ಪತ್ರಿಕಾ ಪ್ರಕಟಣೆಯಿಂದ ಇನ್‌ಸ್ಟಾಗ್ರಾಮ್ ರೀಲ್ಸ್‌ವರೆಗೆ: ಮಾಧ್ಯಮ ಲೋಕದ ಬದಲಾವಣೆ ಮೆಲುಕು ಹಾಕಿದ ಪ್ರಧಾನಿ ಮೋದಿ! PM Modi

ಒಂದು ಕಾಲದಲ್ಲಿ ಪತ್ರಿಕಾ ಪ್ರಕಟಣೆ ಕಳುಹಿಸಲು ಫ್ಯಾಕ್ಸ್ ಯಂತ್ರಕ್ಕಾಗಿ ಹುಡುಕಾಡಬೇಕಿತ್ತು. ಇಂದು ಕ್ಷಣಾರ್ಧದಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕವೇ ಸುದ್ದಿ ಲಕ್ಷಾಂತರ ಜನರನ್ನು ತಲುಪುತ್ತಿದೆ. ಮಾಧ್ಯಮ ಲೋಕದಲ್ಲಿ ತಂತ್ರಜ್ಞಾನ ತಂದಿರುವ ಈ ಮಹತ್ತರ ಬದಲಾವಣೆಗೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆಗಳ ಕಾಲದಿಂದ ಇಂದಿನ ಇನ್‌ಸ್ಟಾಗ್ರಾಂ ರೀಲ್ಸ್‌ ಯುಗದವರೆಗಿನ ಮಾಧ್ಯಮ ಕ್ಷೇತ್ರದ ಬೆಳವಣಿಗೆಯನ್ನು ಸ್ಮರಿಸಿರುವ ಅವರು, ಪತ್ರಕರ್ತರೊಂದಿಗಿನ ತಮ್ಮ ಹಳೆಯ ಒಡನಾಟದ ಸ್ವಾರಸ್ಯಕರ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.PM Modi
ಮಾಧ್ಯಮ ಲೋಕದ ಬದಲಾವಣೆ ಮೆಲುಕು ಹಾಕಿದ ಪ್ರಧಾನಿ
ಮಾಧ್ಯಮ ಲೋಕದ ಬದಲಾವಣೆ ಮೆಲುಕು ಹಾಕಿದ ಪ್ರಧಾನಿ WEB
Published on: 

ನವದೆಹಲಿ: ಒಂದು ಕಾಲದಲ್ಲಿ ಪತ್ರಿಕಾ ಪ್ರಕಟಣೆ ಕಳುಹಿಸಲು ಫ್ಯಾಕ್ಸ್ ಯಂತ್ರಕ್ಕಾಗಿ ಹುಡುಕಾಡಬೇಕಿತ್ತು. ಇಂದು ಕ್ಷಣಾರ್ಧದಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕವೇ ಸುದ್ದಿ ಲಕ್ಷಾಂತರ ಜನರನ್ನು ತಲುಪುತ್ತಿದೆ. ಮಾಧ್ಯಮ ಲೋಕದಲ್ಲಿ ತಂತ್ರಜ್ಞಾನ ತಂದಿರುವ ಈ ಮಹತ್ತರ ಬದಲಾವಣೆಗೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆಗಳ ಕಾಲದಿಂದ ಇಂದಿನ ಇನ್‌ಸ್ಟಾಗ್ರಾಂ ರೀಲ್ಸ್‌ ಯುಗದವರೆಗಿನ ಮಾಧ್ಯಮ ಕ್ಷೇತ್ರದ ಬೆಳವಣಿಗೆಯನ್ನು ಸ್ಮರಿಸಿರುವ ಅವರು, ಪತ್ರಕರ್ತರೊಂದಿಗಿನ ತಮ್ಮ ಹಳೆಯ ಒಡನಾಟದ ಸ್ವಾರಸ್ಯಕರ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ರಾಜಕೀಯ ಜೀವನದ ಆರಂಭದ ದಿನಗಳು ಹಾಗೂ ಪಕ್ಷದಲ್ಲಿ ಮಾಧ್ಯಮ ಸಂವಹನದ ಜವಾಬ್ದಾರಿ ನಿರ್ವಹಿಸುತ್ತಿದ್ದ ಸಂದರ್ಭಗಳನ್ನು ನೆನಪಿಸಿಕೊಂಡರು.

ಇದನ್ನೂ ಓದಿ : ಸಾಯಿ ಪಲ್ಲವಿಯ ವಾರಿಯರ್ ಸೀತಾ ಲುಕ್‌ಗೆ ವಿರೋಧ: ಟ್ರೋಲಿಗರಿಗೆ ಲಾರಾ ದತ್ತಾ ಖಡಕ್ ಕ್ಲಾಸ್! Ramayana movie

ದೀಪಾವಳಿ ಹಬ್ಬ ಮುಗಿದಿದ್ದು, ಛತ್ ಪೂಜೆಯ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಹಬ್ಬಗಳ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವ ಬದಲು ಬಿಡುವಿಲ್ಲದ ವೃತ್ತಿಜೀವನದ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದರು. ಬ್ರೇಕಿಂಗ್ ನ್ಯೂಸ್ ಬೆನ್ನತ್ತಿ ಓಡುವ ನಿಮ್ಮ ಕೆಲಸದ ನಡುವೆಯೂ ಇಂತಹ ಕಾರ್ಯಕ್ರಮಕ್ಕೆ ಸಮಯ ನೀಡಿರುವುದು ಸಂತಸದ ಸಂಗತಿ ಎಂದರು.

