ಗೇಟಿಗೆ ಕಟ್ಟಿಹಾಕಿದ್ದ ನಾಯಿ ಮೇಲೆ ಪೈಪ್​ನಿಂದ ಮಾರಣಾಂತಿಕ ದಾಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪ್ಪ-ಮಗನ ಕ್ರೌರ್ಯ! Animal Cruelty

ನಾಯಿ ಬೊಗಳುತ್ತದೆ ಎಂದು ಹಲ್ಲೆ ನಡೆಸಿದ ಅಪ್ಪ-ಮಗ
ನಾಯಿ ಬೊಗಳುತ್ತದೆ ಎಂದು ಹಲ್ಲೆ ನಡೆಸಿದ ಅಪ್ಪ-ಮಗ
Published on

ಪ್ರಮುಖ ಮುಖ್ಯಾಂಶಗಳು

  • ನಾಯಿ ಬೊಗಳುತ್ತದೆ ಎಂದು ಹಲ್ಲೆ ನಡೆಸಿದ ಅಪ್ಪ-ಮಗ
  • ಪೈಪ್​ ಮತ್ತು ಕೋಲುಗಳಿಂದ ಮಾರಣಾತಿಂಕ ಹಲ್ಲೆ
  • ಗುಜರಾತಿನಲ್ಲಿ ನಡೆದಿರಿವ ಘಟನೆ
ಗುಜರಾತ್​: ನಾಯಿ ತಮ್ಮನ್ನ ನೋಡಿ ಬೊಗಳುತ್ತದೆ ಹಾಗೂ ಗಾಡಿ ಹಿಂದೆ ಓಡಿ ಬರುತ್ತದೆ ಎಂದು ಅಪ್ಪ ಮತ್ತು ಮಗ ಪಕ್ಕದ ಮನೆಯವರ ಮನೆಗೆ ನುಗ್ಗಿ ನಾಯಿಯನ್ನು ಥಳಿಸಿರುವ (Animal Cruelty) ಘಟನೆ ಗುಜರಾತ್​ನ ರಾಜಕೋಟ್​ನಲ್ಲಿ ವರದಿಯಾಗಿದೆ.
ಮಾಹಿತಿ ಪ್ರಕಾರ, ಮನೆಯ ಗೇಟಿಗೆ ಕಟ್ಟಿ ಹಾಕಿದ್ದ ನಾಯಿಯನ್ನು ತಂದೆ ಮಹೇಂದ್ರ ಸಿಂಗ್​ ಜಡೇಜಾ ಹಾಗು ಮಗ ಅಭಿರಾಜ್​ ಸಿಂಗ್​ ಜಡೇಯಾ ಕೋಲು ಮತ್ತು ಪೈಪ್​ಗಳಿಂದ ಮನಬಂದಂತೆ ಹೊಡೆದಿದ್ದಾರೆಂದು ಮನೆಯ ಮಾಲೀಕ ದೂರನ್ನು ನೀಡಿದ್ದಾರೆ.
ಈ ನಾಯಿಯು ಜಡೇಜಾ ಪರಿವಾರದ ಮಕ್ಕಳು ಹೊರಗಡೆ ಆಟವಾಡುವಾಗ ಬೊಗಳುವುದು ಹಾಗೂ ಗಾಡಿಯ ಹಿಂದೆ ಓಡಿಬರುತ್ತಿತ್ತು. ಇದರಿಂದ ಕೋಪಗೊಂಡ ಜಡೇಜಾ ಮನೆಯವರು ಮೂಕ ಪ್ರಾಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ನಾಯಿಯನ್ನು ಗೇಟಿಗೆ ಕಟ್ಟಿ ಹಾಕಲಾಗಿತ್ತು. ಒಂದೆ ಸಹ ಮನೆ ಗೇಟನ್ನು ತೆರೆದು ಪ್ರವೇಶಿಸಿದ ಮಹೇಂದ್ರ ಹಾಗೂ ಅಭಿರಾಜ್​ ಜಡೇಜಾ ಕೋಲು ಮತ್ತು ಪೈಪ್​ನಿಂದ ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾಯಿ ನೋವನ್ನು ತಾಳದೆ ಜೋರಾಗಿ ಕೂಗಿ ಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದಾಖಲೆಗಳನ್ನು ಪೊಲೀಸರಿಗೆ ನೀಡಿರುವುದಾಗಿ ಮನೆ ಮುಖ್ಯಸ್ಥ ತಿಳಿಸಿದ್ದಾರೆ.

ಪ್ರಾಣಿ ಹಿಂಸೆಗೆ ನೀಡಲಾಗುವ ಶಿಕ್ಷೆಗಳೇನು?

ಭಾರತದಲ್ಲಿ ಪ್ರಾಣಿ ಹಿಂಸೆ ಅಥವಾ ಪ್ರಾಣಿಗಳ ಮೇಲಿನ ದೌರ್ಜನ್ಯವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 (The Prevention of Cruelty to Animals Act, 1960) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

1. ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಶಿಕ್ಷೆ

ಪ್ರಾಣಿಗಳಿಗೆ ಹೊಡೆಯುವುದು, ಒದೆಯುವುದು, ಅತಿಯಾದ ಹೊರೆ ಹೇರುವುದು, ಕೂಡಿ ಹಾಕುವುದು ಅಥವಾ ಆಹಾರ, ನೀರು ನೀಡದೆ ಹಿಂಸಿಸುವುದು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ.
ಮೊದಲ ಬಾರಿಗೆ ತಪ್ಪು ಮಾಡಿದರೆ 10 ರೂಪಾಯಿಂದ 50 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಆದರೆ ಇದು ಪುನರಾವರ್ತನೆಗೊಂಡರೆ 25 ರಿಂದ 100 ರೂಪಾಯಿ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

2. ಭಾರತೀಯ ನ್ಯಾಯ ಸಂಹಿತೆ (BNS) - ಹಿಂದೆ IPC 428 & 429

ಹೊಸ ಕಾನೂನಿನ ಪ್ರಕಾರ, ಪ್ರಾಣಿಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು ಗಂಭೀರ ಅಪರಾಧವಾಗಿದೆ. ಯಾವುದೇ ಪ್ರಾಣಿಯನ್ನು ವಿಷ ಹಾಕಿ ಕೊಲ್ಲುವುದು ಅಥವಾ ಉಪಯುಕ್ತವಲ್ಲದಂತೆ ಮಾಡುವುದು ಜೈಲು ಶಿಕ್ಷೆ ಮತ್ತು ಹೆಚ್ಚಿನ ದಂಡಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಇಂತಹ ಕೃತ್ಯಗಳಿಗೆ 2 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net