ಚಿತ್ರದ ಟ್ರೈಲರ್‌ನಲ್ಲಿ ಹಿಂದೂ ಯುವತಿಯೊಬ್ಬಳಿಗೆ ಬಲವಂತವಾಗಿ ಗೋಮಾಂಸ ತಿನ್ನಿಸುವ ದೃಶ್ಯವಿದ್ದು, ಇದು ಕೇರಳದಾದ್ಯಂತ ಭಾರಿ ವಿರೋಧಕ್ಕೆ ಕಾರಣವಾಗಿದೆ. ಈ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿದ ಅನುರಾಗ್, ಯಾರಾದರೂ ಈ ರೀತಿ ಬಲವಂತವಾಗಿ ಬೀಫ್ ತಿನ್ನಿಸುತ್ತಾರಾ, ಇಷ್ಟೊಂದು ಅತಿರೇಕವಾಗಿ ಯಾರು ಕಿಚಡಿಯನ್ನೂ ತಿನ್ನಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಚಿತ್ರದಲ್ಲಿ ವಾಸ್ತವಕ್ಕಿಂತ ಹೆಚ್ಚಾಗಿ ದ್ವೇಷ ಬಿತ್ತುವ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದ್ದಾರೆ.