ರೈಲ್ವೆ ನಿಲ್ದಾಣದಲ್ಲಿ ನಕಲಿ TTE ದರ್ಬಾರ್‌: ಅರ್ಧ ಗಂಟೆಯಲ್ಲಿ ವಸೂಲಿ ಮಾಡಿದ ದಂಡ ಎಷ್ಟು ಗೊತ್ತಾ? ವಿಡಿಯೋ ವೈರಲ್​!Fake TTE Viral Video

ನಕಲಿ ಟಿಟಿಇ (Fake TTE) ವೇಷ ಧರಿಸಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿದ ಯುವಕ!
ನಕಲಿ ಟಿಟಿಇ (Fake TTE) ವೇಷ ಧರಿಸಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿದ ಯುವಕ!
Published on

ಪ್ರಮುಖ ಮುಖ್ಯಾಂಶಗಳು

  • ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ನಕಲಿ TTE ಹಾವಳಿ
  • ನಕಲಿ ಟಿಟಿಇ (Fake TTE) ವೇಷ ಧರಿಸಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿದ ಯುವಕ!
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಪಾಟ್ನಾ: ಭಾರತೀಯ ರೈಲ್ವೆ ವ್ಯವಸ್ಥೆಯ ಬೆನ್ನೆಲುಬು ಯಾರೆಂದು ಕೇಳಿದರೆ ಅದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಅದರಲ್ಲಿಯೂ ಪ್ರಯಾಣ ಟಿಕೆಟ್ ಪರೀಕ್ಷಕ ಅಥವಾ ಟಿಟಿಇ ಎಂದರೆ ತಪ್ಪಾಗದು. ರೈಲ್ವೆ ಪ್ರಯಾಣ ಮಾಡುವ ಪ್ರತಿ ಪ್ರಯಾಣಿಕ ಟಿಕೆಟ್​ ಪಡೆದಿದ್ದಾನೆಯೇ? ಇಲ್ಲವೇ? ಎಂದು ಪರಿಶೀಲಿಸುವುದು ಇವರ ಬಹುಮುಖ್ಯ ಕರ್ತವ್ಯವಾಗಿರುತ್ತದೆ.
ಒಂದು ವೇಳೆ ಟಿಕೆಟ್​ ಪಡೆಯದೆ ರೈಲನ್ನು ಏರಿದ ಪ್ರಯಾಣಿಕರಿಗೆ ದಂಡ ವಿಧಿಸುವ ಅಧಿಕಾರ ಕೂಡ ಇವರಿಗೆ ಇರುತ್ತದೆ. ಆದರೆ ಇತ್ತೀಚೆಗೆ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ ನಕಲಿ ಟಿಟಿಇ (Fake TTE Viral Video) ವೇಷ ಧರಿಸಿ ದಂಡ ವಿಧಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವಿವಾದಕ್ಕೆ ದಾರಿ ಮಾಡಿ ಕೊಟ್ಟಿದೆ.

ವಿಡಿಯೋನಲ್ಲೇನಿದೆ?

ಈ ವಿಡಿಯೋವನ್ನು ಶಿವಂ ಗುಪ್ತಾ ಎಂಬ ಇನ್ಪ್ಫೂಯೇನ್ಸರ್​​ ಸೆರೆಹಿಡಿದಿದ್ದು, ಈ ಶಿವಂ ಟಿಟಿಇ ರೀತಿಯಲ್ಲಿ ಬಿಳಿ ಬಣ್ಣದ ಶರ್ಟ್​ ಕಪ್ಪು ಕೋಟ್​ ಧರಿಸಿ, ನಕಲಿ ಐಡಿಕಾರ್ಡ್​ನ್ನು ಕುತ್ತಿಗೆಗೆ ಸಿಕ್ಕಿಸಿಕೊಂಡು ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ನಿಂತಿರುವ ಪ್ರಯಾಣಿಕರ ಟಿಕೆಟ್​ ಪರಿಶೀಲನೆಗೆ ಮುಂದಾಗಿದ್ದಾನೆ.
ಟಿಕೆಟ್​ ಹೊಂದಿರುವ ಪ್ರಯಾಣಿಕರು ತಮ್ಮ ಟಿಕೆಟ್​ನ್ನು ಶಿವಂನಿಗೆ ತೋರಿಸಿದರೆ, ಟಿಕೆಟ್​ ಇಲ್ಲದ ಪ್ರಯಾಣಿಕರಿಂದ ಶಿವಂ 500 ರೂಪಾಯಿ ದಂಡ ವಸೂಲು ಮಾಡಿದ್ದಾರೆ, ಹೀಗೆ ಕೇವಲ ಅರ್ಧ ಗಂಟೆಯಲ್ಲಿ ಶಿವಂ ಸುಮಾರು 1,200 ಪಡೆದಿದ್ದಾನೆ. ಇದು ಯಾವುದೇ ಪ್ರಾಂಕ್ ವಿಡಿಯೋನಲ್ಲ, ಬದಲಿಗೆ ಜನರನ್ನು ಜಾಗ್ರತರಾಗಿಸಲು ಮಾಡಿರುವ ವಿಡಿಯೋ ಎಂದು ಹೇಳಿದ್ದಾನೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಬಾಕ್ಸ್​ ತುಂಬಿಸುವ ಕೆಲಸಕ್ಕೆ ಇಳಿದ್ದಿದ್ದಾರೆ. ನಮ್ಮ ಜನಕ್ಕೆ ರೈಲ್ವೆ ನಿಲ್ದಾಣದಲ್ಲಿ ಕಪ್ಪು ಕೋಟ್​ ಹಾಕಿಕೊಂಡು ಯಾರೆ ಬಂದರು ಅವರು ಟಿಟಿಇ ರೀತಿಯಲ್ಲೇ ಕಾಣಿಸುತ್ತಾರೆ ಎಂದು ಒಬ್ಬ ಬಳಕೆದಾರರು ವಿಷಾಧ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಜನರನ್ನು ಮೋಸ ಮಾಡುವುದು ಎಷ್ಟು ಸುಲಭದ ಕೆಲಸ ಎಂದು ಈ ವಿಡಿಯೋನೇ ಸಾಕ್ಷಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಅವನು ಜನರಿಂದ ದುಡ್ಡನ್ನು ಪಡೆಯುತ್ತಿದ್ದರೂ ಒಬ್ಬನೇ ಒಬ್ಬ ಇತರ ಟಿಟಿಇ ಆಗಲಿ, ರೈಲ್ವೆ ಪೊಲೀಸ್​ ಆಗಲಿ ಆಗಮಿಸಲಿಲ್ಲ. ಇದು ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net