ಮಾಜಿ ಉಪ ಸಭಾಪತಿ ಆಶಿಶ್​​ ಬ್ಯಾನರ್ಜಿ ನಿಧನ: ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆಯಾದ ದೀದಿ ಆಪ್ತ! Ashish Banerjee

ಪಶ್ಚಿಮ ಬಂಗಾಳದ ಮಾಜಿ ಉಪ ಸಭಾಪತಿ ಹಾಗೂ ಟಿಎಂಸಿ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ನಿಧನ
ಪಶ್ಚಿಮ ಬಂಗಾಳದ ಮಾಜಿ ಉಪ ಸಭಾಪತಿ ಹಾಗೂ ಟಿಎಂಸಿ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ನಿಧನ
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದ ಮಾಜಿ ಉಪ ಸಭಾಪತಿ ಹಾಗೂ ಟಿಎಂಸಿ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ನಿಧನ
  • ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆಯಾದ ಆಶಿಶ್​ ಬ್ಯಾನರ್ಜಿ
  • ಮಾಜಿ ಸಿಎಂ ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಆಶಿಶ್​ ಬ್ಯಾನರ್ಜಿ
ಕೊಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪ ಸಭಾಪತಿ ಆಶಿಶ್​ ಬ್ಯಾನರ್ಜಿ (Ashish Banerjee) ಬಿರ್ಭುಮ್​ನಲ್ಲಿರುವ ತೃಣಮೂಲ ಕಾಂಗ್ರೆಸ್​ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ವರದಿಯಾಗಿದೆ.
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿ ಪ್ರಮುಖರಾಗಿದ್ದ ಆಶಿಶ್​ ಭಾನುವಾರ (ಆ.16) ಸಾವನ್ನಪ್ಪಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ಸದ್ಯ ಇವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಐದು ಬಾರಿ ಎಂಎಲ್​ಎ!

ರಾಂಪುರ್ಹತ್ ಕ್ಷೇತ್ರದಿಂದ ಭರ್ತಿ ಐದು ಬಾರಿ ಎಂಎಲ್​ಎ ಆಗಿ ಆಯ್ಕೆಯಾಗಿದ್ದ ಆಶಿಶ್​ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ, ಒಮ್ಮೆ ಶಿಕ್ಷಣ ಸಚಿವರಾಗಿ, ಇಮ್ಮೊಮ್ಮೆ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಧ್ರುಬಾ ಸಹಾ ವಿರುದ್ಧ ಆಶಿಶ್​ ಪರಾಜಿತರಾಗಿದ್ದರು.

ತನಿಖೆ ನಡೆಯುತ್ತಿದೆ!


ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡದ ಬಂಗಾಳ ಪೊಲೀಸರು, ಮಾಜಿ ಉಪ ಸಭಾಪತಿಗಳು ಟಿಎಂಸಿ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯಕೀಯ ವರದಿ ದೊರೆತ ನಂತರ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ಸದ್ಯ ತನಿಖೆ ಮುಂದುವರಿದಿದೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net