"ಬಾ, ಅಪ್ಪ-ಅಮ್ಮ ಭೇಟಿಯಾದ ಜಾಗ ತೋರಿಸ್ತೀನಿ":ಅದೇ ರೆಸ್ಟೋರೆಂಟ್‌ಗೆ ನನ್ನ ಗರ್ಲ್‌ಫ್ರೆಂಡ್‌ನ ಕರೆದೊಯ್ದಿದ್ದೆ; ಕಾಲೇಜು ದಿನಗಳ ಸೀಕ್ರೆಟ್ ಬಿಚ್ಚಿಟ್ಟ ರಾಹುಲ್ ಗಾಂಧಿ! Rahul Gandhi

Rahul Gandhi shared a nostalgic memory, mentioning that he had taken his girlfriend to the Varsity Restaurant in Cambridge—the very place where his parents, Rajiv Gandhi and Sonia Gandhi, first met.
ತಮ್ಮ ಪೋಷಕರಾದ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೊದಲ ಬಾರಿಗೆ ಭೇಟಿಯಾಗಿದ್ದ ಕೇಂಬ್ರಿಡ್ಜ್‌ನ ವಾರ್ಸಿಟಿ ರೆಸ್ಟೋರೆಂಟ್‌ಗೆ ತಾವೂ ತಮ್ಮ ಗೆಳತಿಯನ್ನು ಕರೆದೊಯ್ದಿದ್ದಾಗಿ ರಾಹುಲ್ ಗಾಂಧಿ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
Published on: 

ನವದೆಹಲಿ: ರಾಜಕೀಯ ವೇದಿಕೆಗಳಲ್ಲಿ ಸದಾ ಗಂಭೀರವಾಗಿ ಕಾಣಿಸಿಕೊಳ್ಳುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ಕಾಲೇಜು ದಿನಗಳ ಒಂದು ಅಪರೂಪದ ಮತ್ತು ರೊಮ್ಯಾಂಟಿಕ್ ನೆನಪನ್ನು ಹಂಚಿಕೊಂಡಿದ್ದಾರೆ.

ತಮ್ಮ ಪಾಲಕರಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೊದಲ ಬಾರಿಗೆ ಭೇಟಿಯಾಗಿದ್ದ ರೆಸ್ಟೋರೆಂಟ್​ಗೆ, ತಾವು ಕೇಂಬ್ರಿಡ್ಜ್‌ನಲ್ಲಿ ಓದುತ್ತಿದ್ದಾಗ ತಮ್ಮ ಗರ್ಲ್‌ಫ್ರೆಂಡ್​​ಅನ್ನು ಒಂದಕ್ಕೆ ಕರೆದೊಯ್ದಿದ್ದಾಗಿ ರಾಹುಲ್ ಬಹಿರಂಗಪಡಿಸಿದ್ದಾರೆ.

ಅಪ್ಪ-ಅಮ್ಮನ ಲವ್ ಸ್ಟೋರಿ ತೋರಿಸಿದ್ದ ರಾಹುಲ್!

ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ತಮ್ಮ ಪೋಷಕರ ಪ್ರೇಮಕಥೆಯ ಬಗ್ಗೆ ಮನಬಿಚ್ಚಿ ಮಾತನಾಡಿದರು.

ನಮ್ಮ ಮನೆಯಲ್ಲಿ ಅಪ್ಪ-ಅಮ್ಮ ಮೊದಲ ಬಾರಿ ಹೇಗೆ ಭೇಟಿಯಾದರು ಎಂಬ ಕಥೆ ತುಂಬಾ ವಿಶೇಷವಾಗಿತ್ತು. ಹಲವು ವರ್ಷಗಳ ನಂತರ ನಾನು ಕೂಡ ಕೇಂಬ್ರಿಡ್ಜ್‌ನಲ್ಲಿ ಓದುತ್ತಿದ್ದೆ. ಆಗ ನನ್ನ ಗೆಳತಿಯ ಬಳಿ ಬಾ, ನಿನಗೊಂದು ರೆಸ್ಟೋರೆಂಟ್ ತೋರಿಸ್ತೀನಿ, ಅಲ್ಲಿಗೆ ಹೋಗೋಣ ಅಂತ ಕರೆದೊಯ್ದಿದ್ದೆ.

ನನ್ನ ಪೋಷಕರು ಮೊದಲ ಬಾರಿಗೆ ಎಲ್ಲಿ ಮತ್ತು ಹೇಗೆ ಭೇಟಿಯಾದರು ಎಂಬುದನ್ನು ಅವಳಿಗೆ ತೋರಿಸಬೇಕು ಎಂಬುದು ನನ್ನ ಆಸೆಯಾಗಿತ್ತು ಎಂದು ರಾಹುಲ್ ನಗುತ್ತಲೇ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

Also Read
ವರ್ಕೌಟ್ ತಂದ ಆಪತ್ತು: ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿ ದಾರುಣ ಸಾ*ವು; ವಿಡಿಯೋ ವೈರಲ್​! Treadmill Accident
Rahul Gandhi shared a nostalgic memory, mentioning that he had taken his girlfriend to the Varsity Restaurant in Cambridge—the very place where his parents, Rajiv Gandhi and Sonia Gandhi, first met.

