ದಳಪತಿ ವಿಜಯ್ ಅಧಿಕಾರಕ್ಕೇರುವ ಮುನ್ನವೇ ಮೊದಲ ಶಾಕ್; ಪೋಕ್ಸೋ ಕೇಸ್ನಲ್ಲಿ ಟಿವಿಕೆ ಕಾರ್ಯಕರ್ತನ ಬಂಧನ | TVK activist
ಬಂಧಿತ ಆರೋಪಿ ದಿನೇಶ್
Published on:
Copied
Follow Us
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಅಧಿಕಾರಕ್ಕೇರುವ ಮೊದಲೇ ಪಕ್ಷದ ಕಾರ್ಯಕರ್ತನೊಬ್ಬನನ್ನು(TVK activist) 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪೋಕ್ಸೋ ಕೇಸ್ನಲ್ಲಿ ಬಂಧಿಸಲಾಗಿದೆ.
ಆರೋಪಿಯನ್ನು 45 ವರ್ಷದ ಟಿವಿಕೆ ಸದಸ್ಯ ದಿನೇಶ್ ಅಲಿಯಾಸ್ ಪಂಬು ದಿನೇಶ್ ಎಂದು ಗುರುತಿಸಲಾಗಿದೆ. ಚೆನ್ನೈನ ಕಾಸಿಮೇಡು ಸಿಂಗಾರವೇಲನ್ ನಗರದ ನಿವಾಸಿ. ಮೈಲಾಪುರದ 10 ವರ್ಷದ ಬಾಲಕಿ ಆ ಪ್ರದೇಶದ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಹೊರಗೆ ಆಟವಾಡುತ್ತಿದ್ದಾಗ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಬಾಲಕಿ ತನ್ನ ಸಂಬಂಧಿ ಮಹಿಳೆಗೆ ಘಟನೆಯ ಬಗ್ಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಯಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ಆರೋಪಿ ದಿನೇಶ್ನನ್ನು ಮೇ 04ರಂದೇ ಪೊಲೀಸರು ಬಂಧಿಸಲು ಪ್ರಯತ್ನಿಸಿದ್ದರು. ಆದರೆ ಆರ್ ಕೆ ನಗರ ಕ್ಷೇತ್ರದ ಟಿವಿಕೆ ಅಭ್ಯರ್ಥಿಯನ್ನು ಬೆಂಬಲಿಸಲು ಮತ ಎಣಿಕೆ ಕೇಂದ್ರದಲ್ಲಿದ್ದ ಕಾರಣ ಪೊಲೀಸರು ಬಂಧಿಸಿರಲಿಲ್ಲ. ಮತ ಎಣಿಕೆ ಮುಗಿದ ಬಳಿಕ ಅಂದು ರಾತ್ರಿಯೇ ಬಂಧಿಸಿದ್ದಾರೆ (ಏಜೆನ್ಸೀಸ್).