ಅದರ ನಂತರ ಬಹಳ ಕಷ್ಟಪಟ್ಟು ಠಾಕ್ರೆ ಪರಂಪರೆಯ ಹೆಸರಿನಲ್ಲಿ ಪಕ್ಷವನ್ನು ಮರುಸಂಘಟಿಸಿ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲು ಉದ್ಧವ್ ಪ್ರಯತ್ನಿಸಿದ್ದರು. ಆದರೆ ಕಳೆದ ವಾರವಷ್ಟೇ ಶಿವಸೇನೆ (ಯುಬಿಟಿ) ಬಣದ ಆರು ಪ್ರಮುಖ ಲೋಕಸಭಾ ಸಂಸದರಾದ ಸಂಜಯ್ ಹರಿಭಾವು ಜಾಧವ್, ಸಾಹೇಬ್ ರಾಜಾರಾಮ್ ವಕ್ಚೌರೆ, ಓಂಪ್ರಕಾಶ್ ಭೂಪಾಲ್ಸಿಂಗ್ ನಿಂಬಾಳ್ಕರ್, ಸಂಜಯ್ ದಿನಾ ಪಾಟೀಲ್, ಸಂಜಯ್ ಉತ್ತಮರಾವ್ ದೇಶ್ಮುಖ್ ಮತ್ತು ನಾಗೇಶ್ ಬಾಪುರಾವ್ ಪಾಟೀಲ್ ಅಷ್ಟೀಕರ್ ಅವರು ಶಿಂದೆ ಬಣಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಈ ಆಪರೇಷನ್ ಟೈಗರ್ ಯಶಸ್ಸಿನ ಬೆನ್ನಲ್ಲೇ ಈಗ ಸಚಿನ್ ಅಹೀರ್ ಕೂಡ ಕೈಕೊಟ್ಟಿರುವುದು ಉದ್ಧವ್ ಬಣದ ನಾಯಕರ ನೈತಿಕ ಸ್ಥೈರ್ಯವನ್ನು ಸಂಪೂರ್ಣವಾಗಿ ಕುಗ್ಗಿಸಿದೆ.