ಭೀಕರ ರಸ್ತೆ ಅಪಘಾತ; ಬಾಂಬ್ ನಿಷ್ಕ್ರಿಯ ದಳದ ನಾಲ್ವರು ಕಾನ್​ಸ್ಟೇಬಲ್​ಗಳು ಸಾವು | accident

ಅಪಘಾತ ನಡೆದ ಸ್ಥಳ
ಅಪಘಾತ ನಡೆದ ಸ್ಥಳ
Published on
ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ(ಡಿ. 10) ಮುಂಜಾನೆ ಭೀಕರ ಅಪಘಾತ(accident) ಸಂಭವಿಸಿದ್ದು, ಮೊರೆನಾದ ಬಾಂಬ್ ನಿಷ್ಕ್ರಿಯ ದಳದ ನಾಲ್ವರು ಕಾನ್‌ಸ್ಟೆಬಲ್‌ಗಳು ಸಾವನ್ನಪ್ಪಿದ್ದಾರೆ. ಮತ್ತು ಓರ್ವ ಅಧಿಕಾರಿ ತೀವ್ರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಾಂದ್ರಿ ಮತ್ತು ಮಾಲ್ಥೋನ್ ನಡುವಿನ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಜೀಪ್, ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಪೊಲೀಸ್ ಸಿಬ್ಬಂದಿ ವಾಹನದ ಮೇಲೆ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟ್ರಕ್ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಕುರಿತು ಬಾಂಡ್ರಿ ಪೊಲೀಸ್ ಠಾಣೆಯ ಉಸ್ತುವಾರಿ ಸುಮೇರ್ ಜಗತ್ ಮಾತನಾಡಿದ್ದು, ಬಾಂಬ್ ನಿಷ್ಕ್ರಿಯ ದಳದ ನಾಲ್ವರು ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೊರೆನಾ ಮೂಲದ ಕಾನ್‌ಸ್ಟೆಬಲ್ ಪ್ರಧುಮನ್ ದೀಕ್ಷಿತ್, ಅಮನ್ ಕೌರವ್, ಚಾಲಕ ಪರಮಲಾಲ್ ತೋಮರ್ ಹಾಗೂ ಭಿಂಡ್ ಮೂಈಲದ ಶ್ವಾನ ಮಾಸ್ಟರ್ ವಿನೋದ್ ಶರ್ಮಾ ಮೃತಪಟ್ಟವರು. ಗಾಯಾಗಳು ರಾಜೀವ್ ಚೌಹಾಣ್ ಅವರನ್ನು ಭೋಪಾಲ್​ನ ಬನ್ಸಾಲ್​​ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂಡದಲ್ಲಿದ್ದ ನಾಯಿ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net