1965 ರಲ್ಲಿ ಶುರುವಾಗಿದ್ದ ರಾಜೀವ್-ಸೋನಿಯಾ ಪ್ರೇಮಕಥೆ!

1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿದ್ದ 'ವಾರ್ಸಿಟಿ ರೆಸ್ಟೋರೆಂಟ್' ಎಂಬ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ರಾಜೀವ್​ ಮತ್ತು ಸೋನಿಯಾ ಬೇಟಿಯಾಗಿದ್ದರು. ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಈ ಸುಂದರ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆಗಿನ ಕಾಲದಲ್ಲಿ ಭಾರತ ಮತ್ತು ಯುರೋಪ್ ದೇಶಗಳ ವಿದ್ಯಾರ್ಥಿಗಳು ಈ ರೆಸ್ಟೋರೆಂಟ್‌ಗೆ ಹೆಚ್ಚಾಗಿ ಬರುತ್ತಿದ್ದರು. ಇಟಲಿಯಿಂದ ಬಂದಿದ್ದ ಸೋನಿಯಾ ಅವರಿಗೆ ತಮ್ಮ ದೇಶದ ಊಟಕ್ಕೆ ಹತ್ತಿರವಾದ ಆಹಾರ ಬೇಕಿತ್ತು. ಅದನ್ನು ಹುಡುಕಿಕೊಂಡು ಹೋದಾಗ ಅವರಿಗೆ ಈ ಗ್ರೀಕ್ ರೆಸ್ಟೋರೆಂಟ್ ಸಿಕ್ಕಿತ್ತು. ಅಲ್ಲಿ ಅವರಿಬ್ಬರಿಗೂ ಪರಿಚಯವಿದ್ದ ಸ್ನೇಹಿತರೊಬ್ಬರು, ರಾಜೀವ್ ಗಾಂಧಿಯನ್ನು ಸೋನಿಯಾ ಅವರಿಗೆ ಪರಿಚಯಿಸಿದ್ದರು.

ಮೊದಲ ಭೇಟಿಯಲ್ಲೇ ಚಿಗುರಿದ ಪ್ರೀತಿ

ರಾಜೀವ್ ಗಾಂಧಿಯನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣದ ಬಗ್ಗೆ ಸೋನಿಯಾ ಗಾಂಧಿ ಕೂಡ ಭಾವುಕರಾಗಿ ಬರೆದುಕೊಂಡಿದ್ದಾರೆ. ರಾಜೀವ್ ಅವರನ್ನು ನೋಡಿದ ತಕ್ಷಣವೇ ಅವರೊಂದಿಗೆ ಏನೋ ಒಂದು ವಿಶೇಷ ನಂಟು ಇದೆ ಅನ್ನಿಸಿತು. ಅವರು ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಮೊದಲು ನಾವು ಒಳ್ಳೆಯ ಸ್ನೇಹಿತರಾದೆವು, ಜೊತೆಯಾಗಿ ಪಾರ್ಟಿಗಳಿಗೆ ಹೋದೆವು, ಸುತ್ತಾಡಿದೆವು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

Also Read
ಕುಟುಂಬದ ಬಗ್ಗೆ ಹಬ್ಬಿರುವ ಸುಳ್ಳುಗಳಿಗೆ ಉತ್ತರ ಕೊಡಲು ಪುಸ್ತಕ ಬರೆದೆ: ಆತ್ಮಕಥೆ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು? Sonia Gandhi
Rahul Gandhi shared a nostalgic memory, mentioning that he had taken his girlfriend to the Varsity Restaurant in Cambridge—the very place where his parents, Rajiv Gandhi and Sonia Gandhi, first met.

ಈ ಸ್ನೇಹ ನಂತರ ಪ್ರೀತಿಗೆ ತಿರುಗಿ, 1968 ರ ಫೆಬ್ರವರಿ 25ರಂದು ರಾಜೀವ್ ಮತ್ತು ಸೋನಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. "ಕೇಂಬ್ರಿಡ್ಜ್‌ನ ಆ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ನನ್ನ ಪ್ರೇಮಯಾನ ಶುರುವಾಯಿತು. ನಾನು ಮತ್ತು ರಾಜೀವ್ ಪ್ರೀತಿ, ನಗು ಮತ್ತು ಸುಂದರ ನೆನಪುಗಳಿಂದ ತುಂಬಿದ ಒಂದು ಹೊಸ ಪ್ರಪಂಚವನ್ನೇ ಕಟ್ಟಿಕೊಂಡೆವು" ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಒಟ್ಟಿನಲ್ಲಿ, ಅಪ್ಪ-ಅಮ್ಮನ ಪ್ರೀತಿ ಚಿಗುರಿದ ಅದೇ ಜಾಗಕ್ಕೆ ರಾಹುಲ್ ತಮ್ಮ ಗೆಳತಿಯನ್ನು ಕರೆದೊಯ್ದಿದ್ದ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ, (ಏಜೆನ್ಸೀಸ್​).