ಆಟೋ ಚಾಲಕನಿಗೆ ಕೋಟಿ ಬೆಲೆಯ ಲಂಬೋರ್ಘಿನಿ ಕೊಟ್ಟ ಮಾಲೀಕ: ಆಟೋ ಹತ್ತಿದ ಕೋಟ್ಯಧಿಪತಿ; ವಿಡಿಯೋ ವೈರಲ್! Lamborghini Viral Video
ಆಟೋ ಡ್ರೈವರ್ಗೆ ಕೋಟಿ ಬೆಲೆಯ ಲಂಬೋರ್ಘಿನಿ ಸೂಪರ್ ಕಾರ್ ಕೊಟ್ಟ ಮಾಲೀಕ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆಟೋ ಡ್ರೈವರ್ಗೆ ಕೋಟಿ ಬೆಲೆಯ ಲಂಬೋರ್ಘಿನಿ ಸೂಪರ್ ಕಾರ್ ಕೊಟ್ಟ ಮಾಲೀಕ!
ಬದಲಿಗೆ ತಾವೇ ಆಟೋ ಹತ್ತಿ ಸವಾರಿ ಮಾಡಿದ ಬೆಂಗಳೂರಿನ ಉದ್ಯಮಿ
ತಾವೇ ಆಟೋ ಓಡಿಸಿ, ಚಾಲಕನಿಗೆ ಕೋಟಿ ಬೆಲೆಯ ಕಾರು ನೀಡಿದ ಹೃದಯಸ್ಪರ್ಶಿ ವಿಡಿಯೋ
ಬೆಂಗಳೂರು: ಲಂಬೋರ್ಘಿನಿ ಈ ಕಾರಿನ ಹೆಸರನ್ನು ಕೇಳದವರು ಯಾರು ಇಲ್ಲ ಎಂದರೆ ಸುಳ್ಳಲ್ಲ. ಕೋಟ್ಯಾಂತರ ರೂಪಾಯಿ ಬೆಲೆಯಿರುವ ಈ ಕಾರನ್ನು ಒಮ್ಮೆಯಾದರೂ ಚಲಾಯಿಸಬೇಕು. ಸಾಧ್ಯವಾದರೆ ಒಂದು ಲಂಬೋರ್ಘಿನಿ (Lamborghini Viral Video) ಕಾರನ್ನು ಖರೀದಿಸಬೇಕು ಎನ್ನುವುದು ಕಾರ್ ಕ್ರೇಜ್ ಇರುವ ಜನರ ಆಸೆಯಾಗಿರುತ್ತದೆ.
ಆದರೆ ಈ ಕಾರಿನ ಬೆಲೆ ಅತಿ ದುಬಾರಿಯಿರುವ ಕಾರಣ ಎಲ್ಲಾ ಜನರು ಅದರಲ್ಲೂ ಮದ್ಯಮವರ್ಗದ ಜನರಿಗೆ ಈ ಕಾರನ್ನು ಖರೀದಿಸುವುದು, ಚಲಾಯಿಸುವುದು ತಿರುಕನ ಕನಸಂತೆ ಕಾಣಿಸುತ್ತದೆ.
ಆದರೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಲಂಬೋರ್ಘಿನಿ ಚಾಲಕನೊಬ್ಬ ತನ್ನ ಕಾರನ್ನು ಆಟೋ ಚಾಲಕನಿಗೆ ಒಂದು ರೌಂಡ್ ಚಲಾಯಿಸಲು ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋನಲ್ಲಿ, ಲಂಬೋರ್ಘಿನಿ ಕಾರಿನ ಮಾಲೀಕ ಹಾಗೂ ಸೋಷಿಯಲ್ ಮೀಡಿಯಾ ಪರ್ಸನಾಲಿಟಿ ರಾಕೇಶ್ ಕೆವಿಎನ್ ತಮ್ಮ ಲ್ಯಾಂಬೋರ್ಗಿನಿ ಸೂಪರ್ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಆಟೋ ಚಾಲಕನೊಬ್ಬ ಕೈಬೀಸಿ ಶುಭಕೋರಿದ್ದಾನೆ. ಇದಕ್ಕೆ ರಾಕೇಶ್ ಕೂಡ ಹಾಯ್ ಎಂದಿದ್ದಾರೆ
ನಂತರ ಆಟೋ ಚಾಲಕ ಲಂಬೋರ್ಘಿನಿ ಕಾರನ್ನು ಓಡಿಸುವುದು ನನ್ನ ಜೀವನದ ದೊಡ್ಡ ಕನಸೆಂದು ಹೇಳಿದ್ದಾರೆ. ಆಗ ರಾಕೇಶ್ ಆಟೋವನ್ನು ರಸ್ತೆ ಬದಿಗೆ ನಿಲ್ಲಿಸಲು ಹೇಳಿದ್ದಾನೆ. ನಂತರ ತನ್ನ ಲಂಬೋರ್ಘಿನಿ ಕಾರಿನ್ನು ಚಲಾಯಿಸಲು ಆಟೋ ಚಾಲಕನಿಗೆ ಅನುಮತಿ ನೀಡಿದ್ದಾನೆ.
ನಂತರ ಆಟೋ ಏರಿದ ರಾಕೇಶ್ ರಿಕ್ಷಾ ಚಲಾಯಿಸಿದರೆ, ಇತ್ತ ಆಟೋ ಚಾಲಕ ಲಂಬೋರ್ಘಿನಿ ಕಾರನ್ನು ಸ್ಪಲ್ಪ ದೂರ ಓಡಿಸಿ ತನ್ನ ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ದೊರೆತಿದೆ, (ಏಜನ್ಸೀಸ್).