

ಕಳೆದ ಕೆಲ ದಿನಗಳಲ್ಲಿ ಮಹಾರಷ್ಟ್ರದಲ್ಲಿ ಆಹಾರ ಸುರಕ್ಷತೆ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಖ್ಯಾತನಾಮ, ವಿಶ್ವವಿಖ್ಯಾತ ಆಹಾರ ಮಳಿಗೆಗಳು ಸೇರಿದಂತೆ ತಯಾರಿಸುವ ಆಹಾರದಲ್ಲಿ ಲೋಪ ಕಂಡುಬಂದಲ್ಲಿ ಕೂಡಲೇ ಪರವಾನಗಿಯನ್ನು ರದ್ದುಪಡಿಸುತ್ತಿರುವ ಟ್ರೆಂಡ್ ಆರಂಭವಾಗಿದೆ.
ನೋಟಿಸ್ ನೀಡಿದ ಹಾಗೂ ಪರವಾನಗಿ ರದ್ದು ಪಡಿಸಿದ ಆಹಾರ ಮಳಿಗೆಗಳ ಅಡುಗೆ ಮನೆಯಲ್ಲಿ ಕೊಳಕಾದ ನೆಲ, ಪಾತ್ರೆಗಳಲ್ಲಿ ನೊಣ ಹಾಗೂ ಜಿರಳೆ ಅಧಿಕವಾಗಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್‌ಡೊನಾಲ್ಡ್ಸ್ ಗೆ ಬೀಗ!
ಪರಿಶೀಲನೆ ವೇಳೆ, ಜೇಡರ ಬಲೆ, ಶುಚಿಯಾಗಿರದ ಕೋಲ್ಡ್ ಸ್ಟೋರೆಜ್. ಅಡುಗೆ ಮನೆ ನೆಲದ ಮೇಲೆ ಆಹಾರ ತ್ಯಾಜ್ಯ, ಶುಚಿಗೊಳಿಸದ ಬಟ್ಟೆಗಳು ಕಂಡುಬಂದ ಹಿನ್ನಲೆ ಪರವಾನಗಿ ರದ್ದಾಗಿದೆ.