ಕೊಚ್ಚಿ: ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಗೌರವವಾದ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2026 (Filmfare Awards South 2026) ಅದ್ಧೂರಿಯಾಗಿ ಜರುಗಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ದಿಗ್ಗಜರು ಒಂದೇ ಸೂರಿನಡಿ ಸೇರಿದ ಈ ಸಮಾರಂಭದಲ್ಲಿ, ಕಲೆ ಮತ್ತು ಪ್ರತಿಭೆಗೆ ಸಲ್ಲಬೇಕಾದ ಅತ್ಯುನ್ನತ ಪುರಸ್ಕಾರಗಳನ್ನು ಘೋಷಿಸಲಾಗಿದೆ. ಕನ್ನಡದ ಪರವಾಗಿ ಬಘೀರ ಚಿತ್ರದಲ್ಲಿ ಶ್ರೀಮುರಳಿ ಮಿಂಚಿದರೆ, ತೆಲುಗಿನಲ್ಲಿ 'ಪುಷ್ಪ-2' ಅಬ್ಬರ ಮುಂದುವರಿದಿದೆ.