ಅಧಿವೇಶನದ ವೇಳೆ ಪ್ರಧಾನಿ ವಿದೇಶಿ ಪ್ರವಾಸ ಮಾಡೋದಿಲ್ಲವೇ?: ರಾಹುಲ್ ಗಾಂಧಿ ಬಗೆಗಿನ ಬಿಜೆಪಿ ಟ್ರೋಲ್​ಗೆ ಕಾಂಗ್ರೆಸ್ ತಿರುಗೇಟು |Congress

ಎಸ್ಐಆರ್ ಬಗ್ಗೆ ದೇಶದಲ್ಲಿ ಸುಳ್ಳು ಹಬ್ಬಿಸಿ ಸಾಕಾಯ್ತು ಹೀಗಾಗಿ ವಿಯೇಟ್ನಾಂ ತೆರಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಬಿಜೆಪಿಯ ಟ್ರೋಲ್​ಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಧಿವೇಶನದ ವೇಳೆ ಪ್ರಧಾನಿ ವಿದೇಶಿ ಪ್ರವಾಸ ಮಾಡೋದಿಲ್ಲವೇ ಎಂದು ಪ್ರಶ್ನಿಸಿದೆ.
ಅಧಿವೇಶನದ ವೇಳೆ ಪ್ರಧಾನಿ ವಿದೇಶಿ ಪ್ರವಾಸ ಮಾಡೋದಿಲ್ಲವೇ?: ರಾಹುಲ್ ಗಾಂಧಿ ಬಗೆಗಿನ ಬಿಜೆಪಿ ಟ್ರೋಲ್​ಗೆ ಕಾಂಗ್ರೆಸ್ ತಿರುಗೇಟು |Congress
Published on: 

ನವದೆಹಲಿ: ಎಸ್ಐಆರ್ ಬಗ್ಗೆ ದೇಶದಲ್ಲಿ ಸುಳ್ಳು ಹಬ್ಬಿಸಿ ಸಾಕಾಯ್ತು ಹೀಗಾಗಿ ವಿಯೇಟ್ನಾಂ ತೆರಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಬಿಜೆಪಿಯ ಟ್ರೋಲ್​ಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಧಿವೇಶನದ ವೇಳೆ ಪ್ರಧಾನಿ ವಿದೇಶಿ ಪ್ರವಾಸ ಮಾಡೋದಿಲ್ಲವೇ ಎಂದು ಪ್ರಶ್ನಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ವಿರೋಧ ಪಕ್ಷದ ನಾಯಕರ ವಿದೇಶ ಪ್ರವಾಸಗಳನ್ನು ಬಿಜೆಪಿ ಅನಗತ್ಯ ವಿವಾದವನ್ನಾಗಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಯಾರು, ಯಾವಾಗ, ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹದು. ಅದರಲ್ಲೇನು ತಪ್ಪಿದೆ? ರಾಹುಲ್ ಗಾಂಧಿಯವರು ಓರ್ವ ವ್ಯಕ್ತಿ ಜೊತೆಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗೆ ತಮ್ಮದೇ ಆದ ಜವಾಬ್ದಾರಿಗಳಿವೆ. ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಮತ್ತು ಲಂಡನ್‌ನಲ್ಲಿ ಸಂವಾದ ನಡೆಸುತ್ತಾರೆ. ಅಲ್ಲಿನ ಚಿಂತಕರನ್ನು ಭೇಟಿಯಾಗುತ್ತಾರೆ. ಪತ್ರಿಕಾ ಸಂದರ್ಶನಗಳನ್ನೂ ನೀಡುತ್ತಾರೆ. ಆದರೆ ಇದ್ಯಾವೂದನ್ನು ಪ್ರಧಾನಿ ಮೋದಿ ಮಾಡುವುದಿಲ್ಲ ಎಂದಿದ್ದಾರೆ.

Also Read
'ಸುಳ್ಳು ಹಬ್ಬಿಸಿ ಸಾಕಾಯ್ತು, ವಿಯೆಟ್ನಾಂಗೆ ಹೊರಟೆ'; ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿರುದ್ಧ BJP ಟ್ರೋಲ್
ಅಧಿವೇಶನದ ವೇಳೆ ಪ್ರಧಾನಿ ವಿದೇಶಿ ಪ್ರವಾಸ ಮಾಡೋದಿಲ್ಲವೇ?: ರಾಹುಲ್ ಗಾಂಧಿ ಬಗೆಗಿನ ಬಿಜೆಪಿ ಟ್ರೋಲ್​ಗೆ ಕಾಂಗ್ರೆಸ್ ತಿರುಗೇಟು |Congress

ರಾಹುಲ್ ಗಾಂಧಿಯವರ ವಿದೇಶಿ ಪ್ರವಾಕ್ಕೆ ಬಿಜೆಪಿಗೆ ಇರುವ ಸಮಸ್ಯೆಯೇನು? ಲೋಕಸಭಾ ಅಧಿವೇಶನ ನಡೆಯುತ್ತಿರುವಾಗ ಪ್ರಧಾನ ಮಂತ್ರಿಗಳು ವಿದೇಶ ಪ್ರವಾಸ ಕೈಗೊಳ್ಳಬಾರದು ಎಂಬ ಸಂಪ್ರದಾಯ ನಮ್ಮಲ್ಲಿದೆ. ಆದರೆ ನಮ್ಮ ಪ್ರಧಾನ ಮಂತ್ರಿಗಳು ಆ ಸಂಪ್ರದಾಯವನ್ನು ಮುರಿದು, ವಿದೇಶಿ ಪ್ರವಾಸಕ್ಕೆ ಹೋಗೋದಿಲ್ಲವೇ? ಯಾಕೆ ಈ ಕುರಿತು ಯಾವುದೇ ಪ್ರಶ್ನೆಗಳು ಏಳುವುದಿಲ್ಲ? ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ವಿಯೇಟ್ನಾಂ ಪ್ರವಾಸ

ಭಾನುವಾರ ಮಧ್ಯಾಹ್ನ 1.35ರ ಸುಮಾರಿಗೆ ರಾಹುಲ್ ಗಾಂಧಿಯವರು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹನೋಯ್‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈಯಕ್ತಿಕ ಭೇಟಿಯೋ ಅಥವಾ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೋ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾಂಗ್ರೆಸ್ ಸಹ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಬಿಜೆಪಿ ಟ್ರೋಲ್

ರಾಹುಲ್ ಗಾಂಧಿಯವರ ವಿಯೇಟ್ನಾಂ ಪ್ರವಾಸದ ಬಗ್ಗೆ ಟ್ರೋಲ್ ಮಾಡಿರುವ ಬಿಜೆಪಿ, 'ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಾಕಾಯ್ತು. ಈಗ ವಿಯಟ್ನಾಂಗೆ ತೆರಳಿ ಒಂದಷ್ಟು ದಿನ ಸುತ್ತಾಡೋಣ. ಅಲ್ಲಿ ನನ್ನನ್ನು ಯಾರು ಪತ್ತೆ ಹಚ್ಚುತ್ತಾರೆ' ಎಂದು ಇಮೋಜಿ ಹಂಚಿಕೊಂಡಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನೀಲಿ ಟಿ-ಶರ್ಟ್ ಮತ್ತು ಏರ್‌ಪಾಡ್‌ಗಳನ್ನು ಧರಿಸಿ ವಿಮಾನದ ವ್ಯಾಪಾರ ದರ್ಜೆಯ ಕ್ಯಾಬಿನ್‌ನಲ್ಲಿ ಕುಳಿತಿರುವುದು ಕಂಡುಬಂದಿದೆ. ಅವರನ್ನೇ ರಾಹುಲ್ ಗಾಂಧಿ ಎಂದು ತೋರಿಸಲಾಗುತ್ತಿದೆ. ಆದರೆ ವಿಡಿಯೋ ಸ್ಪಷ್ಟವಾಗಿಲ್ಲ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net