ಮಾಧ್ಯಮ ಕ್ಷೇತ್ರದ ಬದಲಾವಣೆಯನ್ನು ವಿವರಿಸಿದ ಮೋದಿ

1990ರ ದಶಕದಲ್ಲಿ ದೇಶಾದ್ಯಂತ ಎರಡು ಪ್ರಮುಖ ಯಾತ್ರೆಗಳ ಜವಾಬ್ದಾರಿಯನ್ನು ತಮಗೆ ವಹಿಸಲಾಗಿತ್ತು. ಆಗ ಪತ್ರಿಕಾ ಪ್ರಕಟಣೆ ಕಳುಹಿಸಬೇಕೆಂದರೆ ಫ್ಯಾಕ್ಸ್ ಯಂತ್ರಕ್ಕಾಗಿ ಹುಡುಕಾಡಬೇಕಾದ ಪರಿಸ್ಥಿತಿ ಇತ್ತು. ದೆಹಲಿಗೆ ಬಂದ ನಂತರವೂ ಮಾಧ್ಯಮ ಸಂವಹನದ ಜವಾಬ್ದಾರಿ ತಮ್ಮ ಬಳಿಯೇ ಮುಂದುವರಿದಿತ್ತು ಎಂದು ನೆನಪಿಸಿಕೊಂಡರು. ಆಗಿನ ದೀಪಾವಳಿ ಮಿಲನ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗಾಗಿ ಕುರ್ಚಿಗಳನ್ನು ಹಾಕುವುದು, ಬಂದವರನ್ನು ಸ್ವಾಗತಿಸಿ ಆತಿಥ್ಯ ವಹಿಸುವುದು ತಮ್ಮ ಕೆಲಸವಾಗಿತ್ತು. ಆಗ ಕ್ಯಾಮೆರಾಗಳ ಸಂಖ್ಯೆ ಕಡಿಮೆಯಿತ್ತು. ಆದರೆ ಪತ್ರಕರ್ತರು ಮತ್ತು ರಾಜಕೀಯ ನಾಯಕರ ನಡುವಿನ ಆತ್ಮೀಯತೆ ಮಾತ್ರ ಇಂದಿನಂತೆಯೇ ಗಟ್ಟಿಯಾಗಿತ್ತು ಎಂದು ಹೇಳಿದರು.

ಆ ದಿನಗಳಲ್ಲಿ ಕಲಿತ ಪಾಠಗಳು ಇಂದಿಗೂ ತಮ್ಮ ಕೆಲಸಕ್ಕೆ ನೆರವಾಗುತ್ತಿವೆ ಎಂದು ತಿಳಿಸಿದ ಮೋದಿ, ಪತ್ರಕರ್ತರೊಂದಿಗಿನ ಮತ್ತೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು. ಕಳೆದ ತಿಂಗಳು ತಾವು ಸರ್ಕಾರದ ಮುಖ್ಯಸ್ಥರಾಗಿ ನಿರಂತರ 25 ವರ್ಷಗಳನ್ನು ಪೂರ್ಣಗೊಳಿಸಿದ್ದಾಗಿ ನೆನಪಿಸಿದ ಅವರು, ಪತ್ರಕರ್ತರು ತಮ್ಮನ್ನು ಹೇಗೆ ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು ಎಂಬುದನ್ನು ಹಾಸ್ಯಭರಿತವಾಗಿ ವಿವರಿಸಿದರು.

ಒಂದು ದಿನ ಪತ್ರಕರ್ತರ ಗುಂಪೊಂದು ತಮ್ಮ ಕೊಠಡಿಗೆ ಬಂದಿತ್ತು. ಸಾಮಾನ್ಯವಾಗಿ ಹೀಗೆ ಗುಂಪಾಗಿ ಬರುವುದು ಅಪರೂಪವಾಗಿತ್ತು. ಆಗ ಪತ್ರಕರ್ತೆಯರ ತಂಡವೂ ಸಾಕಷ್ಟು ಸಂಖ್ಯೆಯಲ್ಲಿತ್ತು. ನಮಗೆ ಸಿಹಿ ತಿನಿಸು ನೀಡಿ, ನೀವು ಗುಜರಾತ್‌ಗೆ ಹೋಗುತ್ತಿದ್ದೀರಿ, ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಅವರು ಹೇಳಿದ್ದರು. ಆ ಸಂದರ್ಭವನ್ನು ಮೋದಿ ಮೆಲುಕು ಹಾಕಿದರು.

25 ವರ್ಷಗಳ ಆಡಳಿತದ ಪಯಣ

2001ರ ಅಕ್ಟೋಬರ್ 7ರಂದು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆ ಮೂಲಕ ಆರಂಭವಾದ ಅವರ ಸರ್ಕಾರದ ಮುಖ್ಯಸ್ಥನ ಪಯಣ 2026ರ ಅಕ್ಟೋಬರ್ 7ಕ್ಕೆ 25 ವರ್ಷಗಳನ್ನು ಪೂರೈಸಿದೆ. 2014ರ ಮೇ 26ರಂದು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅವರು, 2024ರ ಜೂನ್ 9ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.