ಪ್ರದೇಶವಾರು ಹುಡುಕಾಟದ ವಿವರಗಳನ್ನು ಗಮನಿಸುವುದಾದರೆ, ದೆಹಲಿಯು ಜಂತರ್ ಮಂತರ್ ಹುಡುಕಾಟದಲ್ಲಿ 100 ಗೂಗಲ್ ಟ್ರೆಂಡ್ಸ್ ಸ್ಕೋರ್ ದಾಖಲಿಸಿದೆ. ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ತಲಾ 55 ಸ್ಕೋರ್‌ನೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ಬಿಹಾರ ಮತ್ತು ಉತ್ತರಾಖಂಡ ರಾಜ್ಯಗಳು 40 ಸ್ಕೋರ್ ದಾಖಲಿಸಿವೆ. ಸಿಜೆಪಿ ಕುರಿತಾದ ಹುಡುಕಾಟದಲ್ಲಿಯೂ ದೆಹಲಿ 100 ಸ್ಕೋರ್‌ನೊಂದಿಗೆ ಮುಂಚೂಣಿಯಲ್ಲಿದ್ದು, ಹರಿಯಾಣ (59), ಉತ್ತರ ಪ್ರದೇಶ (54), ಉತ್ತರಾಖಂಡ (50) ಮತ್ತು ಮಹಾರಾಷ್ಟ್ರ (49) ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.