ವಯೋಸಹಜ ಖಾಯಿಲೆ; ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಮತ್ತು ನಟ ಭಾರತಿರಾಜ(84) ನಿಧನ | Bharathiraja
ಭಾರತಿರಾಜ
Published on:
Copied
Follow Us
ಚೆನ್ನೈ: ತಮಿಳು ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ ಮತ್ತು ನಟ ಭಾರತಿರಾಜ(Bharathiraja) ಅವರು ಮಂಗಳವಾರ(ಜೂ. 09) ತಡರಾತ್ರಿ ಚೆನ್ನೈನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಭಾರತಿರಾಜ ಅವರ ನಿಧನದ ಸುದ್ದಿ ತಮಿಳು ಚಲನಚಿತ್ರೋದ್ಯಮವನ್ನು ಮಾತ್ರವಲ್ಲದೆ ದೇಶಾದ್ಯಂತ ಚಲನಚಿತ್ರ ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿದೆ. ಇಂದು (ಬುಧವಾರ) ಅವರ ಅಂತ್ಯಕ್ರಿಯೆ ನಡೆಯಲಿದೆ. ಭಾರತಿರಾಜ ಅವರ ನಿಧನಕ್ಕೆ ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಉಸಿರಾಟದ ತೊಂದರೆ ಮತ್ತು ಆಸ್ತಮಾದಿಂದಾಗಿ ಭಾರತಿರಾಜ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ವಯಸ್ಸಾದಂತೆ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗುತ್ತಿತ್ತು ಎನ್ನಲಾಗಿದೆ.
2025 ಮಾರ್ಚ್ನಲ್ಲಿ ಭಾರತಿರಾಜ ಅವರ ಮಗ ಮನೋಜ್ ಕೇವಲ 48 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅಂದು ಮಗನ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ತೀವ್ರ ಯಾತನೆಯ ದೃಶ್ಯಗಳು ಎಲ್ಲರನ್ನೂ ಆಘಾತಗೊಳಿಸಿದ್ದವು. ಮಗನ ದುಃಖದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದ ಭಾರತಿರಾಜ ಅವರ ಆರೋಗ್ಯ ತೀವ್ರ ದುರ್ಬಲವಾಗಿತ್ತು ಎನ್ನಲಾಗಿದೆ.
ಕೊತಯ ಜೀವತಾಳು ಚಿತ್ರದ ಮೂಲಕ ಟಾಲಿವುಡ್ ಎಂಟ್ರಿ
1977ರಲ್ಲಿ ತೆರೆಕಂಡ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಭಾರತಿರಾಜ ಉತ್ತಮ ಹೆಸರು ಮಾಡಿದ್ದಾರೆ. ಕೋತ ಜೀವಿತಾಲು ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು.
ಸೀತಕೋಕ ಚಿಲುಕ, ಆರಾಧನಾ ಮತ್ತು ಜಮದಗ್ನಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೀತಕೋಕ ಚಿಲುಕ ಚಿತ್ರಕ್ಕಾಗಿ ಭಾರತಿರಾಜ ಅವರಿಗೆ ಆಂಧ್ರ ಪ್ರದೇಶ ನಂದಿ ಪ್ರಶಸ್ತಿ ನೀಡಿದೆ. 2004ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ (ಏಜೆನ್ಸೀಸ್).