ಯಾರಾದ್ರೂ 500 ರೂಪಾಯಿಗೆ ಚೇಂಜ್​ ಕೊಡಿ ಅಂದ್ರೆ ಕೊಡ್ತೀರಾ? ಅದಕ್ಕೂ ಮುನ್ನ ಈ ಕರಾಳ ಸತ್ಯವನ್ನೊಮ್ಮೆ ತಿಳ್ಕೊಳ್ಳಿ! Rs 500 Note

ಹೈದರಾಬಾದ್‌ನ ಜನನಿಬಿಡ ಪ್ರದೇಶವಾದ ಬೀಗಮ್ ಬಜಾರ್‌ನ ಛತ್ರಿ ವಲಯದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಜಸ್ಥಾನ ಮೂಲದ 21 ವರ್ಷದ ವಿಕ್ರಮ್ ಎಂಬ ಯುವಕನನ್ನು ವಶಕ್ಕೆ ಪಡೆದು ತೀವ್ರ ತರಾಟೆ ತೆಗೆದುಕೊಂಡರು. ಈ ವೇಳೆ ಆತನ ಬಳಿ ಇದ್ದ 16 ನಕಲಿ 500 ರೂಪಾಯಿ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
Rs 500 Note
ಸಾಂದರ್ಭಿಕ ಚಿತ್ರ
Published on: 

ಹೈದರಾಬಾದ್​: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಜನಸಾಮಾನ್ಯರನ್ನು ಮತ್ತು ಮುಗ್ಧ ಸಣ್ಣ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ನಕಲಿ ನೋಟುಗಳನ್ನು ( Rs 500 Note ) ಚಲಾವಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಗದು ವಿನಿಮಯದ ವೇಳೆ ಯಾವುದೇ ಅನುಮಾನ ಬಾರದಂತೆ ತುಂಬಾ ಎಚ್ಚರಿಕೆ ವಹಿಸುತ್ತಿದ್ದ ಖದೀಮರ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ಹೈದರಾಬಾದ್‌ನ ಜನನಿಬಿಡ ಪ್ರದೇಶವಾದ ಬೀಗಮ್ ಬಜಾರ್‌ನ ಛತ್ರಿ ವಲಯದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಜಸ್ಥಾನ ಮೂಲದ 21 ವರ್ಷದ ವಿಕ್ರಮ್ ಎಂಬ ಯುವಕನನ್ನು ವಶಕ್ಕೆ ಪಡೆದು ತೀವ್ರ ತರಾಟೆ ತೆಗೆದುಕೊಂಡರು. ಈ ವೇಳೆ ಆತನ ಬಳಿ ಇದ್ದ 16 ನಕಲಿ 500 ರೂಪಾಯಿ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಆ ನೋಟುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Also Read
ಮಲಗುವಾಗ ತಲೆ ಯಾವ ದಿಕ್ಕಿಗೆ ಇರಬೇಕು? ವಾಸ್ತು ಹೇಳುವ ನಿಯಮದ ಹಿಂದಿನ ಅಸಲಿ ರಹಸ್ಯವೇನು? Vastu Sleeping Directions
Rs 500 Note

ಈ ವಂಚಕ ಗ್ಯಾಂಗ್, ಬೀದಿಬದಿ ವ್ಯಾಪಾರಿಗಳು ಹಾಗೂ ಸಣ್ಣ ಪುಟ್ಟ ಅಂಗಡಿ ಮಾಲೀಕರನ್ನೇ ತಮ್ಮ ಮುಖ್ಯ ಟಾರ್ಗೆಟ್​ ಆಗಿ ಮಾಡಿಕೊಂಡಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುವ ಮರೆಯಲ್ಲಿ ಅಸಲಿ 500 ರೂಪಾಯಿ ನೋಟಿನ ಬದಲಿಗೆ ಈ ನಕಲಿ ನೋಟುಗಳನ್ನು ನೀಡಿ, ಅಂಗಡಿಯವರಿಂದ 400 ರೂ.ಗಳ ಅಸಲಿ ಚಿಲ್ಲರೆ ಹಣವನ್ನು ಪಡೆದು ಪರಾರಿಯಾಗುವುದು ಇವರ ಕೈಚಳವಾಗಿತ್ತು. ವ್ಯಾಪಾರಿಗಳು ತಮ್ಮ ದಿನನಿತ್ಯದ ಆತುರ ಮತ್ತು ಬಿಡುವಿಲ್ಲದ ಕೆಲಸದಲ್ಲಿ ನೋಟುಗಳನ್ನು ಸರಿಯಾಗಿ ಪರಿಶೀಲಿಸುವುದಿಲ್ಲ ಎನ್ನುವುದನ್ನೇ ಈ ಕಳ್ಳರು ಬಂಡವಾಳ ಮಾಡಿಕೊಂಡಿದ್ದರು.

ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಈ ಕಳಪೆ ನೋಟುಗಳ ಜಾಲದ ಹಿಂದೆ ದೊಡ್ಡ ಸೂತ್ರಧಾರನಿರುವುದು ಬಹಿರಂಗಗೊಂಡಿದೆ. ಅಶೋಕ್ ಎಂಬ ಮುಖ್ಯ ಆರೋಪಿಯು ಇಂತಹ ನಕಲಿ ನೋಟುಗಳನ್ನು ಸಪ್ಲೈ ಮಾಡುತ್ತಿದ್ದರೆ, ವಿಕ್ರಮ್‌ ಎಂಬ ಆರೋಪಿ ಅವುಗಳನ್ನು ನಗರದ ವಿವಿಧ ಭಾಗಗಳಲ್ಲಿ ಚಲಾಯಿಸುತ್ತಿದ್ದನು ಎಂಬ ಮಹತ್ವದ ಮಾಹಿತಿ ಸಿಕ್ಕಿದೆ. ಸದ್ಯ ತಲೆಮರೆಸಿಕೊಂಡಿರುವ ಮಾಸ್ಟರ್‌ಮೈಂಡ್ ಅಶೋಕ್‌ಗಾಗಿ ಹೈದರಾಬಾದ್ ಪೊಲೀಸರ ವಿಶೇಷ ತಂಡಗಳು ತೀವ್ರ ಶೋಧ ಕಾರ್ಯವನ್ನು ಮುಂದುವರೆಸಿವೆ.

Also Read
ದುಬಾರಿ ಸೂಪರ್‌ಫುಡ್‌ ಬೇಡವೇ ಬೇಡ: ಈ ಒಂದು ಸಾಮಾನ್ಯ ಹಣ್ಣಿನಲ್ಲಿದೆ ನಮ್ಮೆಲ್ಲರ ಆರೋಗ್ಯದ ಗುಟ್ಟು..! Healthy Fruits
Rs 500 Note

ಈ ಘಟನೆಯ ಹಿನ್ನೆಲೆಯಲ್ಲಿ ನಗರದ ನಿವಾಸಿಗಳು ಮತ್ತು ವಿಶೇಷವಾಗಿ ಸಣ್ಣ ಪುಟ್ಟ ವ್ಯಾಪಾರಿಗಳು ಗ್ರಾಹಕರಿಂದ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಒಂದು ವೇಳೆ ಯಾವುದೇ ವ್ಯಕ್ತಿಗಳ ಮೇಲೆ ಅನುಮಾನ ಬಂದ ಕೂಡಲೇ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಈ ರೀತಿಯ ವಂಚನೆಗಳಿಂದ ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಲಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net