ಲೋಹಗಢ ಕೋಟೆಗೆ ತೆರಳುವ ಮಾರ್ಗಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಸಿಯಾ ಮತ್ತು ಕೇತನ್ ಪ್ರಯಾಣಿಸುತ್ತಿದ್ದ ವಾಹನದ ಹಿಂದೆ ಒಬ್ಬ ಯುವಕ ಬರುತ್ತಿರುವುದು ಪೊಲೀಸರ ಗಮನಕ್ಕೆ ಬಂತು. ಬಿಸಿಲಿನ ವಾತಾವರಣದಲ್ಲಿಯೂ ಆತ ಹೂಡಿ ಧರಿಸಿಕೊಂಡಿದ್ದ ಕಾರಣ ಪೊಲೀಸರಿಗೆ ಅನುಮಾನ ಮೂಡಿತು. ಬಳಿಕ ಕೋಟೆ ಸುತ್ತಮುತ್ತಲಿನ ಇತರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಅದೇ ಯುವಕ ಘಟನೆ ನಡೆದ ಪ್ರದೇಶದಲ್ಲೂ ಕಾಣಿಸಿಕೊಂಡಿರುವುದು ಪತ್ತೆಯಾಯಿತು. ಪೊಲೀಸರ ಪ್ರಕಾರ, ಈ ಯುವಕನೇ ಚೇತನ್ ಚೌಧರಿ. ಈ ಸುಳಿವಿನ ಆಧಾರದ ಮೇಲೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಯಿತು.