ಬಿಜೆಪಿ, RSS ಬೆಂಬಲಿಗರಿಗೆ ಭಯ, ದ್ವೇಷವು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ: ಮಡಿಲಲ್ಲಿ ಕುಳಿತುಕೊಳ್ಳುವ ಹೇಳಿಕೆ ಟ್ರೋಲ್​ಗೆ ರಾಹುಲ್ ತಿರುಗೇಟು | Rahul Gandhi

ತಮ್ಮ ತಂದೆ-ತಾಯಿ ಊಟದ ಸಮಯದಲ್ಲಿ ಒಬ್ಬರ ಮಡಿಲಿನಲ್ಲೊಬ್ಬರು ಕುಳಿತುಕೊಳ್ಳುತ್ತಿದ್ದರು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್​ಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ, ಆರ್​ಎಸ್​ಎಸ್​ ಬೆಂಬಲಿಗರಿಗೆ ಭಯ, ಕೋಪ ಹಾಗೂ ದ್ವೇಷವು ಅವರನ್ನು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ, RSS ಬೆಂಬಲಿಗರಿಗೆ ಭಯ, ದ್ವೇಷವು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ: ಮಡಿಲಲ್ಲಿ ಕುಳಿತುಕೊಳ್ಳುವ ಹೇಳಿಕೆ ಟ್ರೋಲ್​ಗೆ ರಾಹುಲ್ ತಿರುಗೇಟು | Rahul Gandhi
Published on: 

ನವದೆಹಲಿ: ತಂದೆ-ತಾಯಿ ಊಟದ ಸಮಯದಲ್ಲಿ ಒಬ್ಬರ ಮಡಿಲಿನಲ್ಲೊಬ್ಬರು ಕುಳಿತುಕೊಳ್ಳುತ್ತಿದ್ದರು ಎಂಬ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್​ಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ, ಆರ್​ಎಸ್​ಎಸ್​ ಬೆಂಬಲಿಗರಿಗೆ ಭಯ, ಕೋಪ ಹಾಗೂ ದ್ವೇಷವು ಅವರನ್ನು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಂಗಳವಾರ(ನ. 17) ಎಕ್ಸ್​​ನಲ್ಲಿ ಪೋಸ್ಟ್ ಹಾಕಿರುವ ಅವರು, ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬೆಂಬಲಿಗರ ಹೃದಯಗಳಲ್ಲಿ ಒಂದು ಜಾಲವನ್ನು ಹೆಣೆದಿವೆ. ಇದು ಅವರು ಪ್ರೀತಿಯನ್ನು ಅನುಭವಿಸದಂತೆ ಮತ್ತು ವ್ಯಕ್ತಪಡಿಸದಂತೆ ತಡೆಯುತ್ತಿದೆ ಎಂದಿದ್ದಾರೆ.

ಜೊತೆಗೆ ಶಿವನ ತೊಡೆಯ ಮೇಲೆ ಪಾರ್ವತಿ ದೇವಿ ಕುಳಿತಿರುವ ದೃಶ್ಯವನ್ನು ಬಿಂಬಿಸುವ 12ನೇ ಶತಮಾನದ ದೇವಾಲಯದ ಶಿಲ್ಪವೊಂದರ ಛಾಯಾಚಿತ್ರವನ್ನೂ ಹಂಚಿಕೊಂಡಿರುವ ರಾಹುಲ್ ಗಾಂಧಿ, ಒಬ್ಬ ನಿಜವಾದ ಹಿಂದೂವಾಗಿ, ಅವರನ್ನು ಈ ಜಾಲದಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗ ಅವರು ಕೂಡ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಆಪ್ತತೆಯ ಅದ್ಭುತ ಸೌಂದರ್ಯ ಹಾಗೂ ಆನಂದವನ್ನು ಅನುಭವಿಸಲು ಪ್ರಾರಂಭಿಸಬಹುದು. ಸತ್ಯಂ ಶಿವಂ ಸುಂದರಂ ಎಂದು ಬರೆದುಕೊಂಡಿದ್ದಾರೆ.

Also Read
"ಬಾ, ಅಪ್ಪ-ಅಮ್ಮ ಭೇಟಿಯಾದ ಜಾಗ ತೋರಿಸ್ತೀನಿ":ಅದೇ ರೆಸ್ಟೋರೆಂಟ್‌ಗೆ ನನ್ನ ಗರ್ಲ್‌ಫ್ರೆಂಡ್‌ನ ಕರೆದೊಯ್ದಿದ್ದೆ; ಕಾಲೇಜು ದಿನಗಳ ಸೀಕ್ರೆಟ್ ಬಿಚ್ಚಿಟ್ಟ ರಾಹುಲ್ ಗಾಂಧಿ! Rahul Gandhi
ಬಿಜೆಪಿ, RSS ಬೆಂಬಲಿಗರಿಗೆ ಭಯ, ದ್ವೇಷವು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ: ಮಡಿಲಲ್ಲಿ ಕುಳಿತುಕೊಳ್ಳುವ ಹೇಳಿಕೆ ಟ್ರೋಲ್​ಗೆ ರಾಹುಲ್ ತಿರುಗೇಟು | Rahul Gandhi

ಸೋಮವಾರ ತಮ್ಮ ತಾಯಿ ಸೋನಿಯಾ ಗಾಂಧಿಯವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಪೋಷಕರ ನಡುವಿನ ಆಪ್ತ ಬಾಂಧವ್ಯವನ್ನು ನೆನಪಿಸಿಕೊಂಡಿದ್ದ ಅವರು, ಊಟದ ಸಮಯದಲ್ಲಿ ತಮ್ಮ ತಾಯಿ ತಂದೆಯ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದು ಹೇಳಿದ್ದರು.

ಇದು ಸಹಜ ಎಂದು ನಾನು ಆರಂಭದಲ್ಲಿ ಭಾವಿಸಿದ್ದೆ, ಆದರೆ ನನ್ನ ಸ್ನೇಹಿತರ ಪೋಷಕರ ನಡುವೆ ಇಂತಹ ಬಾಂಧವ್ಯ ಇಲ್ಲದಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೆ ಎಂದು ತಿಳಿಸಿದ್ದರು. ಈ ಹೇಳಿಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಬಿಜೆಪಿ, ಆರ್​ಎಸ್ಎಸ್ ನಾಯಕರು ಮತ್ತು ಅವರ ಬೆಂಬಲಿಗರಿಂದ ಟೀಕೆಗೆ ಗುರಿಯಾಗಿದೆ.

Also Read
ಕುಟುಂಬದ ಬಗ್ಗೆ ಹಬ್ಬಿರುವ ಸುಳ್ಳುಗಳಿಗೆ ಉತ್ತರ ಕೊಡಲು ಪುಸ್ತಕ ಬರೆದೆ: ಆತ್ಮಕಥೆ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು? Sonia Gandhi
ಬಿಜೆಪಿ, RSS ಬೆಂಬಲಿಗರಿಗೆ ಭಯ, ದ್ವೇಷವು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ: ಮಡಿಲಲ್ಲಿ ಕುಳಿತುಕೊಳ್ಳುವ ಹೇಳಿಕೆ ಟ್ರೋಲ್​ಗೆ ರಾಹುಲ್ ತಿರುಗೇಟು | Rahul Gandhi

ಎಕ್ಸ್​ ಖಾತೆಯಲ್ಲಿ ರಾಹುಲ್ ಗಾಂಧಿ ಭಾಷಣದ ವಿಡಿಯೋ ಹಂಚಿಕೊಂಡಿದ್ದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕ್ಷಮಿಸಿ ಮೇಡಂ, ನಿಮ್ಮ ಜೀವನದ ಇಂತಹ ವಿಶೇಷ ದಿನದಂದೂ ಕೂಡ ಅವರು ನಿಮಗೆ ಮುಜುಗರ ಉಂಟಾಗದಂತೆ ನೋಡಿಕೊಳ್ಳಲಿಲ್ಲ. ದೇಶಕ್ಕೆ ಇದು ಬಹಳ ಹಿಂದೆಯೇ ಅರಿವಾಗಿತ್ತು. ಈಗಲಾದರೂ ನಿಮಗೂ ಇದು ಅರ್ಥವಾಗಬಹುದು ಎಂದು ಭಾವಿಸುತ್ತೇನೆ. ವಿಫಲ ಉತ್ಪನ್ನವನ್ನು ಎಷ್ಟೇ ಬಾರಿ ಲಾಂಚ್ ಮಾಡಿದ್ರೂ ಯಾವುದೇ ಪ್ರಯೋಜನವಿಲ್ಲ ಎಂದು ಬರೆದುಕೊಂಡಿದ್ದರು.

ರಾಹುಲ್ ಗಾಂಧಿಯವರ ತಮ್ಮ ಪೋಷಕರು ಒಬ್ಬರನೊಬ್ಬರು ಮಡಿಲಿಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದಿದ್ದು,ಕೆಲವರು ಗಾಂಧಿಯವರನ್ನು ಟೀಕಿಸಿದರೆ, ಮತ್ತೆ ಕೆಲವರು ತಮ್ಮ ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಕ್ಕಾಗಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ (ಏಜೆನ್ಸೀಸ್).