ಪುತ್ತೂರು: ಮೃತರ ಆತ್ಮಶಾಂತಿಗಾಗಿ ಪ್ರೇತ ವಿವಾಹ!

ಮುಂಡೂರು ಗ್ರಾಮದ ಬಾರಿಕೆ ಎಂಬಲ್ಲಿ ನಡೆದ ಪ್ರೇತ ವಿವಾಹ
ಮುಂಡೂರು ಗ್ರಾಮದ ಬಾರಿಕೆ ಎಂಬಲ್ಲಿ ನಡೆದ ಪ್ರೇತ ವಿವಾಹ
Published on
ಪುತ್ತೂರು: ಅವಿವಾಹಿತ ಯುವಕ-ಯುವತಿಯರು ಮೃತಪಟ್ಟರೆ, ಕೆಲವರ ಆತ್ಮಕ್ಕೆ ಸದ್ಗತಿ ಸಿಗುವುದಿಲ್ಲ. ಅಂತಹ ಅತೃಪ್ತ ಆತ್ಮಗಳಿಂದಾಗಿ ಇಡೀ ಕುಟುಂಬಕ್ಕೆ ಬಾಧೆ ಎದುರಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಪ್ರೇತಾತ್ಮಗಳಿಗೆ ವಿವಾಹ ಮಾಡಿಸುವ(Ghost wedding) ಆಚರಣೆಯೊಂದು ತುಳುನಾಡಿನಲ್ಲಿದೆ.
ಹೌದು, ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬಾರಿಕೆ ಎಂಬಲ್ಲಿ ಭಾನುವಾರ ಇಂಥದ್ದೊಂದು “ಪ್ರೇತ ವಿವಾಹ' ನಡೆದಿದೆ. ಮುಂಡೂರಿನ ಬಾರಿಕೆ ನಿವಾಸಿ ದಿ.ತಿಮ್ಮಪ್ಪ ಮತ್ತು ಗಿರಿಜಾ ದಂಪತಿ ಪುತ್ರ ಆನಂದ ಎಳೆಯ ಪ್ರಾಯದಲ್ಲೇ ಮೃತಪಟ್ಟಿದ್ದ. ಅದೇ ಗ್ರಾಮದ ಬದಿಯಡ್ಕ ನಿವಾಸಿ ದಿ.ಮುತ್ತಪ್ಪ ಮತ್ತು ದೇವಕಿ ದಂಪತಿ ಪುತ್ರಿ ಸರೋಜಾ ಕೂಡ ಎಳೆಯ ಪ್ರಾಯದಲ್ಲೇ ಅಸುನೀಗಿದ್ದಳು.
ಸಂಬಂಧದಲ್ಲಿ ಮೃತ ಆನಂದಗೆ ಸರೋಜಾ ಸೋದರ ಮಾವನ ಮಗಳಾಗಿದ್ದು, ಈ ಎರಡೂ ಆತ್ಮಗಳನ್ನು ಒಂದುಗೂಡಿಸಿ ಪ್ರೇತ ವಿವಾಹ ನೆರವೇರಿಸಲಾಯಿತು. ನೈಜ ವಿವಾಹ ರೀತಿಯಲ್ಲೇ ಶಾಸ್ತೋಕ್ತವಾಗಿ ಬೊಂಬೆಗಳಿಗೆ ಮದುವೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net