ಸೇನೆಯ ವಿವಿಧ ಹಂತಗಳಲ್ಲಿ ಕಠಿಣ ಸನ್ನಿವೇಶಗಳನ್ನು ನಿಭಾಯಿಸಿರುವ ಇವರು, ಮರುಭೂಮಿ ಪ್ರದೇಶದಲ್ಲಿ ಆರ್ಮರ್ಡ್ ರೆಜಿಮೆಂಟ್, ಪಶ್ಚಿಮ ಗಡಿಯಲ್ಲಿ ಆರ್ಮರ್ಡ್ ಬ್ರಿಗೇಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ದಳ ಹಾಗೂ ಸೇನೆಯ ಪ್ರಮುಖ ಸ್ಟ್ರೈಕ್ ಫೋರ್ಸ್‌ಗಳಲ್ಲಿ ಒಂದಾದ ಪ್ರತಿಷ್ಠಿತ ಸುದರ್ಶನ ಚಕ್ರ ಕಾರ್ಪ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದಲ್ಲದೆ, ದೆಹಲಿ ವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿಯೂ ಸೇವೆ ಸಲ್ಲಿಸಿರುವ ಇವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಿಲಿಟರಿ ಕಾರ್ಯಕ್ರಮಗಳು ಹಾಗೂ ಗಣರಾಜ್ಯೋತ್ಸವದಂತಹ ಔಪಚಾರಿಕ ಜವಾಬ್ದಾರಿಗಳ ಮೇಲ್ವಿಚಾರಣೆಯನ್ನು ನೋಡಿಕೊಂಡಿದ್ದರು.