ಆದರೆ ಮಧುರೈ ಜಿಲ್ಲಾಡಳಿತ ಕೋಮು ಸಂಘರ್ಷದ ನೆಪವೊಡ್ಡಿ ತಿರುಪ್ಪರಕುಂದ್ರಂನಲ್ಲಿ ಸೆಕ್ಷನ್ 144 ಸೆಕ್ಷನ್ ಜಾರಿಗೊಳಿಸಿ, ನ್ಯಾಯಾಲಯ ಆದೇಶವನ್ನು ಪಾಲಿಸಲಿಲ್ಲ. ಈ ಹಿನ್ನೆಲೆ ಡಿ. 4ರಂದು ನ್ಯಾಯಾಂಗ ನಿಂದನೆ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ, ಕಾರ್ತಿಗೈ ದೀಪಂ ಹಬ್ಬದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ರದ್ದುಗೊಳಿಸಿತು. ನಿನ್ನೆ ವಿಚಾರಣೆ ನಡೆಸಿ ನ್ಯಾಯಾಧೀಶರು ಸಿಎಸ್, ಎಡಿಜಿಪಿಗೆ ಕೋರ್ಟ್ಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದಾರೆ.