ದೆಹಲಿ ಗಡಿಯಲ್ಲಿ ಮತ್ತೆ ಕಾವೇರಿದ 'ರೈತ ಹೋರಾಟ': ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಪಂಜಾಬ್​ ರೈತರ ತಕರಾರು; ಶಂಭು ಗಡಿಯಲ್ಲಿ ತಡೆದ ಪೊಲೀಸರು! Farmers Protest

ಭಾರತ-ಅಮೆರಿಕ ಕೃಷಿ ಮತ್ತು ವ್ಯಾಪಾರ ಒಪ್ಪಂದ ವಿರೋಧಿಸಿ ಪಂಜಾಬ್ ರೈತರಿಂದ ದೆಹಲಿ ಚಲೋ
ಭಾರತ-ಅಮೆರಿಕ ಕೃಷಿ ಮತ್ತು ವ್ಯಾಪಾರ ಒಪ್ಪಂದ ವಿರೋಧಿಸಿ ಪಂಜಾಬ್ ರೈತರಿಂದ ದೆಹಲಿ ಚಲೋ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ-ಅಮೆರಿಕ ಕೃಷಿ ಮತ್ತು ವ್ಯಾಪಾರ ಒಪ್ಪಂದ ವಿರೋಧಿಸಿ ಪಂಜಾಬ್ ರೈತರಿಂದ ದೆಹಲಿ ಚಲೋ
  • ಶಂಭು ಗಡಿಯಲ್ಲಿ ರೈತರನ್ನು ತಡೆದ ಪೊಲೀಸರು!
  • ಪಂಜಾಬ್ ಸರ್ಕಾರದ ಮೌನಕ್ಕೆ ರೈತರ ಆಕ್ರೋಶ
ನವದೆಹಲಿ: ದೇಶದಲ್ಲಿ ಒಂದು ಕಡೆ ನೀಟ್​ ಪರೀಕ್ಷೆ ಅಕ್ರಮವನ್ನು ಪ್ರಶ್ನಿಸಿ ಸಿಜೆಪಿಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರೆ, ಇನ್ನೊಂದು ಕಡೆ ಅಮೆರಿಕ- ಇಂಡಿಯಾ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ರೈತರು ಹೋರಾಟಕ್ಕೆ (Farmers Protest) ಮುಂದಾಗಿದ್ದಾರೆ.
ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪಂಜಾಬ್​ನಿಂದ ನೂರಾರು ರೈತರು, ದೆಹಲಿಯತ್ತ ಬರುತ್ತಿದ್ದಂತೆ ಅವರನ್ನು ಹರಿಯಾಣ-ದೆಹಲಿ ಗಡಿಯಾದ ಶಂಭು ಎಂಬಲ್ಲಿ ತಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ರೈತರ ಆರೋಪದ ಪ್ರಕಾರ, ನಾವು ದೆಹಲಿಗೆ ತೆರಳಿ ನಮ್ಮ ಮನವಿಯನ್ನು ಸಲ್ಲಿಸಲಿದ್ದೆವೆ. ಆದರೆ ಹರಿಯಾಣಾ ಪೊಲೀಸರು, ಪಂಜಾಬ್​ ಗಡಿಯೊಳಗೆ ನುಗ್ಗಿ ಬ್ಯಾರಿಕೇಡ್​ ಹಾಕಿದ್ದಾರೆ. ಆದರೆ ಇದನ್ನು ವಿರೋಧಿಸಬೇಕಾದ ಪಂಜಾಬ್​ ಸರ್ಕಾರ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಆರೋಪಿಸಿದ್ದಾರೆ.
ಈ ಒಪ್ಪಂದಕ್ಕೆ ನಮ್ಮ ಸಮ್ಮತಿಯಿಲ್ಲ!
ಫೆಬ್ರುವರಿ 2026 ರಂದು ಭಾರತ ಮತ್ತು ಅಮೆರಿಕ ನಡುವೆ ಆಹಾರ, ಕೃಷಿ, ಡೈರಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಾರಿ ಒಪ್ಪಂದವಾಗಿದೆ. ಆದರೆ ಈ ಒಪ್ಪಂದಕ್ಕೆ ಭಾರತದ ರೈತರ ಒಪ್ಪಿಗೆಯಿಲ್ಲ. ಅಮೆರಿಕ ಜೊತೆ ಮಾಡಿಕೊಂಡ ಒಪ್ಪಂದ ಜಾರಿಯಾದರೆ, ನಮ್ಮ ಮಾರುಕಟ್ಟೆಯಲ್ಲಿ ಕೇವಲ ವಿದೇಶಿ ಉತ್ಪನ್ನಗಳೇ ಇರುತ್ತದೆ. ನಾವು ಈ ಮಾರುಕಟ್ಟೆಯಿಂದ ಹೊರ ಹೋಗುತ್ತೆವೆ ಎನ್ನುವುದು ರೈತರ ವಾದವಾಗಿದೆ.
ಇಂದಿಗೂ ಭಾರತದ ಸುಮಾರು 8 ಕೋಟಿ ಕುಟುಂಬಗಳು ತಾವು ಬೆಳೆಯುವ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಂತರ ತಾವು ಊಟ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ನಾವು ಅಮೆರಿಕದ ಕಂಪನಿಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಈ ಒಪ್ಪಂದವನ್ನು ಭಾರತ ಮುರಿಯಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net