ಮಹಾಂತ ದಿನೇಂದ್ರ ದಾಸ್
ಅಯೋಧ್ಯಾ: ಕಳೆದ ಕೆಲ ದಿನಗಳಿಂದ ಹಿಂದೂಗಳ ಅಸ್ಮಿತೆ ಕ್ಷೇತ್ರವಾದ ಅಯೋಧ್ಯೆಯ ರಾಮ ಮಂದಿರದ ದೇಣಿಗೆಗೆ ಸಂಬಂಧಸಿದಂತೆ ಅಕ್ರಮ (Ram Mandir Donation Scam) ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ.
ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶ ಸರ್ಕಾರ ಎಸ್​ಐಟಿ ಯನ್ನು ರಚಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ದೇವಸ್ಥಾನದಲ್ಲಿ ಕಳ್ಳತನ; ಹೀನ ಕೃತ್ಯ!

ಶ್ರೀ ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ನಡೆದಿದೆ, ಹುಂಡಿಯ ಹಣವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪಕ್ಕೆ ರಾಮ ಜನ್ಮಭೂಮಿ ಟ್ರಸ್ಟ್​​ನ ಸದಸ್ಯರಾದ ಮಹಾಂತ​ ದಿನೇಂದ್ರ ದಾಸ್​ ಮಹಾರಾಜ್​ ಪ್ರತಿಕ್ರಿಯೆ ನೀಡಿದ್ದಾರೆ.
ದೇನಸ್ಥಾನದ ದೇಣಿಗೆ ಹಣವನ್ನು ಕಳ್ಳತನ ಮಾಡುವುದು ನೀಚ ಕೃತ್ಯವಾಗಿದ್ದು, ಇದು ಸಾಭೀತಾದರೆ, ತಪ್ಪಿತಸ್ಥರಿಗೆ ಮರಣದಂಡನೆಯನ್ನು ನೀಡಬೇಕಾಗಿ ನ್ಯಾಯಾಲಯಕ್ಕೆ ಅವರು ಮನವಿ ಮಾಡಿದ್ದಾರೆ. ನನಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಮೇಲೆ ಸಂಪೂರ್ಣ ನಂಬಿಕೆಯಿದೆ. ಈ ಅಕ್ರಮದಲ್ಲಿ ತೊಡಗಿದವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಹೇಳಿದ್ದಾರೆ.

ಶಿಕ್ಷೆ ಕಠಿಣವಾದರೆ ಮಾತ್ರ ಜನರಿಗೆ ಭರವಸೆ ಮೂಡುತ್ತೆ!

ನನಗೆ ತಿಳಿದ ಪ್ರಕಾರ, ಈ ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ತಪ್ಪಿತಸ್ಥರೋ? ಇಲ್ಲವೋ? ಅಥವಾ ದೇವಸ್ಥಾನದಲ್ಲಿ ಅಕ್ರಮ ನಡೆದಿದೆಯೋ? ಅಥವಾ ಇದೊಂದು ವದಂತಿಯೋ? ಎನ್ನುವುದು ತನಿಖೆ ಮುಗಿದು, ನ್ಯಾಯಾಲಯದ ತೀರ್ಪು ಹೊರಬಂದ ನಂತರವೇ ತಿಳಿಯಬೇಕಾಗಿದೆ.
ಆದರೆ ಒಂದಂತು ನಿಜ ಪ್ರಭು ಶ್ರೀರಾಮನ ಹುಂಡಿಗೆ ಕೈಹಾಕಿದವರಿಗೆ ಉನ್ನತ ಮಟ್ಟದ ಶಿಕ್ಷೆ ನೀಡಿದರೆ ಮಾತ್ರ, ಜನರಿಗೆ ವ್ಯವಸ್ಥೆ ಮೇಲೆ ನಂಬಿಕೆ ಇರುತ್ತದೆ. ರಾಮನ ಮೇಲಿರುವ ಭಯ-ಭಕ್ತಿ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net