ತಾನು ಆಯ್ಕೆ ಮಾಡಿದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಲಗಿದ್ದಲ್ಲೇ ಮಗಳನ್ನು ಮುಗಿಸಿದ ತಂದೆ | Murder Case

ತಾನು ಆಯ್ಕೆ ಮಾಡಿದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿ, ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ 19 ವರ್ಷದ ಮಗಳನ್ನ ಆಕೆಯ ತಂದೆಯೇ ಮಲಗಿದ್ದಾಗಲೇ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಮಂಗಳವಾರ(ಅ. 20) ವರದಿಯಾಗಿದೆ.
crime
Published on: 

ಲಖನೌ: ತಾನು ಆಯ್ಕೆ ಮಾಡಿದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿ, ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ 19 ವರ್ಷದ ಮಗಳನ್ನ ಆಕೆಯ ತಂದೆಯೇ ಮಲಗಿದ್ದಾಗಲೇ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಮಂಗಳವಾರ(ಅ. 20) ವರದಿಯಾಗಿದೆ.

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಭೋಂಗಾವ್ ಪಟ್ಟಣದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಶಾಜಿಯಾ ಕೊಲೆಯಾದ ಮಗಳು. ಆಕೆಯ ತಂದೆ ಆಸಿನ್ ಖಾನ್ ಕೊಲೆ ಮಾಡಿದ ಆರೋಪಿ. ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸಿಂಗ್, ಕೊಲೆಯಾದ ಶಾಜಿಯಾ ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಮತ್ತು ಅವನನ್ನು ಮದುವೆಯಾಗಲು ಬಯಸಿದ್ದಳು. ಆದ್ರೆ ಕೂಲಿ ಕೆಲಸ ಮಾಡುವ ಆಕೆಯ ತಂದೆ ಆಸಿನ್ ಖಾನ್ ನ. 19ರಂದು ಬೇರೊಬ್ಬ ವ್ಯಕ್ತಿಯೊಂದಿಗೆ ಅವಳ ಮದುವೆಯನ್ನು ನಿಶ್ಚಯಿಸಿದ್ದರು. ಇದರಿಂದ ಗಲಾಟೆ ನಡೆದು, ಯುವತಿ ತಾನು ಮದುವೆಯಾಗಲ್ಲ ಎಂದು ಹಠ ಹಿಡಿದಿದ್ದರಿಂದ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

Also Read
ಅಧಿವೇಶನದ ವೇಳೆ ಪ್ರಧಾನಿ ವಿದೇಶಿ ಪ್ರವಾಸ ಮಾಡೋದಿಲ್ಲವೇ?: ರಾಹುಲ್ ಗಾಂಧಿ ಬಗೆಗಿನ ಬಿಜೆಪಿ ಟ್ರೋಲ್​ಗೆ ಕಾಂಗ್ರೆಸ್ ತಿರುಗೇಟು |Congress
crime

ಮನೆಯಲ್ಲಿ ಯುವತಿ ಮಲಗಿದ್ದಾಗ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿದ ಯುವತಿಯ ತಾಯಿ ಖೇರುನಿಶಾ ಕೋಣೆಗೆ ಧಾವಿಸಿ ಗಾಯಗೊಂಡ ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಆಕೆಯನ್ನು ಸೈಫೈ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಶಾಜಿಯಾ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ತಾಯಿ ಖೇರುನಿಶಾ ನೀಡಿದ ದೂರಿನನ್ವಯ ಆಸಿನ್ ಖಾನ್​ನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಗೆ ನಡೆಯುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net